ಪುತ್ತೂರು: ಕಾಲೇಜುಗಳ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಕಛೇರಿ ಸಹಾಯಕರು, ಅಟೆಂಡರ್‍ಸ್‌ಗಳೂ ಕೂಡ ಸಂಸ್ಥೆಯ ಆಧಾರಸ್ಥಂಭಗಳು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ನುಡಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕದಿಂದ ಸಂಸ್ಥೆಯ ಕಚೇರಿ ಸಹಾಯಕರು ಮತ್ತು ಅಟೆಂಡರ್‍ಸ್‌ಗಳಿಗೆ ನಡೆಸಿದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಹಂತದಲ್ಲೂ ತಮ್ಮ ಕೆಲಸದ ಗುಣ ಮಟ್ಟವನ್ನು ಹೆಚ್ಚಿಸಲು ಮತ್ತು ನಿರಂತರವಾಗಿ ಕಾರ್ಯದ ಹೊಸ ಅನ್ವೇಷಣೆಗಾಗಿ ಇಂತಹ ಕಾರ್ಯಾಗಾರಗಳು ಉಪಯುಕ್ತ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಪ್ರಾಚಾರ್ಯ ಪ್ರೊ. ಎ.ವಿ ನಾರಾಯಣ್ ಮಾತನಾಡಿ, ಸಮಯ ಪ್ರಜ್ಞೆ ನಮಗೆ ಅಗತ್ಯ. ಸಹೋದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳ ಪೋಷಕರಿಗೆ ಗೌರವವನ್ನು ಕೊಡುವುದರಿಂದ ನಮ್ಮ ವೃತ್ತಿ ಗೌರವ ಹೆಚ್ಚುತ್ತದೆ ಎಂದರು. ನಮ್ಮ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿಕೊಂಡು ನಮ್ಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕಾಗಿದೆ ಎಂದರು.
ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ್ಚಂದ್ರ, ನರೇಂದ್ರ ಕಛೇರಿಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ, ಮಹೇಶ್, ವೆಂಕಟ್ರಮಣ ರಾವ್ ಉಪಸ್ಥಿತರಿದ್ದರು. ಕಾರ್ಯಾಗಾರದ ಸಮಾರೋಪ ಭಾಷಣವನ್ನು ಸುರೇಶ್ ಪರ್ಕಳ ಮಾಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಸಂಚಾಲಕಿ ಶ್ರೀದೇವಿ ಕಾನಾವು ವಹಿಸಿದ್ದರು.
ಉಪನ್ಯಾಸಕ ರಘುರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಡಾ. ಶೋಬಿತಾ ವಂದಿಸಿದರು. ತುಳಸಿ ನಿರ್ವಹಿಸಿದರು.
 
															 
															 
															 
															 
															