ಗಾಂಧಿ ಜಯಂತಿ: ಶ್ರೀರಾಮ ವಿದ್ಯಾಲಯದಲ್ಲಿ ಸ್ವಚ್ಛತಾ ಕಾರ್ಯ

ಶ್ರೀರಾಮ ವಿದ್ಯಾಲಯ ನೆಲ್ಯಾಡಿ ಇಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಯಿತು. ಶಾಲೆಯ ಆಡಳಿತ ಸಮಿತಿ, ಶಿಕ್ಷಕರು ಹಾಗೂ ಊರವರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಶಾಲೆಯ ಸುತ್ತ ಮುತ್ತ ಬೆಳೆದಿದ್ದ ಅನಗತ್ಯ ಕಾಡು ಕಡಿಯುವ ಹಾಗೂ ಕಸ ವಿಲೇವಾರಿ ಕಾರ್ಯ ಮಾಡಿದರು. ಶಾಲೆಯ ಅಧ್ಯಕ್ಷರಾದ ಜಯಪ್ರಕಾಶ್ ನೆಕ್ರಾಜೆ, ಶಾಲಾ ಮುಖ್ಯ ಗುರುಗಳಾದ ಪ್ರಕಾಶ್ ಎನ್, ಸದಸ್ಯರಾದ ಜಯಂತ ಅಂಬರ್ಜೆ, ಮೂಲಚಂದ್ರ ಕಾಂಚನ, ಸ್ಥಳೀಯರಾದ ರಘುನಾಥ ತಿರ್ಲೆ, ಸಂಧ್ಯಾ, ಶಿಕ್ಷಕರಾದ ಧನಂಜಯ ಬಿ, ಕು| […]