ಪತ್ರಿಕಾಗೋಷ್ಠಿ : ವಿವೇಕಾನಂದ ಜಯಂತಿ ಆಚರಣೆ & ರೇಡಿಯೋ ಪಾಂಚಜನ್ಯ 90.8 ಎಫ್.ಎಂ ಲೋಕಾರ್ಪಣೆ

ಮಂಗಳೂರು : ದ್ವನಿ ಮಾಧ್ಯಮದ ಮೂಲಕ ಸಮುದಾಯ ಸಬಲೀಕರಣದ ಸಂದೇಶವನ್ನು ಪ್ರಸಾರ ಮಾಡುವ ಸದುದ್ದೇಶದಿಂದ, ಸಮುದಾಯದಿಂದ, ಸಮುದಾಯಕ್ಕಾಗಿ, ಸಮುದಾಯವೇ ನಡೆಸುವ ರೇಡಿಯೋ ಪಾಂಚಜನ್ಯ 90.8 ಎಫ್.ಎಂ ಅನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ೧೦೦ ವರ್ಷಗಳು ಶಿಸ್ತುಬದ್ಧ ಇತಿಹಾಸದ ಹಿನ್ನೆಲೆ ಇರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಪುತ್ತೂರಿನ ಜನತೆಗಾಗಿ ಪರಿಚಯಿಸುತ್ತಿದೆ. ನಮ್ಮ ಸಮಾಜದಲ್ಲಿ ಅಕ್ಷರ ಮಾಧ್ಯಮದಲ್ಲಿ ಎಷ್ಟು ಜ್ಞಾನ ಸಂಗ್ರಹಣೆಯಾಗಿದೆಯೋ ಅಷ್ಟೇ ಆಳವಾದ ವ್ಯಾಪಕವಾದ, ಸಾಂಪ್ರದಾಯಿಕ ವಿದ್ವತ್ತು ಜನರ ಮಾತುಗಳಲ್ಲಿದ್ದು, ಅದನ್ನು ಜನಾಂಗದಿಂದ ಜನಾಂಗಕ್ಕೆ ದಾಟಿಸುವ ಉದ್ದೇಶ ಹಾಗೂ ಒಂದು […]