ಪಾಲಕರ ಸಭೆ

ಸಾವಿರಾರು ವಿದ್ಯಾರ್ಥಿಗಳು ಸಮಾಜಕ್ಕಾಗಿ ಬದುಕುವಂತೆ ಪ್ರೇರೇಪಿಸುವ ರಾಷ್ಟ್ರಪ್ರೇರಿತ ಭಾರತೀಯ ಶಿಕ್ಷಣವನ್ನು ವಿದ್ಯಾಕೇಂದ್ರ ನೀಡುತ್ತಿದೆ. ಈ ರೀತಿಯಲ್ಲಿ ರಾಷ್ಟ್ರೀಯ ದೃಷ್ಟಿಕೋನ, ಸಂಸ್ಕಾರಯುತ ಶಿಕ್ಷಣ ಶಾಲೆಯಲ್ಲಿ ಮಾತ್ರ ಸೀಮಿತವಾಗದೇ, ಮನೆಯಲ್ಲಿ ಅವುಗಳನ್ನು ಮುಂದುವರೆಸುವಂತೆ ಪೋಷಕರು ತಮ್ಮ ಮಕ್ಕಳಿಗೆ ಪ್ರೇರಣೆ ನೀಡುವುದು ಅವಶ್ಯಕ. ಈ ರೀತಿಯಾದಾಗ ಮಾತ್ರ ಮಗುವಿನ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ||ಪ್ರಭಾಕರಭಟ್ ಕಲ್ಲಡ್ಕ ತಿಳಿಸಿದರು. ಅವರು ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ದಿನಾಂಕ: 4-8-2015 ರಂದು ನಡೆದ ವಿಭಾಗದ ಪೋಷಕರ ಸಭೆಯನ್ನುದ್ದೇಶಿಸಿ ಮಾರ್ಗದರ್ಶನ […]