ಗ್ರಾಮ ವಿಕಾಸ-ಒಂದು ಪರಿಕಲ್ಪನೆ

ಆಲಂಕಾರು ಭಾರತಿ ಶಾಲೆಯಲ್ಲಿ ಸಮಲೋಚನಾ ಸಭೆ ಆಲಂಕಾರು: ಗ್ರಾಮ ವಿಕಾಸ-ಒಂದು ಪರಿಕಲ್ಪನೆ ಎಂಬ ವಿಶೇಷ ಕಾರ್ಯಕ್ರಮ ಆಲಂಕಾರು ಭಾರತಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣರಾವ್ ಕಡಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಗ್ರಾಮದಲ್ಲಿ ಅನಕ್ಷರತೆಯನ್ನು ದೂರಗೊಳಿಸಬೇಕು. ಆ ಗ್ರಾಮಗಳ ಸ್ವಚ್ಛತೆ ಎಲ್ಲರೂ ಮಾಡಬೇಕು ಎಂದರು. ಊರಿನ ಸಮಸ್ಯೆಗಳನ್ನು ಕೋರ್ಟು/ಕಛೇರಿಗಳಿಲ್ಲದೆಯೇ ಮುಗಿಸುವ ಪ್ರಯತ್ನಗಳು ಗ್ರಾಮದಲ್ಲಿ ಆಗಬೇಕು ಎಂದು ತಿಳಿಸಿದರು. ಮರಗಳನ್ನು ನೆಡುವ ಕಾರ್ಯದಲ್ಲಿ ನಮ್ಮನ್ನು ತೊಡಗಿಸಬೇಕು. ಆ ಪರಿಸರ ಸಂರಕ್ಷಣೆ ನಮ್ಮ ಗುರಿಯಾಗಬೇಕು […]
ಗ್ರಾಮ ವಿಕಾಸ ಸಮಾಲೋಚನಾ ಸಭೆ

ಪೆರ್ಲಂಪಾಡಿ : ಷಣ್ಮುಖದೇವ ಪ್ರೌಢಶಾಲೆಯನ್ನು ಕೇಂದ್ರವಾಗಿಟ್ಟು ನಡೆಯಲಿರುವ ಕೊಳ್ತಿಗೆ ಗ್ರಾಮ ವಿಕಾಸ ಯೋಜನೆಯ ಮೊದಲ ಸಭೆ ಶಾಲಾ ಸಭಾಭವನದಲ್ಲಿ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇದರ ವತಿಯಿಂದ ನಡೆಸಲ್ಪಡುತ್ತಿರುವ ವಿದ್ಯಾಸಂಸ್ಥೆಗಳು ಒಂದೊಂದು ಗ್ರಾಮ ಆಯ್ಕೆ ಮಾಡಿ ಗ್ರಾಮ ವಿಕಾಸ ಯೋಜನೆ ನಡೆಸುವ ತೀರ್ಮಾನದಂತೆ ಷಣ್ಮುಖದೇವ ಪ್ರೌಢಶಾಲೆ ಆಯ್ಕೆ ಮಾಡಿದ ಕೊಳ್ತಿಗೆ ಗ್ರಾಮದಲ್ಲಿ ಈ ಯೋಜನೆಯನ್ನು ಏಕೆ, ಹೇಗೆ ಜಾರಿಗೊಳಿಸಬಹುದು ಎಂಬ ವಿಸ್ತೃತ ಚರ್ಚೆ ನಡೆಸಲಾಯಿತು. ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಭಾಗವಹಿಸುವಿಕೆಯಲ್ಲಿ ನಡೆದ ಈ ಸಭೆಯಲ್ಲಿ […]