ಉಪ್ಪಿನಂಗಡಿ: ಭಕ್ತಿ-ಶಕ್ತಿ-ಯುಕ್ತಿ ಯಿಂದ ಧರ್ಮ ಸಂಸ್ಥಾಪನೆಗೈದ ಶ್ರೀ ಕೃಷ್ಣನ ಜೀವನವೇ ಮನು ಕುಲಕ್ಕೆ ಆದರ್ಶ ಪ್ರಾಯವಾಗಿದ್ದು, ಸಮಾಜದಲ್ಲಿ ಮೇಲೈಸುವ ದುಷ್ಠ ಶಕ್ತಿಗಳನ್ನು ನಿಗ್ರಹಿಸುವಲ್ಲಿ ಇಡೀ ಸಮಾಜ ಶ್ರೀ ಕೃಷ್ಣನ ಆದರ್ಶವನ್ನು ಪಾಲಿಸಬೇಕಾಗಿದೆ ಎಂದು ಚಿಂತಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವಾಹ ಚಂದ್ರಶೇಖರ್ ಮರ್ಧಾಳ ತಿಳಿಸಿದರು.
ಅವರು ಉಪ್ಪಿನಂಗಡಿಯ ಶ್ರೀ ಮಾಧವ ಶಿಶುಮಂದಿರದಲ್ಲಿ ಬುಧವಾರದಂದು ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಧಾಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು.

ಸಮಾಜದ ನಾನಾ ಕ್ಷೇತ್ರದಲ್ಲಿ ಸಮಾಜವನ್ನು ದುರ್ಬಲಗೊಳಿಸುವ ಷಡ್ಯಂತ್ರ ನಿತ್ಯ ನಿರಂತರ ನಡೆಯುತ್ತಿದೆ. ಭಾರತದ ಸುದೃಢತೆಗೆ ಮೂಲ ಕಾರಣವಾಗಿರುವಇಲ್ಲಿನ ಸಂಸ್ಕೃತಿಯನ್ನು ಹಾಳುಗೆಡವಿ ರಾಷ್ಟ್ರವನ್ನು ದುರ್ಬಲಗೊಳಿಸುವ ಯತ್ನ ವ್ಯಾಪಕವಾಗಿ ನಡೆಯುತ್ತಿದೆ. ಇದರಿಂದ ವಿಶ್ವ ಮಾನ್ಯವೆನಿಸಿದ ನಮ್ಮದೇಶ ನಮ್ಮ ಸಂಸ್ಕೃತಿ ಪತನದ ಭೀತಿಗೆತುತ್ತಾಗಿದೆ. ಈ ಸಂಧರ್ಭದಲ್ಲಿ ಪ್ರತಿ ಮನೆಯ ಮಾತೆಯರೂಜಾಗೃತಾಗಿ, ಮನೆಯಲ್ಲಿನ ಮಕ್ಕಳಿಗೆ ಅಗತ್ಯ ಸಂಸ್ಕಾರವನಿತ್ತು, ಸಂಸ್ಕೃತಿಯ ಹಿರಿಮೆ ಗರಿಮೆಗಳನ್ನು ತಿಳಿಸಿ, ಅನುಷ್ಠಾನಿಸುವ ಮೂಲಕ ಸವಾಲುಗಳನ್ನು ಎದುರಿಸಲು ಪಣತೊಡಬೇಕಾಗಿದೆ ಎಂದರು. ಸಮಾಜದ ರಕ್ಷಣೆ ನಮ್ಮೆಲ್ಲರ ಆದ್ಯಕರ್ತವ್ಯವಾಗಿದ್ದು, ಈ ದಿಶೆಯಲ್ಲಿ ನಮ್ಮೆದರಾಗುವಸಣ್ಣ ಸಣ್ಣ ಕಾರ್ಯಗಳನ್ನು ಶ್ರದ್ದೆ ನಿಷ್ಠಯಿಂದ ನಿರ್ವಹಿಸಬೇಕಾಗಿದೆ ಎಂದು ಕರೆ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ, ಮಾಜಿ ಪಂಚಾಯತ್ ಅಧ್ಯಕ್ಷ ರಾಮದಾಸ್ ಪೈ ರಾಮನಗರ ಮಾತನಾಡಿ, ಭರತ ಭೂಮಿಯ ಶ್ರೇಷ್ಠತೆ ಶ್ರೀ ಕೃಷ್ಣನ ಜೀವನಾದರ್ಶದಲ್ಲಿ ಅಡಗಿದೆ.ನಮ್ಮ ಭವ್ಯ ದಿವ್ಯ ಸಂಸ್ಕೃತಿಯ ರಕ್ಷಣೆ ಮತ್ತು ಅನಾವರಣದಲ್ಲಿ ಶಿಶು ಮಂದಿರದಂತಹ ಸಂಸ್ಥೆಗಳ ಶ್ರಮ ಶ್ಲಾಘನೀಯವೆನಿಸುತ್ತಿದೆ ಎಂದು ಶ್ಲಾಘಿಸಿದರು.

ಸಭಾಕಾರ್ಯಕ್ರಮದ ಪೂರ್ವದಲ್ಲಿ ಆಯೋಜಿಸಲಾದ ಶ್ರೀ ಕೃಷ್ಣ ವೇಷಧಾರಿ ಪುಟಾಣಿ ಮಕ್ಕಳ ವಿವಿಧ ಕಾರ್ಯಕ್ರಮಗಳನ್ನು ಉದ್ಯಮಿ ವೆಂಕಪ್ಪಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಶುಮಂದಿರದ ಮಾತಾಜಿ ಪುಷ್ಪಲತಾ ಎಸ್ ಹಾಗೂ ಚಂದ್ರಾವತಿರವರ ಮಾರ್ಗರ್ಶನದಲ್ಲಿ ಪುಟಾಣಿ ಮಕ್ಕಳ ಸಾಂಸ್ಕೃತಿ ಕಕಾರ್ಯಕ್ರಮ ನಡೆಯಿತು.
ಸಭೆಯಲ್ಲಿ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ಉಪಸ್ಥಿತರಿದ್ದು, ಶ್ರೀಮತಿ ನಯನ ಸ್ವಾಗತಿಸಿದರು. ಶ್ರೀಮತಿ ಪವಿತ್ರಾ ವಂದಿಸಿದರು. ಹರಿರಾಮ ಚಂದ್ರಕಾರ್ಯಕ್ರಮ ನಿರೂಪಿಸಿದರು.
 
															 
															 
															 
															 
															