ವಿವೇಕ ಜಯಂತಿ ಆಚರಣೆ-2025 ಗುರುವಿನಿಂದ ಪಡೆದ ಉತ್ಕೃಷ್ಟ ವಿಚಾರಗಳ ಚೈತನ್ಯ ರೂಪ ಶಿಷ್ಯರು – ಡಾ. ಜಿ.ಬಿ ಹರೀಶ್.

ಪುತ್ತೂರು, ಜನವರಿ ೧೩ :” ಶಿಷ್ಯರನ್ನು ಉತ್ತಮ ವಿಚಾರಗಳಿಂದ ರೂಪಿಸಬೇಕೆಂಬ ಹಂಬಲ ಗುರುವಿಗೆ ಇರುತ್ತದೆ. ಶಿಷ್ಯರಾದವರು ಸಮಾಜಕ್ಕೆ ತೆರೆದುಕೊಳ್ಳುವ ಪ್ರಕ್ರಿಯೆ ಗುರುವಿನ ಆಧ್ಯಾತ್ಮಿಕ ಗರ್ಭದಿಂದ ಪ್ರಸೂತಿ ಆದಂತೆ. ರಾಮಕೃಷ್ಣ ಪರಮಹಂಸರ ನೆರಳಿನಲ್ಲಿ ವಿವೇಕಾನಂದರು ಜಗದಗಲ ಹೆಸರಾಗುವಂತೆ ಬೆಳೆದರು. ಸ್ವದೇಶಿಯತೆಯನ್ನು ಜಾಗೃತಗೊಳಿಸಿ ಎಲ್ಲರನ್ನೂ ಒಳಿತಿನತ್ತ ಸಾಗುವಂತೆ ಪ್ರೇರಣೆಯಾಗಿದ್ದವರು ವಿವೇಕಾನಂದರು. ಸದಾ ಭಾರತದ ಒಳಿತನ್ನು ಬಯಸುತ್ತಿದ್ದ ಸ್ವಾಮಿ ವಿವೇಕಾನಂದರು ಅವರ ಬಳಿ ಬಂದವರನ್ನು ದೇಶಭಕ್ತರನ್ನಾಗಿ ಪರಿವರ್ತನೆ ಮಾಡುತ್ತಿದ್ದರು. ಹಿಂದುತ್ವಕ್ಕೆ ಹೊಸ ದಿಕ್ಕು ಇವರಿಂದ ದೊರಕಿತು ಎಂದು ಬೆಂಗಳೂರಿನ ವಂದೇಮಾತರ0 ಪಾಠ […]