ಬೇಸಿಗೆ ಸಂಸ್ಕಾರ ಶಿಬಿರ

ಉಪ್ಪಿನಂಗಡಿ : ಎಳೆಯ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಅವರನ್ನು ಭವ್ಯರಾಷ್ಟ್ರದ ದಿವ್ಯ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವೆಂದು ಯುವ ಸಾಮಾಜಿಕ ಕಾರ್ಯಕರ್ತ ರಾಜ್‌ಗೋಪಾಲ ಹೆಗ್ಡೆ ತಿಳಿಸಿದರು. ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ನಡೆದ ಒಂದುವಾರದ ಬೇಸಿಗೆ ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ಉದ್ಯಮಿ ಹರ್ಷಕುಮಾರ್ ಜೈನ್ ಮಾತನಾಡಿ, ಪಾಶ್ಚ್ಯಾತ್ಯ ಸಂಸ್ಕೃತಿಯ ಪ್ರಭಾವದಿಂದ ದುರ್ಬಲವಾದ ಮನೆ-ಮನಸ್ಸುಗಳನ್ನು ಹಳಿಗೆ ತರಲು ನಮ್ಮ ಭಾರತೀಯ ಸಂಸ್ಕಾರವನ್ನು ಎಳೆಯ ಮಕ್ಕಳಿಗೆ […]

ಯುಗಾದಿ ಹೊಸ ವರ್ಷಾಚರಣೆ

ಉಪ್ಪಿನಂಗಡಿ : ಯುಗಾದಿ ಹೊಸ ವರ್ಷಾಚರಣೆ ಮಾತ್ರವಾಗಿರದೇ ನಮ್ಮ ನಮ್ಮ ಸಾಮಾಜಿಕ ಬದ್ದತೆಯನ್ನು ನೆನೆಯುವ, ಸಂಕಲ್ಪಿಸುವ ಹಬ್ಬವಾಗಿರಬೇಕು. ಸದ್ವಿಚಾರಧಾರೆ ನಮ್ಮೆರಲ್ಲ ಮೈ ಮನದಲ್ಲಿ ನೆಲೆಗೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಂದಾಳು ಹರಿರಾಮಚಂದ್ರ ತಿಳಿಸಿದರು. ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಯುಗಾದಿ ಉತ್ಸವದಲ್ಲಿ ಬೌದ್ಧಿಕ್ ನೀಡುತ್ತಾ ಮಾತನಾಡುತ್ತಿದ್ದರು. ನಮ್ಮ ದೇಶದ ಸಮಸ್ಯೆ, ನಮ್ಮ ಸಮಾಜದ ಸಮಸ್ಯೆ, ನಮ್ಮ ನೆರೆ ಮನೆಯ ಸಮಸ್ಯೆ, ನಮ್ಮ ಮನೆಯ ಸಮಸ್ಯೆ, ನಮ್ಮ ಸಮಸ್ಯೆಗಳನ್ನು […]

ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಹಾಗೂ ಸಾಮರಸ್ಯ ದಿನಾಚರಣೆ

ಉಪ್ಪಿನಂಗಡಿ: ಜಗದ್ವಂದ್ಯ ಭಾರತೀಯ ಸಂಸ್ಕೃತಿಯನ್ನು ಎಳೆಯ ಮಕ್ಕಳಲ್ಲಿ ಮೂಡಿಸಿ, ಅವರನ್ನು ಸತ್‌ಪ್ರಜೆಗಳನ್ನಾಗಿ ರೂಪಿಸುವಲ್ಲಿ ಸಮಾಜದ ಸರ್ವ ಸ್ತರದ ಸಹಕಾರವೂ ಲಭಿಸಬೇಕಾಗಿದೆ. ಜಾತಿ-ಮತ-ಬಡವ-ಬಲ್ಲಿದನೆಂಬ ಭೇದತೋರದೇ ಎಲ್ಲಾ ಮಕ್ಕಳ ಹುಟ್ಟುಹಬ್ಬವನ್ನು ಒಂದೇ ವೇದಿಕೆಯಲ್ಲಿ ಸಾಮೂಹಿಕವಾಗಿ ಆಚರಿಸುವುದು ಮೌಲ್ಯಯುತವಾದ ನಡೆಯಾಗಿದೆ. ದೇಶದ ಮಹಾನ್ ನಾಯಕ ಡಾ| ಬಿ  ಆರ್‌ ಅಂಬೇಡ್ಕರ್‌ರವರ ಜನ್ಮದಿನಾಚರಣೆಯನ್ನೂ ಎಲ್ಲರೂ ಸಾಮೂಹಿಕವಾಗಿ ಆಚರಿಸುವುದು ಅವರ ಜೀವನಾದರ್ಶಗಳಿಗೆ ನೀಡುವ ಅನುಪಮ ಗೌರವವಾಗಿದೆ ಎಂದು ಹಿರಿಯ ಚಿಂತಕಿ, ಉಪ್ಪಿನಂಗಡಿ ವಿಜಯಾ ಬ್ಯಾಂಕ್ ಶಾಖಾಧಿಕಾರಿ ಶ್ರೀಮತಿ ಪದ್ಮ ತಿಳಿಸಿದರು. ಅವರು ಆದಿತ್ಯವಾರ (14/04/13) […]