ದೇಶವೇ ಪ್ರಥಮ ಆದ್ಯತೆಯಾಗಿರಲಿ-ಡಾ. ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ರಾಮನನ್ನು ನಾವು ಸದಾ ನೆನಪಿಡಬೇಕಾದ ಅಗತ್ಯವಿದೆ. ಎಲ್ಲಾ ರೀತಿಯಿಂದ ನೋಡಿದಾಗಲೂ ರಾಮ ನಮಗೆ ಆದರ್ಶವಾಗಿ ಕಾಣುತ್ತಾನೆ. ಹಿಂದೂಗಳು ಸ್ವಧರ್ಮದ ಬಗ್ಗೆ ಅಭಿಮಾನವನ್ನು ಎಂದಿಗೂ ಹೊಂದಿರಬೇಕು. ವಿದೇಶೀಯರು ಕೂಡಾ ಇಲ್ಲಿನ ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಿಂದ ಆಕರ್ಷಿತರಾಗಿ ಭಾರತಕ್ಕೆ ಬರುತ್ತಿದ್ದಾರೆ. ಹಾಗಿದ್ದಾಗ ನಾವು ನಮಗೆ ನೆಲೆ ಕಲ್ಪಿಸಿದ ದೇಶದ ಅಭಿವೃದ್ಧಿಗಾಗಿ ಪಣತೊಡಬೇಕು. ಹಾಗೆಯೇ ನಮ್ಮ ದೇಶವೇ ನಮಗೆ ಮೊದಲ ಆದ್ಯತೆಯಾಗಲಿ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ನುಡಿದರು.ಇವರು ಪುತ್ತೂರಿನ ಕಲಾ, […]
ವಿವೇಕಾನಂದ ಕಾಲೇಜಿನಲ್ಲಿ “ವಿವೇಕ ಉದ್ಯೋಗ ಮೇಳ”

ಗ್ರಾಮೀಣ ಪ್ರದೇಶದ ಅಭಿವೃದ್ಧಿ ಅವಶ್ಯ – ಕ್ಯಾ.ಬ್ರಿಜೇಶ್ ಚೌಟಪುತ್ತೂರು, ಫೆ. 21: ಗುಡಿ ಕೈಗಾರಿಕೆಗಳಿಗೆ ಮಾರುಕಟ್ಟೆ ಒದಗಿಸುತ್ತಿರುವ ಸರಸ್ ಮೇಳದಂತಹಾ ಮೇಳಗಳು ಗ್ರಾಮೀಣಾಭಿವೃದ್ಧಿಗೆ ಸಹಕಾರಿ. ಉದ್ಯೋಗದ ಸಂದರ್ಶನ ಎಂದರೆ ಅದು ಒಂದು ಕಲಿಕೆಯೇ ಆಗಿದೆ. ಒಮ್ಮೆ ಹಿನ್ನಡೆ ಆಯಿತು ಎಂದಾದರೆ ಬದುಕು ಅಲ್ಲಿಗೆ ಮುಗಿಯಿತು ಎಂದಲ್ಲ. ಕೌಶಲ್ಯ ಹಾಗೂ ಪ್ರತಿಭೆಗಳನ್ನು ನಾವು ಬೆಳೆಸಿಕೊಳ್ಳಬೇಕು. ಉದ್ಯೋಗ ಹಾಗೂ ಇನ್ನಿತರ ಅವಕಾಶಗಳ ಬಗ್ಗೆ ನಾವು ಜಾಗೃತರಾಗಬೇಕು. ಹಾಗೂ ಇತರರಿಗೆ ಆ ಬಗ್ಗೆ ಅರಿವು ಮೂಡಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ […]
ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ

ಪುತ್ತೂರು, ಫೆ. 20: ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ನಿರ್ಮಿಸಲಾರ. ಅಂತೆಯೇ ಚರಿತ್ರೆಯನ್ನು ಓದದವನು ಚರಿತ್ರೆಯ ಬಗ್ಗೆ ಹೇಳಲು ಅರ್ಹನಲ್ಲ. ಭಾರತದದುದ್ದಕ್ಕೂ ಶಿವಾಜಿಯನ್ನು ಪೆÇೀಜಿಸುವವರೇ ಹೆಚ್ಚು. ಭಾರತದ ಮೇಲೆ ಬಹಳಷ್ಟು ಯುದ್ಧಗಳಾಗಿವೆ. ಅವೆಲ್ಲವನ್ನು ಚಾಕಚಕ್ಯತೆಯಿಂದ ಸರಿಪಡಿಸಿಕೊಂಡು ಹೋದವರು ಶಿವಾಜಿ ಮಹಾರಾಜ್. ಶಿವಾಜಿ ಭಾರತಕ್ಕೆ ಮಾತ್ರ ಸೀಮಿತವಲ್ಲದೇ, ಇಡೀ ಪ್ರಪಂಚವೇ ಅವರನ್ನು ತಿಳಿದಿದೆ. ಶಿವಾಜಿಯ ಧ್ಯೇಯ, ಆತ್ಮ ವಿಶ್ವಾಸವನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ, ಶಿವಾಜಿ ಅಂತರ್ ಶಕ್ತಿ ಹಾಗೂ ಶ್ರದ್ಧೆ ನಮ್ಮೆಲ್ಲರಲ್ಲೂ ಮೂಡಬೇಕು ಎಂದು ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ […]