ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಜಿ.ಭಟ್ ನಿವೃತ್ತಿ

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಪ್ರೊ.ವಿಷ್ಣು ಗಣಪತಿ ಭಟ್ ಮೇ 31, 2025ರಂದು ಸೇವೆಯಿಂದ ನಿವೃತ್ತಿಗೊಳ್ಳುತ್ತಿದ್ದಾರೆ. ಇವರು ಮೂಲತಃ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದವರಾಗಿದ್ದು ಗಣಪತಿ ಪರಮೇಶ್ವರ ಭಟ್ಟ ಹಾಗೂ ಪಾರ್ವತಿ ಇವರ ಪುತ್ರ. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಿಕ್ಷಣ ಶ್ರೀ ಚನ್ನಕೇಶವ ಹೈಸ್ಕೂಲ್ ಇಲ್ಲಿ ಮುಗಿಸಿ ಹೊನ್ನಾವರ ಎಸ್ ಡಿ ಎಮ್ ಕಾಲೇಜ್ […]

ನಿಮ್ಮ ಗುರಿಯೇ ಸಕ್ಸಸ್ ಬೂಸ್ಟರ್: ಪ್ರೊ. ಶ್ರೀಪತಿ ಕಲ್ಲೂರಾಯ

ಪುತ್ತೂರು: ನಮ್ಮ ದೇಶದಲ್ಲಿ ಜ್ಞಾನ ಸಂಪಾದನೆಯಲ್ಲಿ ತೊಡಗಿದ್ದಾರೆಯೇ ಹೊರತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಎಡವುತ್ತಿದ್ದಾರೆ. ನಿಮ್ಮ ಕೌಶಲ್ಯವನ್ನು ದೇಶದ ಅಭಿವೃದ್ಧಿಗೆ ಬಳಸಿ. ನಿಮ್ಮ ಗುರಿಯನ್ನು ಆಗಾಗ ನೆನಪಿಸಿಕೊಳ್ಳಿ ಅದು ನಿಮ್ಮ ಯಶಸ್ಸಿಗೆ ಬೂಸ್ಟರ್‍ನಂತೆ ಕೆಲಸ ಮಾಡುತ್ತದೆ. ಸಮಾಜಕ್ಕೆ ಹೊಂದಿಕೊಂಡು ನಿಮ್ಮನ್ನು ನೀವು ಹೇಗೆ ಮುನ್ನೆಡೆಸಿಕೊಂಡು ಹೋಗುತ್ತೀರಿ ಎನ್ನುವುದೇ ನಿರ್ವಹಣೆ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು.ಪುತ್ತೂರಿನ ವಿವೇಕಾನಂದ ಕಾಲೇಜಿನ ಬಿಬಿಎ ವಿಭಾಗ, ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ವತಿಯಿಂದ “ಇಗ್ನೈಟಿಂಗ್ […]

ತಂತ್ರಜ್ಞಾನ ಬೆಳೆದಂತೆ ಉದ್ಯಮವೂ ಬೆಳೆಯುತ್ತದೆ: ಡಾ. ಬಾಲಸುಬ್ರಮಣ್ಯಂ

ಪುತ್ತೂರು: ನಮ್ಮ ಹಿರಿಯರು ಕೈಯಲ್ಲೇ ಭೂಮಿ ಅಗೆಯುತ್ತಿದ್ದರು, ಈಗ ಜೆಸಿಬಿಗಳು ಭೂಮಿಯನ್ನು ಅಗೆಯುತ್ತವೆ. ಮನುಷ್ಯರು ತಿಂಗಳುಗಟ್ಟಲೆ ಮಾಡುವ ಕೆಲಸವನ್ನು ದಿನವೊಂದರಲ್ಲೇ ಮಾಡಲು ಸಾಧ್ಯವಾಗಿದೆ. ಇದಕ್ಕೆ ಕಾರಣ ತಂತ್ರಜ್ಞಾನ. ಇದೇ ತಂತ್ರಜ್ಞಾನವೇ ಉದ್ಯಮದ ಸಕ್ಸಸ್ ಮಂತ್ರ. ಉದ್ಯಮಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಕೆಲಸ ಸರಳವಾಗುತ್ತದೆ. ಇದರ ಪ್ರತಿಯಾಗಿ ಉದ್ಯಮವೂ ಹಾಗೆಯೇ ಅಭಿವೃದ್ಧಿ ಸಾಧಿಸುತ್ತದೆ. ಹಾಗೆಯೇ ನಾವೇ ನಿರ್ಮಿಸಿದ ಯಂತ್ರಗಳಿಗೂ ನಮ್ಮದೇ ಅನ್ನುವ ಸ್ವಾಧೀನತೆ ಇದ್ದರೆ ಒಳಿತು. ಇದು ಸ್ಪರ್ಧೆಯನ್ನು ಹೆಚ್ಚಿಸುತ್ತದೆ. ತಯಾರಿಸಿದವನಿಗೆ ಹೊಸ ಗುರುತನ್ನು ನೀಡುತ್ತದೆ ಎಂದು […]

