80 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ- ಧ್ವಜಾರೋಹಣ

ಪುತ್ತೂರು.ಆ,15 : ಅನೇಕ ಕ್ರಾಂತಿವೀರರ ತ್ಯಾಗ, ಯುವಜನರ ಬಲಿದಾನ, ರಕ್ತದ ಅರ್ಪಣೆಯ ಪ್ರತಿರೂಪ ಸ್ವತಂತ್ರ್ಯ ಭಾರತ. ಸ್ವಾತಂತ್ರ್ಯ ದೊರಕಿ 80 ವರ್ಷ ಕಳೆದರೂ ದೇಶದಲ್ಲಿ ಬ್ರಿಟಿಷರ ಸಿದ್ಧಾಂತ ಇಂದಿಗೂ ನಮ್ಮ ಆಡಳಿತಾತ್ಮಕ, ಸಾಂಸ್ಕೃತಿಕ, ಶೈಕ್ಷಣಿಕ ವ್ಯವಸ್ಥೆಯನ್ನು ಆವರಿಸಿಕೊಂಡಿದೆ. ಆದರೆ ಈ ಮನಸ್ಥಿತಿಯಿಂದ ಹೊರಬಂದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭಾರತೀಯ ಪರಿಕಲ್ಪನೆಗೆ ಹೆಚ್ಚು ಮಹತ್ವ ನೀಡುವ ಮುಖಾಂತರ ಅಭಿವೃದ್ಧಿಯ ಪಥದಲ್ಲಿ ಸಾಗುವಲ್ಲಿ ದೇಶದ ಜನತೆ ಶ್ರಮಿಸಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ಹೇಳಿದರು.ಇಲ್ಲಿನ ವಿವೇಕಾನಂದ […]