ಕಾರ್ಗಿಲ್ ವಿಜಯೋತ್ಸವ

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಭಾಸ ಮಾನವಿಕ ಸಂಘದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಸ್ಮರಣೆ ಕಾರ್ಯಕ್ರಮ ಅಜಿತಕುಮಾರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ|| ಪ್ರಭಾಕರ ಭಟ್ ಕಲ್ಲಡ್ಕ ಇವರು ವಹಿಸಿರುತ್ತಾರೆ. ಮುಖ್ಯ ಅತಿಥಿಯಾಗಿ ಬಂದಿರುವವರು ಆಶಾಪ್ರಸಾದ್ ರೈ, ವಿಲಾಸ್ ನಾಯಕ್ ಉಡುಪಿ, ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವೀರಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಒಂದು ನಿಮಿಷ ಮೌನಪ್ರಾರ್ಥನೆಯೊಂದಿಗೆ ವಿಜಯ ದಿವಸವನ್ನು ಆಚರಿಸಲಾಯಿತು. ಆಶಾಪ್ರಸಾದ್ ರೈ ಯವರು ಹಲವಾರು ವೀರಯೋಧರ ಕಥೆಗಳನ್ನು ತಿಳಿಸುತ್ತಾ […]

ಕಾರ್ಗಿಲ್ ವಿಜಯ ದಿವಸ

ಜಮ್ಮುಕಾಶ್ಮೀರ ಭಾರತದ ಮುಕುಟಪ್ರಾಯವಾಗಿ ಕಂಗೊಳಿಸುವ ರಾಜ್ಯ. ಪ್ರವಾಸಿಗರ ಸ್ವರ್ಗ ತಾಣವಾದ ಕಾಶ್ಮೀರದ ಕಾರ್ಗಿಲ್ ಪ್ರದೇಶದ ಮೇಲೆ 1999ರಲ್ಲಿ ನಡೆದ ಪಾಕಿಸ್ತಾನದ ದಾಳಿ ಅತ್ಯಂತ ಶೋಚನೀಯ ಸಂಗತಿಯಾಗಿದೆ. ಈ ಕಾರ್ಗಿಲ್ ಕದನದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಸೈನಿಕರ ಹೋರಾಟದ ಫಲವೇ ಕಾರ್ಗಿಲ್ ವಿಜಯೋತ್ಸವ. ನಿರಂತರ ದೇಶಸೇವೆಯಲ್ಲಿ ತೊಡಗಿರುವ ಸೈನಿಕರು ನಮ್ಮೆಲ್ಲರಿಗೂ ಪ್ರೇರಣಾದಾಯಿಗಳು’ ಎಂದು ಶ್ರೀ ರಾಧಾಕೃಷ್ಣ ಅಡ್ಯಂತಾಯ, ಶ್ರೀರಾಮ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಮಧುಕರ ಸಭಾಂಗಣದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ಉದ್ದೇಶಿಸಿ ಬೌದ್ಧಿಕ್ ನೀಡಿದರು. […]