ವಿವೇಕಾನಂದ ಕಾಲೇಜಿನಲ್ಲಿ ಕಲಾಸಪ್ತ-2025

ಪುತ್ತೂರು: ಸಾಮಾಜಿಕ ಜಾಲತಾಣಗಳು ಜನರ ಗಮನವನ್ನು ಬೇಗನೆ ಸೆಳೆಯುತ್ತದೆ. ಜೊತೆಗೆ ಏಕಾಗ್ರತೆಯನ್ನೂ ಕಡಿಮೆಗೊಳಿಸುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸುವ ಹಂಬಲ ಇರುವ ಮಂದಿ, ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಭಿನ್ನವಾದ, ಉತ್ತಮ ರೀತಿಯ ಕೌಶಲ್ಯವಿರುತ್ತದೆ. ಅದನ್ನು ಒಲಿಸಿಕೊಳ್ಳುವ ಮಾರ್ಗವನ್ನು ಹುಡುಕಿಕೊಳ್ಳಬೇಕು ಎಂದು ಪುತ್ತೂರಿನ ಹೆಚ್ಚುವರಿ ಸಿವಿಲ್ ಮತ್ತು ಜೆ. ಎಂ. ಎಫ್. ಸಿ ನಾಯ್ಯಾಲಯದ ನಾಯ್ಯಾಧೀಶ ಶಿವಣ್ಣ ಹೆಚ್. ಆರ್ ಮಾತನಾಡಿದರು.ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಕಲಾ ವಿಭಾಗ, ಮಾನವಿಕ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಜರುಗಿದ […]

ಬುದ್ಧಿಯಿಂದ ಬರೆಯುವುದು ಪರೀಕ್ಷೆ, ಹೃದಯದಿಂದ ಬರೆಯುವುದು ಬದುಕು; ಡಾ. ಶ್ರೀಶ ಕುಮಾರ

ಪುತ್ತೂರು; ವಿವೇಕಾನಂದರು ಬದುಕುವ ಬದುಕಿಸುವ ದಾರಿ ತೋರಿಸಿಕೊಟ್ಟವರು. ಏಕವಚನದ ಕಡೆಯಿಂದ ಬಹುವಚನದ ಕಡೆಗೆ ನಾವು ಸಾಗಬೇಕಿದೆ. ಬುದ್ಧಿಯಿಂದ ಬರೆಯುವುದು ಪರೀಕ್ಷೆ, ಹೃದಯದಿಂದ ಬರೆಯುವುದು ಬದುಕು. ಜಗತ್ತೇ ನನ್ನ ಮನೆ ಎಂದು ಬದುಕಿದಾಗ, ವಸುಧೈವ ಕುಟುಂಬಕಂ ಎನ್ನುವುದು ಸಾಕಾರಗೊಳ್ಳುತ್ತದೆ ಎಂದು ಕಾಲೇಜಿನ ಸಂಸ್ಕøತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ ಹೇಳಿದರು.ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದ ಸಂಯೋಜನೆಯಲ್ಲಿ […]

ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ1967-70 ಸಾಲಿನ ಬಿ.ಎಸ್ಸಿಯ ಬಿಝೆಡ್ ಸಿ ಹಿರಿಯ ವಿದ್ಯಾರ್ಥಿಗಳ ಮರು ಸಮ್ಮಿಲನ

ಪುತ್ತೂರು : ‘ಸಮಾಜದ ಮೌಲ್ಯಗಳು ಕುಗ್ಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿವೇಕಾನಂದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡಿ ಹೊರಗೆ ಹೋದ ಹಲವು ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಬಂದು ಸೇರಿರುವುದು ಒಂದು ಉತ್ತಮ ಸಂಗತಿಯಾಗಿದೆ. ಹಿರಿಯ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಗೆ ದೊಡ್ಡ ಅಸ್ತಿ. ಈ ಮೂಲಕ ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರೊಂದಿಗೆ ಹಿರಿಯ ವಿದ್ಯಾರ್ಥಿಗಳು ಸಂಪರ್ಕದಲ್ಲಿರಬೇಕು. ಹೀಗೆ ಎಲ್ಲರೂ ಸೇರಿ ಶಿಕ್ಷಣವನ್ನು ಒಗ್ಗಟ್ಟಾಗಿ ಬೆಳೆಸಬಹುದು’. ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ […]

