ಪುತ್ತೂರಿನಲ್ಲಿ ಮೊಳಗಿದ ಶತ ಜಯಘೋಷ್ರಾಜ್ಯದಲ್ಲೇ ಮೊದಲ ಬಾರಿಗೆ 1500 ವಿದ್ಯಾರ್ಥಿಗಳಿಂದ ಘೋಷ್ ಪಥಸಂಚಲನ

ಪುತ್ತೂರು, ಜನವರಿ13: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇಲ್ಲಿನ ಸಮೂಹ ಸಂಸ್ಥೆಗಳು ಪ್ರತಿವರ್ಷ ನಿರಂತರವಾಗಿ ರಾಷ್ಟ್ರ ಸಂತ ವಿವೇಕಾನಂದರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ. ಈ ಭಾರಿ ವಿವೇಕಾನಂದ ಜಯಂತಿಯ ಅಂಗವಾಗಿ ಶತ ಜಯಘೋಷ್ ಪರಿಕಲ್ಪನೆಯಲ್ಲಿ ಘೋಷ್ ಪಥಸಂಚಲನ ಕಾರ್ಯಕ್ರಮ ನಡೆಯಿತು.ವಿವೇಕಾನಂದ ವಿದ್ಯಾಸಂಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳ ಸುಮಾರು 1500 ವಿದ್ಯಾರ್ಥಿಗಳು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾದರು.ಘೋಷ್ ಸಂಚಲನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಅನಕ, ಪಣವ, ಶಂಖ, ವಂಶಿ, ತ್ರಿಭುಜ ಮತ್ತು ಜಲ್ಲರಿ, ಕೊಳಲು ಮೊದಲಾದ ವಾದ್ಯಪರಿಕರಗಳ ಜೊತೆ […]

ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ20 ಸಾವಿರ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಸಮೂಹ ಗಾಯನ ಪುತ್ತೂರು, ಜ.12; ಭಾರತದ ಆತ್ಮವಾದ ಧರ್ಮ, ಸಂಸ್ಕøತಿಯನ್ನು ಜಗತ್ತಿನೆಲ್ಲೆಡೆ ಸಾರಿದ ಮಹಾನುಭಾವರು ಸ್ವಾಮಿ ವಿವೇಕಾನಂದರು. ಧರ್ಮವನ್ನೇ ತಳಹದಿಯಾಗಿರಿಸಿ, ಸಮಾಜ ಸುಧಾರಣೆ ಮಾಡಿದರು. ಅವರ ಕನಸಿನಂತೆ ಇಂದಿನ ತಲೆಮಾರು ಬದಲಾಗುತ್ತಿದೆ. ದೀರ್ಘಕಾಲದ ನಿದ್ದೆಯ ಬಳಿಕ ತಾಯಿ ಭಾರತಿ ಎಚ್ಚೆತ್ತುಕೊಳ್ಳುತ್ತಿದ್ದಾಳೆ. ಭಾರತ ಎಲ್ಲಾ ರಂಗದಲ್ಲೂ ಕೀರ್ತಿ ಪಸರಿಸುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ, ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.ಅವರು ಪುತ್ತೂರಿನ ವಿವೇಕಾನಂದ […]

ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರ ಮತು ಪೋಷಕರ ಸಭೆ

ಪುತ್ತೂರು: ಕಾಲೇಜಿನಲ್ಲಿ ಕಲಿಯುತ್ತಿರುವ ನಿಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ದಿಯನ್ನು ತಿಳಿದು ಕೊಳ್ಳುವುದಕ್ಕಾಗಿ ಹೆತ್ತವರು ಅಥವಾ ಪೋಷಕರ ನಿಯಮಿತವಾಗಿ ಕಾಲೇಜಿನ ಸಂಪರ್ಕದಲ್ಲಿರುವುದು ಆವಶ್ಯಕ ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ ಮತ್ತು ಪೇರೆಂಟ್ ರಿಲೇಶನ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಸಾವರ್ಕರ್ ಸಭಾಭವನದಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರ […]

ಪುರುಷರ ವಾಲಿಬಾಲ್‍ನಲ್ಲಿ ವಿಟಿಯು ತಂಡಕ್ಕೆ ಆಯ್ಕೆ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಅಖಿಲೇಶ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಪುರುಷರ ವಾಲಿಬಾಲ್ ತಂಡಕ್ಕೆ ಆಯ್ಕೆಗೊಂಡಿದ್ದಾರೆ.ಆಂಧ್ರಪ್ರದೇಶÀ ಕಾಕಿನಾಡದ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಡಿಸೆಂಬರ್ 10 ರಿಂದ 14ರ ವರೆಗೆ ನಡೆಯುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಪುರುಷರ ವಾಲಿಬಾಲ್ ಚಾಂಪಿಯನ್‍ಶಿಪ್ 2025-26 ರಲ್ಲಿ ಇವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಾರೆ.ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು […]

ಕಡಬ: ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವು ಡಿಸೆಂಬರ್ 16ರಂದು ಹನುಮಾನ್ ನಗರದ ಮೈದಾನದಲ್ಲಿ ನಡೆಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ನಿಕಟಪೂರ್ವ ಸಂಚಾಲಕರು, ಪ್ರಸ್ತುತ ವಿವೇಕಾನಂದ ವಿದ್ಯಾವರ್ಧಕ ಸಂಘದ ಪುತ್ತೂರು (ರಿ.) ಇದರ ಸಹಕಾರ್ಯನಿರ್ವಹಣಾಧಿಕಾರಿಯಾಗಿರುವ ಶ್ರೀ ವೆಂಕಟ್ರಮಣರಾವ್ ಮಂಕುಡೆ ವಹಿಸಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕಡಬ ವಲಯದ ಪ್ರೌಢಶಾಲಾ ವಿಭಾಗದ ನೋಡೆಲ್ ಅಧಿಕಾರಿಗಳಾದ ಶ್ರೀ ಲೋಕೇಶ್ ಟಿ ಎಸ್ ವಿದ್ಯಾರ್ಥಿಗಳು […]

ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ರಥಯಾತ್ರೆ ಜನಜಾಗೃತಿ ಕಾರ್ಯಕ್ರಮ

ಪುತ್ತೂರು :ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ರಥ ಯಾತ್ರೆ ಜನಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ಆಗಮಿಸಿದ ರಥವನ್ನು ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನಡೆಸಿದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಬೆಂಗಳೂರಿನ ಪರಿವರ್ತನಾ ಸೇವಾ ಟ್ರಸ್ಟ್ ನ ಸಂಯೋಜಕರಾದ ಸಂದೇಶ್ ರವರು ತಮ್ಮ ಅತಿಥೇಯ ಮಾತುಗಳನ್ನಾಡುವ ಸಂದರ್ಭದಲ್ಲಿ “ಯುವ ಸಮುದಾಯ ಮಾದಕ ವ್ಯಸನದಿಂದ ಮುಕ್ತವಾಗಬೇಕು ಎಂಬ ಆಶಯದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಮಾದಕ ವ್ಯಸನದಿಂದ ಸಿಗುವ ಕ್ಷಣಿಕ […]

ವಿಸಿಇಟಿಗೆ ಎನ್‍ಬಿಎ ಮಾನ್ಯತೆ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು (National Board of Accreditation) ಮೂರು ಶೈಕ್ಷಣಿಕ ವರ್ಷಗಳಿಗೆ ಮಾನ್ಯತೆಯನ್ನು ನೀಡಿದೆ. ಈ ಹಿಂದೆ 2019 ರಿಂದ 2022 ಹಾಗೂ 2022 ರಿಂದ 2025 ವರೆಗೆ ಎರಡು ಬಾರಿ ರಾಷ್ಟ್ರೀಯ ಮಾನ್ಯತೆ ದೊರಕಿತ್ತು, ಈಗ ಮತ್ತೆ ಮೂರು ವರ್ಷಗಳ ಕಾಲಕ್ಕೆ ಅಂದರೆ ಜನವರಿ 2026 ರಿಂದ ಡಿಸೆಂಬರ್ 2028ರ ವರೆಗೆ ಮಾನ್ಯತೆಯನ್ನು ನೀಡಲಾಗಿದೆ.ರಾಷ್ಟ್ರೀಯ […]

ಸಪ್ತಶಕ್ತಿ ಸಂಗಮ ಕಾರ್ಯಕ್ರಮಕಡಬ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ದಿನಾಂಕ 3.1.2026 ರಂದು ಶನಿವಾರ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ, ಹನುಮಾನ್ ನಗರ, ಕಡಬದಲ್ಲಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಾತೆಯರನ್ನು ಆರತಿ ಬೆಳಗಿ , ಅರಿಶಿನ , ಕುಂಕುಮ ಬೆಲ್ಲ ನೀರನ್ನು ಕೊಟ್ಟು ಸತ್ಕರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ವಿದ್ಯಾರ್ಥಿಗಳಿಂದ ಸರಸ್ವತಿ ವಂದನಾ ನಡೆಯಿತು. ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಯನ್ನು ನೆರೆದಿದ್ದ ಮಾತೆಯರಿಗೆ ಮಾತಾಜಿ ಶ್ರೀಮತಿ ಪವಿತ್ರ ಎನ್ ರೈ ಇವರು […]

ವಿವೇಕಾನಂದ ಪಾಲಿಟೆಕ್ನಿಕ್‍ನಲ್ಲಿ ಎರಡು ಹೊಸ ಕೋರ್ಸ್‍ಗಳ ಸೇರ್ಪಡೆಗೆ ಪರಿವೀಕ್ಷಣಾ ತಂಡದ ಭೇಟಿ

ಪುತ್ತೂರು ; ವಿವೇಕಾನಂದ ಪಾಲಿಟೆಕ್ನಿಕ್‍ನಲ್ಲಿ 2026-27ರ ಶೈಕ್ಷಣಿಕ ವರ್ಷಕ್ಕೆAICTE ನವದೆಹಲಿಯಿಂದ ಶಿಫಾರಸುಗೊಂಡ ಎರಡು ಹೊಸ ಕೋರ್ಸ್‍ಗಳಾದArtificial Intelligence & Machine Learning (AIML) ಹಾಗೂ “Automation & Robotics (AR)” ನ ಸೇರ್ಪಡೆಗಾಗಿ ತಾಂತ್ರಿಕ ಶಿಕ್ಷಣಮಂಡಳಿಯಿಂದ ಸ್ಥಳ ಪರಿಶೀಲನೆ ಹಾಗೂ ಮೂಲಭೂತ ಸೌಕರ್ಯಗಳ ಮಾಹಿತಿ ಪಡೆಯುವುದಕ್ಕೋಸ್ಕರ ತಾಂತ್ರಿಕ ಶಿಕ್ಷಣ ಮಂಡಳಿ ಬೆಂಗಳೂರಿನ ಉಪನಿರ್ದೇಶಕರಾದ ಡಾ| ವೈ. ಎನ್ ದೊಡ್ಡಮನಿ ಹಾಗೂ ಮೋಹನ್ ರಾಜ್ ವಿಭಾಗಾಧಿಕಾರಿ , ಸಿವಿಲ್ ವಿಭಾಗ ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ ಇವರ ತಂಡ ಕಾಲೇಜಿಗೆ […]