ಮಾತೃ ಸಂಗಮ

Featured image

ಉಪ್ಪಿನಂಗಡಿ :ಇಲ್ಲಿನ ಶ್ರೀಮಾಧವ ಶಿಶು ಮಂದಿರ ಮತ್ತು ಮಾತೃ ಮಂಡಳಿಯ ಆಶ್ರಯದಲ್ಲಿ ನಡೆದ ಮಾ 3ರ ಆದಿತ್ಯವಾರದಂದು ನಡೆದ ಗಂಗಾ ಪೂಜೆ ಹಾಗೂ ಮಾತೃ ಸಂಗಮ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಾತೃ ಮಂಡಳಿ ಸದಸ್ಯರು, ಭರತ ನಾಟ್ಯದಲ್ಲಿ ಮಿಂಚಿದ ಬಾಲಗೋಕುಲ ಮಕ್ಕಳು, ಹಾಗೂ ಶಿಶು ಮಂದಿರದ ಪುಟಾಣಿಗಳ ನರ್ತನ ಗಮನ ಸೆಳೆಯಿತು.

ಗಂಗಾ ಪೂಜನಾ ಮತ್ತು ಮಾತೃ ಸಂಗಮ ಸಭಾ ಕಾರ್ಯಕ್ರಮ

ಉಪ್ಪಿನಂಗಡಿ : ಸಮಾಜದ ಶ್ರದ್ಧಾ ಬಿಂದುಗಳಲ್ಲಿ ಒಂದಾಗಿರುವ ಮಾತೃಶಕ್ತಿಯ ಜಾಗೃತಿಯಿಂದ ರಾಷ್ಟ್ರದ ನವೋತ್ಥಾನ ಸಾಧ್ಯ. ನಮ್ಮ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆಗೈದ ವೀರ ವನಿತೆಯರ ಬಗ್ಗೆ, ರಾಷ್ಟ್ರ ಪುರುಷರಿಗೆ ಜನ್ಮವಿತ್ತ ಮಹಾ ಮಾತೆಯರ ಬಗ್ಗೆ ಮರೆವು ಸಲ್ಲದು. ರಾಷ್ಟ್ರ್ರದೆದುರಿನ ಸವಾಲುಗಳನೆದುರಿಸಲು ಸಾಂಘಿಕ ಹೋರಾಟ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಪರ್ಕ ಪ್ರಮು ಖ್‌ ರವೀಂದ್ರರವರು ಕರೆ ನೀಡಿದರು. ಅವರು, ಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದ ಮತ್ತು ಮಾತೃ ಮಂಡಳಿಯ ಆಶ್ರಯದಲ್ಲಿ ಉಪ್ಪಿನಂಗಡಿಯ ನೇತ್ರಾವತಿ ಕುಮಾರಾಧಾರ […]

ಗಂಗಾ ಪೂಜನಾ

Featured image

ಉಪ್ಪಿನಂಗಡಿ : ಇಲ್ಲಿನ ಶ್ರೀಮಾಧವ ಶಿಶು ಮಂದಿರ ಮತ್ತು ಮಾತೃ ಮಂಡಳಿಯ ಆಶ್ರಯದಲ್ಲಿ ನಡೆದ ಗಂಗಾ ಪೂಜನಾ ಕಾರ್ಯಕ್ರಮದಲ್ಲಿ ಮಾತೆಯರಿಂದ ಪೂಜಿಸಲ್ಪಟ್ಟ ನೇತ್ರಾವತಿ ನದಿ ಕಂಗೊಳಿಸಿದ ಬಗೆ ಇದು. ಕುಂಜ್ಞ ನಲಿಕೆ ದಂಪತಿಗಳ ಪೂಜಾ ನೇತೃತ್ವದಲ್ಲಿ ಗಂಗೆ ಸ್ವರೂಪಿ ನೇತ್ರಾವತಿಗೆ ಭಾಗೀನ ಸಮರ್ಪಣೆ, ಪ್ರತಿಯೋರ್ವ ಭಕ್ತರು ಗಂಗೆಯನ್ನು ಪೂಜಿಸಿ ಬಿಟ್ಟ ಹಣತೆಗಳು ನದಿಯಲ್ಲಿ ಸಾಲುಗಟ್ಟಿ ಸಾಗಿದ ದೃಶ್ಯಗಳು ಮನೋಹರವಾಗಿತ್ತು.