ಶಿಕ್ಷಕರ ದಿನಾಚರಣೆ

Leaf
Leaf

ಶಿಕ್ಷಕರು ಕೇವಲ ಮಾಹಿತಿಯನ್ನು ನೀಡುವ ಕಾರ್ಯವನ್ನು ಮಾಡುವುದಲ್ಲ ವಿದ್ಯಾರ್ಥಿಗಳ ಮನದಲ್ಲಿ ಉತ್ತಮ ಭಾವ ಉದ್ದೀಪನ ಮಾಡುವ ಕಾರ್ಯವನ್ನು ಮಾಡಬೇಕು. ಶಿಕ್ಷಕ ವಿದ್ಯಾರ್ಥಿಗಳ ಜೀವನಕ್ಕೆ ಕೇವಲ ಬೆಳಕನ್ನು ನೀಡುವುದಲ್ಲದೇ ಸಮಾಜಕ್ಕೆ ಆದರ್ಶವಾಗಿ ಸಮಾಜವನ್ನು ತಿದ್ದುವ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕು. ಈ ರೀತಿಯ ಆದರ್ಶವನ್ನು ಬೆಳೆಸಿಕೊಂಡವರು ಸರ್ವಪಲ್ಲಿ ರಾಧಾಕೃಷ್ಣನ್‌ರವರು. ಅವರ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಮಧುಕರ ಸಭಾಂಗಣದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ವಿನೋದ್ ತಿಳಿಸಿದರು.

DSCN0381

DSCN0374

ಪ್ರಾರಂಭದಲ್ಲಿ ವಿದ್ಯಾರ್ಥಿ ಪ್ರಮುಖರು ಎಲ್ಲಾ ಶಿಕ್ಷಕರಿಗೆ ಹೂಗುಚ್ಚ ನೀಡಿ ಆಶೀರ್ವಾದ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶ್ರೀ ರಮೇಶ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. 9 ನೇ ನಿವೇದಿತಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ದೀಕ್ಷಿತ್ ವಂದಿಸಿದರು.

Leave a Reply

Your email address will not be published. Required fields are marked *

Related News

News
25/09/2026

ತೆಂಕಿಲ ವಿವೇಕಾನಂದ ಆ.ಮಾ. ಶಾಲೆಯ ಕ್ಷಮೇತ್ ಜೈನ್ ರಾಷ್ಟ್ರೀಯ ಮಟ್ಟಕ್ಕೆ.

Events
21/09/2026

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.)

News
18/08/2026

80 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ- ಧ್ವಜಾರೋಹಣ