ಮಕರ ಸಂಕ್ರಮಣ ಉತ್ಸವ

ಉಪ್ಪಿನಂಗಡಿ : ಪ್ರಾಕೃತಿಕ ಹಾಗೂ ಧಾರ್ಮಿಕವಾಗಿ ಮಹತ್ವವುಳ್ಳ ಮಕರ ಸಂಕ್ರಮಣ ಉತ್ಸವವನ್ನು ಸಾಮೂಹಿಕವಾಗಿ ಆಚರಿಸುವುದರಿಂದ ಸಮಾಜದ ಸ್ವಾಸ್ಥ್ಯ ಬೆಳಗುವುದು. ರಾತ್ರಿ ಕಡಿಮೆಯಾಗಿ ಹಗಲು ಹೆಚ್ಚಾಗುವ ಈ ಸಮಯದಲ್ಲಿದೇವತಾ ಶಕ್ತಿ ಯಾ ಸಾತ್ವಿಕ ಶಕ್ತಿಗಳು ಮೇಲೈಸಲಿರುವ ಸಂಕೇತವೂ ಇದೆ. ಎಂದುಉದ್ಯಮಿ, ಚಿಂತಕ ಮಿತ್ರಸೇನ್ ಜೈನ್ ತಿಳಿಸಿದರು. ಅವರು ಸೋಮವಾರದಂದು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶುಮಂದಿರದಲ್ಲಿ ನಡೆದ ಮಕರ ಸಂಕ್ರಮಣ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು. ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಯಕ್ಷಗಾನ ಕಲಾವಿದ ಅಂಬಾಪ್ರಸಾದ್ […]