ಕೆಲಸದ ಗುಣಮಟ್ಟ ಹೆಚ್ಚಿಸಲು ಕಾರ್ಯಾಗಾರ ಪೂರಕ: ಡಾ. ಕೃಷ್ಣ ಭಟ್

ಪುತ್ತೂರು: ಕಾಲೇಜುಗಳ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಕಛೇರಿ ಸಹಾಯಕರು, ಅಟೆಂಡರ್‍ಸ್‌ಗಳೂ ಕೂಡ ಸಂಸ್ಥೆಯ ಆಧಾರಸ್ಥಂಭಗಳು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ನುಡಿದರು. ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕದಿಂದ ಸಂಸ್ಥೆಯ ಕಚೇರಿ ಸಹಾಯಕರು ಮತ್ತು ಅಟೆಂಡರ್‍ಸ್‌ಗಳಿಗೆ ನಡೆಸಿದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಹಂತದಲ್ಲೂ ತಮ್ಮ ಕೆಲಸದ ಗುಣ ಮಟ್ಟವನ್ನು ಹೆಚ್ಚಿಸಲು ಮತ್ತು ನಿರಂತರವಾಗಿ ಕಾರ್ಯದ ಹೊಸ ಅನ್ವೇಷಣೆಗಾಗಿ ಇಂತಹ ಕಾರ್ಯಾಗಾರಗಳು ಉಪಯುಕ್ತ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಪ್ರಾಚಾರ್ಯ […]