ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

ಉಪ್ಪಿನಂಗಡಿ: ಭಕ್ತಿ-ಶಕ್ತಿ-ಯುಕ್ತಿ ಯಿಂದ ಧರ್ಮ ಸಂಸ್ಥಾಪನೆಗೈದ ಶ್ರೀ ಕೃಷ್ಣನ ಜೀವನವೇ ಮನು ಕುಲಕ್ಕೆ ಆದರ್ಶ ಪ್ರಾಯವಾಗಿದ್ದು, ಸಮಾಜದಲ್ಲಿ ಮೇಲೈಸುವ ದುಷ್ಠ ಶಕ್ತಿಗಳನ್ನು ನಿಗ್ರಹಿಸುವಲ್ಲಿ ಇಡೀ ಸಮಾಜ ಶ್ರೀ ಕೃಷ್ಣನ ಆದರ್ಶವನ್ನು ಪಾಲಿಸಬೇಕಾಗಿದೆ ಎಂದು ಚಿಂತಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವಾಹ ಚಂದ್ರಶೇಖರ್ ಮರ್ಧಾಳ ತಿಳಿಸಿದರು. ಅವರು ಉಪ್ಪಿನಂಗಡಿಯ ಶ್ರೀ ಮಾಧವ ಶಿಶುಮಂದಿರದಲ್ಲಿ ಬುಧವಾರದಂದು ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಧಾಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು. ಸಮಾಜದ ನಾನಾ ಕ್ಷೇತ್ರದಲ್ಲಿ ಸಮಾಜವನ್ನು ದುರ್ಬಲಗೊಳಿಸುವ ಷಡ್ಯಂತ್ರ […]