• 08251 236599
  • 08251 236444
  • vvsputtur@gmail.com

ಮಕರ ಸಂಕ್ರಮಣ ಉತ್ಸವ

ಉಪ್ಪಿನಂಗಡಿ : ಪ್ರಾಕೃತಿಕ ಹಾಗೂ ಧಾರ್ಮಿಕವಾಗಿ ಮಹತ್ವವುಳ್ಳ ಮಕರ ಸಂಕ್ರಮಣ ಉತ್ಸವವನ್ನು ಸಾಮೂಹಿಕವಾಗಿ ಆಚರಿಸುವುದರಿಂದ ಸಮಾಜದ ಸ್ವಾಸ್ಥ್ಯ ಬೆಳಗುವುದು. ರಾತ್ರಿ ಕಡಿಮೆಯಾಗಿ ಹಗಲು ಹೆಚ್ಚಾಗುವ ಈ ಸಮಯದಲ್ಲಿದೇವತಾ ಶಕ್ತಿ ಯಾ ಸಾತ್ವಿಕ ಶಕ್ತಿಗಳು ಮೇಲೈಸಲಿರುವ ಸಂಕೇತವೂ ಇದೆ. ಎಂದುಉದ್ಯಮಿ, ಚಿಂತಕ ಮಿತ್ರಸೇನ್‌ ಜೈನ್ ತಿಳಿಸಿದರು.  ಅವರು ಸೋಮವಾರದಂದು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶುಮಂದಿರದಲ್ಲಿ  ನಡೆದ ಮಕರ ಸಂಕ್ರಮಣ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು.

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಯಕ್ಷಗಾನ ಕಲಾವಿದ ಅಂಬಾಪ್ರಸಾದ್ ಪಾತಾಳ ರವರು, ಸೂರ್ಯನ ಚಲನೆ ಪ್ರಾಕೃತಿಕ ಬದಲಾವಣೆಯನ್ನು ಹೇಗೆ ಉಂಟು ಮಾಡುತ್ತಿದೆಯೋ ಹಾಗೇ ಮಾನವ ಜೀವನದಲ್ಲಿ ಬದಲಾವಣೆಯನ್ನು ಮೂಡಿಸುತ್ತದೆ. ಗತಿಸಿದ ತಂದೆಗೆ ಮೋಕ್ಷ ಬಯಸುವ ಈ ಹಬ್ಬದಲ್ಲಿ ವಿವೇಕದಿಂದ ವಿನಾಶವನ್ನುತಡೆಯುವ ಸಂದೇಶವೂ ಇದೆ ಎಂದರು.

ಸಂಕ್ರಾಂತಿ ಹಬ್ಬದ ಈ ಕಾರ್ಯಕ್ರಮದಲ್ಲಿ ಸಮಾಜ ಪರಿವರ್ತನೆಯ ಕೈಂಕರ್ಯ ತೊಟ್ಟ ಭಗಿನಿ ಪುಷ್ಪಲತಾ ಮಾತಾಜಿ ಮತ್ತು ಶ್ರೀಮತಿ ಚಂದ್ರಾವತಿಯವರನ್ನು ಶಿಶುಮಂದಿರ ಸಮಿತಿ ಗೌರವಾಧ್ಯಕ್ಷಯು ರಾಮರವರು ವಸ್ತ್ರ- ಪುಷ್ಪವನ್ನಿತ್ತು ಗೌರವಿಸಿದರು. ಸಮಿತಿ ಅಧ್ಯಕ್ಷ ಮನೋಜ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿ ಹಬ್ಬಗಳನ್ನು ಏಕೀಭಾವದಿಂದ ಆಚರಿಸಿದಾಗ, ಸಾಮರಸ್ಯ ಭಾವ ಮೊಳಗಿ ಬ್ರಾತೃತ್ವ ಬೆಳಗುವುದು ಎಂದರು.  ಶ್ರೀಮತಿ ಮಮತಾ ಸ್ವಾಗತಿಸಿ, ಶ್ರೀಮತಿ ರವಿಕಲಾ ವಂದಿಸಿದರು. ಯತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin