ಸೇವಾ ದಿನ ಆಚರಣೆ

ಉಪ್ಪಿನಂಗಡಿ : ಮೌಲ್ಯಗಳ ಕುಸಿತಕ್ಕೆ ಒಳಗಾಗಿರುವ ಇಂದಿನ ಆಧುನಿಕಜೀವನದಲ್ಲಿ ಸಂಸ್ಕಾರ ಶಿಕ್ಷಣ ನೀಡುವ ಕಾರ್ಯ ಅತ್ಯಗತ್ಯವಾದದ್ದು ಹಾಗೂ ದೇವತಾಕಾರ್ಯಕ್ಕೆ ಸರಿಸಮಾನವಾದದ್ದಾಗಿದೆ. ಹಿಂದೂ ಸಮಾಜದಲ್ಲಿ ಅನಪೇಕ್ಷಿತ ರೀತಿಯಲ್ಲಿ ಸೇರಿಕೊಂಡಿದ್ದ ಅನಿಷ್ಠಗಳನ್ನು ಸೇವೆಯೆಂಬ ಧ್ಯೇಯದಲ್ಲಿ ನಿವಾರಿಸಲು ಶ್ರಮಿಸಿದ ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಸ್ವರ್ಗೀಯ ಅಜಿತ್‌ಕುಮಾರಜೀ ಸ್ಮರಣಾರ್ಥ ನಡೆಸುವ ಸೇವಾ ದಿನ ಸಮಾಜಕ್ಕೆ ಸೇವಾ ದೀಕ್ಷೆ ನೀದಲು ಸಹಕಾರಿಯಾಗಲಿ ಎಂದು ಹಿರಿಯ ಚಿಂತಕ, ವಿಶ್ರಾಂತ ಶಿಕ್ಷಕ ಎಂ ಕೆ ಸಾಲಿಯಾನ್ ಕರೆ ನೀಡಿದ್ದಾರೆ. ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ […]