ಸಹಸ್ರ ವೃಕ್ಷಾರೋಪಣ

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಠಾರದಲ್ಲಿ ಲಯನ್ಸ್ ಕ್ಲಬ್‌ನ 100 ವರ್ಷಾಚರಣೆಯ ಸಂದರ್ಭ ನಿಮಿತ್ತ ಗಿಡನೆಡುವ ಕಾರ್ಯಕ್ರಮವು ದಿನಾಂಕ 15-7-2015 ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರು ಡಾ|| ಪ್ರಭಾಕರ ಭಟ್ ಇವರು ಮಾತನಾಡಿ ಪ್ರಕೃತಿಯ ಸಮತೋಲನತೆಯನ್ನು ಕಾಯ್ದುಕೊಳ್ಳುವುದರ ಬಗ್ಗೆ ಅರಿವು ಮೂಡಿಸಿದರು. ಪರಿಸರ ನಮಗೆ ಜೀವಕೊಟ್ಟರೆ ನಾವು ಅದಕ್ಕೆ ಜೀವನಾಶಕಗಳನ್ನು ನೀಡಿ ಮರಣಶಾಸನವನ್ನು ಬರೆಯುತ್ತಿದ್ದೇವೆ. ವೈಭವದ ಜೀವನಕ್ಕಾಗಿ ಪ್ರಕೃತಿಯನ್ನು […]

ಎನ್.ಎಸ್.ಎಸ್. ಉದ್ಘಾಟನೆ

ಯುವ ಜನತೆಯನ್ನು ಧ್ಯೇಯವಾಗಿಟ್ಟುಕೊಂಡು ಆರಂಭವಾದ ಯೋಜನೆಯೇ ರಾಷ್ಟ್ರೀಯ ಸೇವಾಯೋಜನೆ. ದೇವಸ್ಥಾನದಲ್ಲಿ ಉಳಿ ಪೆಟ್ಟು ತಿಂದ ಕಲ್ಲು ಹೇಗೆ ಒಂದು ಸುಂದರ ಶಿಲೆಯಾಗಿ ರೂಪುಗೊಂಡು ಎಲ್ಲರೂ ಪೂಜಿಸುವಂತಾಗುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳು ತಮ್ಮನ್ನು ತಾವು ಎನ್.ಎಸ್.ಎಸ್.ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸವಾಲುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಆದರ್ಶ ವಿದ್ಯಾರ್ಥಿಯಾಗಿ ಸಮಾಜದಲ್ಲಿ ಗುರುತಿಸುವಂತಾಗಬೇಕು. ಅವಕಾಶಗಳನ್ನು ಜೀವನದಲ್ಲಿ ಉಪಯೋಗಿಸಿದಲ್ಲಿ ಅವರು ಮುಂದೆ ಉತ್ತಮ ವ್ಯಕ್ತಿಗಳಾಗುತ್ತಾರೆ ಎಂದು ಎಸ್.ವಿ.ಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಕಿಟ್ಟು ರಾಮಕುಂಜ ಹೇಳಿದರು. ಇವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2015-16 ನೇ […]

ಲಯನ್ಸ್ ಕ್ಲಬ್ 100 ವರ್ಷಾಚರಣೆ ನಿಮಿತ್ತ ಪರಿಸರ ಸಂರಕ್ಷಣೆ ಕಾರ್ಯಕ್ರಮ 15-07-2015

ಲಯನ್ಸ್ ಕ್ಲಬ್ ಮತ್ತು ಶ್ರೀರಾಮ ವಿದ್ಯಾಕೇಂದ್ರ ಇದರ ವತಿಯಿಂದ ಪರಿಸರ ಸಂರಕ್ಷಣೆ ಮತ್ತು 1000 ಗಿಡಗಳನ್ನು ನೆಡುವ ಉದ್ದೇಶವನ್ನಿಟ್ಟುಕೊಂಡು ಲಯನ್ಸ್ ಕ್ಲಬ್ 100 ವರ್ಷ ಆಚರಣೆಯ ಹಿನ್ನಲೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾಕೇಂದ್ರದ ಸಂಚಾಲಕರು ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಕದಂಬ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೊತೆಗೆ ಪರಿಸರ ಪ್ರೇಮಿ ದಿನೇಶ್ ನಾಯಕ್, ಲಯನ್ಸ್ ಜಿಲ್ಲಾ ಗವರ್ನರ್ ಕವಿತಾ ಎಸ್. ಶಾಸ್ತ್ರಿ, ಮಾಜಿ ಗವರ್ನರ್ ಕೆ.ಸಿ ಪ್ರಭು, ಲಯನ್ಸ್ […]