ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ. ಶ್ರೀಪತಿ ಕಲ್ಲೂರಾಯ

Leaf
Leaf

ಪುತ್ತೂರು, ಮೇ 16: ಮಕ್ಕಳ ಭವಿಷ್ಯದ ಚಿಂತೆ ಎಲ್ಲರಿಗೂ ಇರುತ್ತದೆ. ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮತ್ತು ರಕ್ಷಕರ ಪಾತ್ರ ಮಹತ್ವದ್ದು. ಅವರನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸವನ್ನು ಇಬ್ಬರು ಸೇರಿಯೇ ಮಾಡಬೇಕು. ಸೈಕಲ್ ತುಳಿಯುವಾಗ ಒಂದು ಚಕ್ರದಲ್ಲಿ ಗಾಳಿ ಇದ್ದು ಇನ್ನೊಂದರಲ್ಲಿಲ್ಲ ಎಂದರೆ ಸೈಕಲ್ ಸವಾರಿ ಮಾಡಲು ಯೋಗ್ಯವಾಗಿರುವುದಿಲ್ಲ. ಮಕ್ಕಳ ವಿಷಯದಲ್ಲೂ ಅಷ್ಟೆ ಶಿಕ್ಷಕರು ಮತ್ತು ರಕ್ಷಕರು ಎರಡು ಚಕ್ರಗಳಂತೆ ಕಾರ್ಯನಿರ್ವಹಿಸಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಮತ್ತು ಐಕ್ಯೂಎಸಿ ಘಟಕದ ಸಂಯೋಜನೆಯಲ್ಲಿ ಆಯೋಜಿಸಿದ್ದ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್, ಮಕ್ಕಳನ್ನು ಕಾಲೇಜಿಗೆ ಸೇರಿಸಿದ ಕೂಡಲೇ ಪೋಷಕರ ಜವಾಬ್ದಾರಿ ಮುಗಿಯುವುದಿಲ್ಲ. ಅವರ ಬೆಳವಣಿಗೆ, ವರ್ತನೆ, ಓದುವಿಕೆಗಳ ಬಗ್ಗೆ ಪೋಷಕರು ವಿಚಾರಿಸುತ್ತಿರಬೇಕು. ನಮ್ಮ ಸಂಸ್ಥೆ ಪ್ರಾರಂಭದಿಂದಲೂ ಕೆಲವು ಮೂಲ ತತ್ವಗಳನ್ನು ಅನುಸರಿಸಿಕೊಂಡು ಬಂದಿದೆ. ಅದನ್ನು ಉಳಿಸುವ ಕೆಲಸವನ್ನು ನಾವು ಮುಂದುವರಿಸಿದ್ದೇವೆ ಕೂಡ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪೆÇ್ರ. ವಿಷ್ಣುಗಣಪತಿ ಭಟ್, ಐಕ್ಯುಎಸಿ ಸಂಯೋಜಕಿ ಡಾ. ರವಿಕಲಾ, ಭಾರತೀಯ ಸಂಸ್ಕøತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್, ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ, ಕಾಲೇಜಿನ ವಿಶೇಷಾಧಿಕಾರಿ ಶ್ರೀಧರ ನಾಯ್ಕ್, ಶಿಕ್ಷಕರು ಮತ್ತು ಪೆÇೀಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರ್ರಾಂಶುಪಾಲ ಪೆÇ್ರ. ವಿಷ್ಣುಗಣಪತಿ ಭಟ್ ಸ್ವಾಗತಿಸಿ, ಡಾ. ರವಿಕಲಾ ವಂದಿಸಿದರು. ಡಾ. ವಿದ್ಯಾ ಎಸ್. ನಿರೂಪಿಸಿದರು.

Leave a Reply

Your email address will not be published. Required fields are marked *

Related News

News
16/06/2025

ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶ

Events
16/06/2025

ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Uncategorized
16/06/2025

ಕಡಬ ಸರಸ್ವತೀ ಪ್ರೌಢಶಾಲೆಯಲ್ಲಿ ಹಿಂದೂ ಸಾಮ್ರಾಜ್ಯ ದಿನ