ವಿವೇಕಾನಂದ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಉತ್ಕರ್ಷ ಕಾರ್ಯಕ್ರಮ

ಪುತ್ತೂರು; ವೃದ್ಧರಿಗೂ ಉತ್ಸಾಹ ತುಂಬುವಂತಹಾ ಕಾರ್ಯತತ್ಪರತೆ ಯುವಕರಲ್ಲಿರಬೇಕು. ಬಂಗಾರದಂತಹ ವಿದ್ಯಾರ್ಥಿ ಜೀವನದಲ್ಲಿ ಸಾಗುವ ದಾರಿ ಒಳಿತಿನ ಕಡೆಗೆ ಇರಬೇಕು. ಅಧ್ಯಾಪಕರಿಗೆ ಹಾಗೂ ಪೋಷಕರಿಗೆ ಮೋಸ ಮಾಡಕೂಡದು. ಜೀವನದ ಅನುಭವ ಎಂದಿಗೂ ಮೇಲು ” ಎಂದು ರೈತಬಂಧು ಆಹಾರೋದ್ಯಮ ಪ್ರೈವೆಡ್ ಲಿಮಿಟೆಡ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶಿವಶಂಕರ್ ನಾಯಕ್ ನುಡಿದರು.ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ ) ಇಲ್ಲಿ ವಾಣಿಜ್ಯ ವಿಭಾಗ, ವಾಣಿಜ್ಯ ಸಂಘ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ‘ ಉತ್ಕರ್ಷ […]

ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ. ಶ್ರೀಪತಿ ಕಲ್ಲೂರಾಯ

ಪುತ್ತೂರು, ಮೇ 16: ಮಕ್ಕಳ ಭವಿಷ್ಯದ ಚಿಂತೆ ಎಲ್ಲರಿಗೂ ಇರುತ್ತದೆ. ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮತ್ತು ರಕ್ಷಕರ ಪಾತ್ರ ಮಹತ್ವದ್ದು. ಅವರನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸವನ್ನು ಇಬ್ಬರು ಸೇರಿಯೇ ಮಾಡಬೇಕು. ಸೈಕಲ್ ತುಳಿಯುವಾಗ ಒಂದು ಚಕ್ರದಲ್ಲಿ ಗಾಳಿ ಇದ್ದು ಇನ್ನೊಂದರಲ್ಲಿಲ್ಲ ಎಂದರೆ ಸೈಕಲ್ ಸವಾರಿ ಮಾಡಲು ಯೋಗ್ಯವಾಗಿರುವುದಿಲ್ಲ. ಮಕ್ಕಳ ವಿಷಯದಲ್ಲೂ ಅಷ್ಟೆ ಶಿಕ್ಷಕರು ಮತ್ತು ರಕ್ಷಕರು ಎರಡು ಚಕ್ರಗಳಂತೆ ಕಾರ್ಯನಿರ್ವಹಿಸಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಹೇಳಿದರು.ಅವರು ವಿವೇಕಾನಂದ ಕಲಾ, […]

