ದೀಕ್ಷಾ ಸಮಾರಂಭ 2011-12

Featured image

ದಿನಾಂಕ ೧೦-೦೬-೨೦೧೧ನೇ ಶುಕ್ರವಾರ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ, ಗಣಪತಿ  ಹೋಮ ಮಾಡಿ ಆರತಿ ಬೆಳಗುವುದರೊಂದಿಗೆ  ದೀಕ್ಷಾರಂಭವನ್ನು   ಆಚರಿಸಲಾಯಿತು. ಸಭಾಧ್ಯಕ್ಷರಾಗಿ  ಆಗಮಿಸಿದ ಶ್ರೀ ನಾರಾಯಣ ಆಚಾರ್, ಮರುವOತಿಲ, ನಿವೃತ್ತ  ಶಿಕ್ಷಕರು,  ಇವರು ಒಂದನೆಯ ತರಗತಿಯ  ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ಒದಗಿಸಿದರು .ನಿವೃತ್ತ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಕೆ. ಕಿಟ್ಟಣ್ಣ ರೈ ಅವನಿ, ಪೆರಾಬೆ ಮುಖ್ಯ ಅತಿಥಿಗಳಾಗಿದ್ದರು. ಆಡಳಿತ ಮಂಡಳಿಯ ಸದಸ್ಯರು, ಪಾಲಕ ವರ್ಗದವರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿ  ವೃಂದದವರು ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ

ಉಪ್ಪಿನಂಗಡಿ : ದಿನಾಂಕ ೯/೮/೨೦೧೨ ರಂದು ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವು ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿ ಪಂ ಸದಸ್ಯ ಕೇಶವ ಗೌಡ ಬಜತ್ತೂರು, ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಶ್ರೀ ಕೃಷ್ಣನ ಜೀವನಾದರ್ಶವನ್ನು ವಿವರಿಸಿದರು. ಶ್ರೀ ಕೃಷ್ಣವೇಷಧಾರಿ ಮಕ್ಕಳ ಮಡಿಕೆ ಒಡೆಯುವ ಸ್ಪರ್ಧೆ, ಮಕ್ಕಳಿಗೆ ಹಾಗೂ ಮಾತೆಯರಿಗೆ ಮತ್ತು ಪುರುಷರಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ […]

ಕೇಶವ ಕೃಪಾ ಕಟ್ಟಡ ಉದ್ಘಾಟನೆ

ಉಪ್ಪಿನಂಗಡಿ : ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಶಿಶು ಮಂದಿರದ ಬಳಿ ನಿರ್ಮಿಸಲಾದ  ಕೇಶವ ಕೃಪಾ ಕಟ್ಟಡವನ್ನು ಆರ್ ಎಸ್ ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ| ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸುತ್ತಿರುವುದು. ಚಿತ್ರದಲ್ಲಿ ಶಿಶು ಮಂದಿರ ಸಮಿತಿಯ ಗೌರವಾಧ್ಯಕ್ಷ ಯು ರಾಮ , ಅಧ್ಯಕ್ಷ ಮನೋಜ್ ಶೆಟ್ಟಿ, ಮಾತಾಜಿ  ರಮ್ಯಾ ಶಿರಸಿ ರವರನ್ನು ಕಾಣಬಹುದು.

ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ, ಈಶ್ವರ ಮಂಗಲ ಪಂಚಮುಖಿ ಹನುಮಗಿರಿಗೆ ಪ್ರವಾಸ

ಉಪ್ಪಿನಂಗಡಿ: ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇಲ್ಲಿನ ಪುಟಾಣಿ ಮಕ್ಕಳ ಕಿರು ಪ್ರವಾಸವು ದಿನಾಂಕ ೫/೯/೧೨ ರಂದು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ, ಈಶ್ವರ ಮಂಗಲ ಪಂಚಮುಖಿ ಹನುಮ ಗಿರಿಗೆ ನಡೆಯಿತು. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿನ ಸರಸ್ವತಿ ವಂದನಾ, ಕಲ್ಲಡ್ಕ ಶಿಶು ಮಂದಿರಗಳ ಪುಟಾಣಿಗಳಿಂದ ದೊರೆತ ಸ್ವಾಗತ ರೂಪಿತಗೊಂಡ ಪ್ರಹಸನ, ಮನಮೋಹಕಗೊಂಡಿತ್ತು. ಉಪಹಾರವನ್ನು ಸೇವಿಸಿ, ಈಶ್ವರ ಮಂಗಲದ ಹನುಮ ಬೆಟ್ಟಕ್ಕೆ ಹೋಗಿ ದೇವರ ದರುಶನ ಮಾಡಿ, ಪೂರ್ವ ನಿಗದಿಯಂತೆ ಈಶ್ವರ ಮಂಗಲದ ಪಂಚಲಿಂಗೇಶ್ವರ […]

ಮಾಂಗಲ್ಯ ನಿಧಿ ಧನ ಸಹಾಯ

ಉಪ್ಪಿನಂಗಡಿ : ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇದರ ವತಿಯಿಂದ ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆಂದು ನೀಡಲಾಗುವ ಮಾಂಗಲ್ಯ ನಿಧಿ ಧನ ಸಹಾಯವನ್ನು ಉಪ್ಪಿನಂಗಡಿಯ ದಿವಂಗತ ನಾರಾಯಣ ಟೈಲರ್ ರವರ ಮಗಳ ಮದುವೆಗೆಂದು ಮದುಮಗಳ ತಾಯಿ ಶ್ರೀಮತಿ ಕೃಷ್ಣಮ್ಮ ರವರಿಗೆ ವಿತರಿಸುತ್ತಿರುವುದು ಚಿತ್ರದಲ್ಲಿ ಉದ್ಯಮಿ ಹಾಗೂ ನಿವೃತ್ತ ಸೇನಾನಿ ಕೆ ಸುರೇಶ್ ಮತ್ತು ಶಿಶು ಮಂದಿರ ಸಮಿತಿಯ ಗೌರವಾಧ್ಯಕ್ಷ ಯು ರಾಮ, ಅಧ್ಯಕ್ಷ ಮನೋಜ್ ಶೆಟ್ಟಿ ರವರನ್ನು ಕಾಣಬಹುದು.