ದೇಸೀ ಕೇಂದ್ರಿತ ವಿಚಾರಗಳು ಭಾರತದಲ್ಲಿ ಬೆಳೆಯಲಾರಂಭಿಸಿವೆ: ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಪುತ್ತೂರು: ನಮ್ಮ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಂದ ಹೊರಬರುವಾಗ ಉದ್ಯೋಗ ಹುಡುಕುವವರಾಗಿರಬಾರದು. ಬದಲಾಗಿ ಉದ್ಯೋಗದಾತರಾಗಿ ಕಾಣಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಒದಗಿಸುತ್ತಿವೆಯಾದರೂ ನಮ್ಮಲ್ಲಿನ ಉತ್ಕೃಷ್ಟತೆಯನ್ನು ಅರಿಯುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಭಾರತ ಕೇಂದ್ರಿತವಾದ ವಿಚಾರಧಾರೆಗಳು ಬೆಳೆಯಲಾರಂಭಿಸಿವೆ. ಮೇಕ್ ಇನ್ ಇಂಡಿಯ ಕಲ್ಪನೆಗಳು ಭಾರತವನ್ನು ಬಲಿಷ್ಟಗೊಳಿಸಲಾರಂಭಿಸಿವೆ. ನಮ್ಮ ಸ್ಥಳೀಯ ಪ್ರದೇಶಗಳ ಅಭಿವೃದ್ಧಿಗಾಗಿ ಶ್ರಮಿಸುವುದರ ಮುಖೇನ ಅಂತಿಮವಾಗಿ ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ […]
ಗ್ರಾಮ ವಿಕಾಸ ಸಮಾಲೋಚನೆ ಕಾರ್ಯಕ್ರಮ

ವಿದ್ಯಾರ್ಥಿಗಳಿಂದ ಗ್ರಾಮ ವಿಕಾಸ : ಗುರುರಾಜ್ ಪುತ್ತೂರು: ವಿದ್ಯಾರ್ಥಿಗಳ ಮೂಲಕ ಗ್ರಾಮವಿಕಾಸ ಮಾಡುವ ಕಾರ್ಯ ಉತ್ತಮವಾದ ವಿಚಾರ. ಪ್ರತಿ ಗ್ರಾಮ ಶಿಕ್ಷಣ, ಸಂಸ್ಕೃತಿಯ ವಿಚಾರದಲ್ಲಿ ಸ್ವಾವಲಂಬನೆಯನ್ನು ಹೊಂದಬೇಕು. ಸಾಮಾಜಿಕ ಸುರಕ್ಷೆ ಸಾಮರಸ್ಯವನ್ನು ಹುಟ್ಟಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ, ಗ್ರಾಮವಿಕಾಸದ ಪ್ರಾಂತ್ ಪ್ರಮುಖ್ ಗುರುರಾಜ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಜಯಂತಿಯ ಪ್ರಯುಕ್ತ ಆಯೋಜಿಸಲಾದ ಗ್ರಾಮ ವಿಕಾಸ ಸಮಾಲೋಚನೆ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು. ಗ್ರಾಮ ಆಧುನೀಕತೆಯ […]