ವಿವೇಕಾನಂದ ಕಾಲೇಜಿನಲ್ಲಿ ವೀರ ರಾಣಿ ಅಬ್ಬಕ್ಕ- ರಾಷ್ಟ್ರೀಯ ವಿಚಾರ ಸಂಕಿರಣ

ಪುತ್ತೂರು, ಫೆ 16: ನಾವು ಅಗತ್ಯವಾಗಿ ತಿಳಿಯಬೇಕಿದ್ದ ಹಾಗೂ ಯುವ ಜನಾಂಗ ಅರಿಯಬೇಕಾದ ಚರಿತ್ರೆಯನ್ನು ಮರೆಯಾಗಿಸಿದ್ದು ವಿಪರ್ಯಾಸ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ಪರಕೀಯರ ವಿರುದ್ಧ ಕೆಚ್ಚೆದೆಯ ಹೋರಾಟ ಪ್ರಾರಂಭಿಸಿದವಳು ಅಬ್ಬಕ್ಕ. ತಾನು ಒಬ್ಬನೇ ನಿಂತು ಬ್ರಿಟೀಷರಿಗೆ ಸವಾಲೆಸೆದ ಕಿತ್ತೂರು ಚೆನ್ನಮ್ಮನಂಥವರ ಉದಾಹರಣೆಯನ್ನು ನಾವು ಗಮನಿಸಬಹುದು.ನಮ್ಮ ಬದುಕಿಗೆ ಪ್ರೇರಣೆಯಾಗಬಲ್ಲ ನಮ್ಮ ಚರಿತ್ರೆಯನ್ನು ನಾವು ಅಗತ್ಯವಾಗಿ ತಿಳಿಯಬೇಕು ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ,ವಾಣಿಜ್ಯ ಮಹಾವಿದ್ಯಾಲಯ […]