ಪ್ರಶ್ನೆಗಳು ಹುಟ್ಟುವವರೆಗೆ ನಮ್ಮ ಸಂಶೋಧನೆ ಸರಿ ಹಾದಿಯಲ್ಲಿರುತ್ತೆ: ಪ್ರೊ.ಬಿ. ವೆಂಕಟರಾಜ

ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಂಶೋಧನೆಯ ಗುಣ ಇರುತ್ತದೆ. ಅದು ಗೃಹಿಣಿಯೇ ಆಗಿರಲಿ, ಮೆಕ್ಯಾನಿಕ್ಕೇ ಆಗಿರಲಿ. ಆ ಸಂಶೋಧನೆಗೊಂದು ಮೂರ್ತರೂಪ ನೀಡುವ ಅಗತ್ಯವಿದೆ. ಅದನ್ನೇ ಈ ಸಂಶೋಧನಾ ಪ್ರಬಂಧಗಳು ಮಾಡುವುದು. ಸಂಶೋಧನೆ ಎನ್ನುವುದು ಒಂದು ಕೌಶಲ್ಯವಲ್ಲ ಅದೊಂದು ಹೊಸತನ. ಹೊಸತನವನ್ನು ಹುಡುಕುವ ಮಾರ್ಗ. ನಮ್ಮಲ್ಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರವಿದೆ ಎಂದರೆ ಅಲ್ಲಿ ಸಂಶೋಧನೆಯನ್ನು ಮಾಡುವ ಅಗತ್ಯವೇ ಇಲ್ಲ. ಎಲ್ಲಿ ಪ್ರಶ್ನೆಗಳು ಮಾತ್ರ ಇವೆಯೋ, ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆಯೋ, ಆ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡಿದಾಗ ನಮ್ಮ ಸಂಶೋಧನೆಯ […]

ವಿವೇಕಾನಂದ ಕಾಲೇಜಿನಲ್ಲಿ ಭಾಷಾ ಕಾರ್ಯಾಗಾರದ ಉದ್ಘಾಟನೆ

ಭಾಷಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಲವಾರು ಚಟುವಟಿಕೆಗಳನ್ನು ನೀಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡಬೇಕು. ಪರೀಕ್ಷೆಗಳ ಚಟುವಟಿಕೆಗಳು ಕೂಡಾ ವಿದ್ಯಾರ್ಥಿಗಳಿಗೆ ಅಗತ್ಯ. ಭಾಷಾ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ಕಲಿಸುವ ಮೂಲಕ ಉತ್ತಮ ನಾಗರಿಕರನ್ನು ಹುಟ್ಟುಹಾಕಬೇಕು. ಭಾರತದಲ್ಲಿರುವ ವೈವಿಧ್ಯಯ ಸಂಸ್ಕøತಿಯ ಜನರ ನಡುವೆ ಏಕತೆಯನ್ನು ಬೆಳೆಸುವ ಜವಾಬ್ದಾರಿ ಭಾಷಾ ಶಿಕ್ಷಕರ ಮೇಲಿದೆ ಎಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಸಹಾಯಕ ನಿರ್ದೇಶಕ ಡಾ.ಪಂಕಜ್ ದ್ವಿವೇದಿ ಹೇಳಿದರು.ಅವರು ವಿವೇಕಾನಂದ ಕಲಾ,ವಾಣಿಜ್ಯ ಮತ್ತು ವಿಜ್ನಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಪರೀಕ್ಷಣ […]

ಕಡಬ: ಸರಸ್ವತೀ ವಿದ್ಯಾಲಯ ಪ್ರೌಢ ಶಾಲಾ ಪ್ರಾರಂಭೋತ್ಸವ

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ಮೇ 29ರಂದು ಶಾಲಾ ಪ್ರಾರಂಭೋತ್ಸವ ನಡೆಯಿತು. ವಿದ್ಯಾರ್ಥಿಗಳನ್ನು ಆರತಿ ಬೆಳಗಿ ಸಿಹಿಯನ್ನು ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾರತ ಮಾತೆಗೆ ಪುμÁ್ಪರ್ಚನೆ ಮಾಡಿ ಹಿರಿಯರ ಆಶೀರ್ವಾದ ಪಡೆದುಕೊಂಡರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಸವಿತಾಶಿವಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಗುರುಗಳಾದ ಶ್ರೀಮತಿ ಶೈಲಶ್ರೀ ರೈ ಎಸ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಿನ್ನಪ್ಪ ಗೌಡ ಚೊಟ್ಟೆಮಜಲು, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಬಡ್ಡಿ: ಮಂಗಳೂರು ವಿಭಾಗ ಮಟ್ಟದಲ್ಲಿ ಚಾಂಪಿಯನ್

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮಹಿಳೆಯರ ಕಬಡ್ಡಿ ತಂಡವು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗ ಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಬೆಂಜನಪದವಿನÀ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಈ ಕ್ರೀಡಾ ಕೂಟದಲ್ಲಿ ಮಂಗಳೂರು ವಿಭಾಗದ ವಿವಿಧ ಇಂಜಿನಿಯರಿಂಗ್ ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಅತ್ಯುತ್ತಮ ನಿರ್ವಹಣೆಯನ್ನು ನೀಡಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.ಈ ವಿಜಯದೊಂದಿಗೆ ತಂಡವು ತಿಪಟೂರಿನ ಕಲ್ಪತರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಯುವ ರಾಜ್ಯ […]