ಅಮೋಘ ಯಶಸ್ಸನ್ನು ದಾಖಲಿಸಿದ ಪುತ್ತೂರಿನ ವಿವೇಕ ಉದ್ಯೋಗ ಮೇಳ

Leaf
Leaf

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಬೃಹತ್ ವಿವೇಕ ಉದ್ಯೋಗ ಮೇಳ – 2017 ಅಮೋಘ ಯಶಸ್ಸನ್ನು ದಾಖಲಿಸಿದೆ. ಆನ್ ಲೈನ್ ಹಾಗೂ ಆಫ್ ಲೈನ್ ನಲ್ಲಿ ಒಟ್ಟಾಗಿ 15,112 ಮಂದಿ ಈ ಉದ್ಯೋಗ ಮೇಳಕ್ಕಾಗಿ ತಮ್ಮನ್ನು ನೋಂದಾವಣೆ ಮಾಡಿಕೊಂಡಿದ್ದರು. ಅವರಲ್ಲಿ 10,020 ಮಂದಿ ಇಂದು ನಡೆದ ಸಂದರ್ಶನಕ್ಕೆ ಆಗಮಿಸಿದ್ದರು. ತಾಂತ್ರಿಕ, ತಾಂತ್ರಿಕೇತರ ಹಾಗೂ ಇತರ ಎಂಬ ಮೂರು ವರ್ಗಗಳಲ್ಲಿ ಸಂದರ್ಶನ ನಡೆಸಲಾಯಿತು. ಈ ಮೂರೂ ವಿಭಾಗಗಳನ್ನು ಒಳಗೊಂಡು ಒಟ್ಟು 3232 ಮಂದಿಯನ್ನು ಶಾರ್ಟ್‌ಲಿಸ್ಟ್ ಮಾಡಲಾಗಿರುವುದು ಈ ಉದ್ಯೋಗ ಮೇಳದ ಯಶಸ್ಸನ್ನು ಬಿಂಬಿಸಿದೆ.

VVs3

ಮುಖ್ಯವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘವು ಬಯಸಿದಂತೆ ಗ್ರಾಮಾಂತರ ಭಾಗದ ಅನೇಕ ಮಂದಿ ಉದ್ಯೋಗ ವಂಚಿತರಿಗೆ ಈ ಉದ್ಯೋಗ ಮೇಳ ಬದುಕಿನ ಹಾದಿಯನ್ನು ತೆರೆದಿದೆ. ಇದೇ ಸಂದರ್ಭದಲ್ಲಿ ಸ್ವ-ಉದ್ಯೋಗ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸುವುದರ ಮುಖೇನ ಸ್ವಂತ ಉದ್ದಿಮೆ ಆರಂಭಿಸುವವರಿಗೆ ಪ್ರೋತ್ಸಾಹ, ಮಾಹಿತಿ ನೀಡಲಾಯಿತು. ಲಘು ಭಾರತಿ ಬೆಂಗಳೂರು ಹಾಗೂ ಉಜಿರೆಯ ರುಡ್ ಸೆಟ್ ಸಂಸ್ಥೆಯವರು ಸ್ವ ಉದ್ಯೋಗ ವಿವರಗಳನ್ನು ನೀಡಿದರು. ಪುತ್ತೂರಿನ ಐಶ್ವರ್ಯ ಬ್ಯೂಟಿ ಪಾರ್ಲರ್‌ನ ಶ್ರೀಮತಿ ಐಶ್ವರ್ಯ, ಶಶಿ ಸ್ಟುಡಿಯೋದ ಶಶಿಧರ್, ರೆಕ್ಸಿನ್ ಬ್ಯಾಗ್ ತಯಾರಕ ಶಂಕರನಾರಾಯಣ ಭಟ್ ಹಾಗೂ ಅಸ್ತ್ರ ಒಲೆ ತಯಾರಕ ಸತ್ಯಮೂರ್ತಿ ಬಾಳಿಲ ಅವರುಗಳನ್ನು ಸ್ವ ಉದ್ಯೋಗವನ್ನು ಯಶಸ್ವಿಯಾಗಿ ನಡೆಸುತ್ತಿರುವ ಹಿನ್ನಲೆಯಲ್ಲಿ ಗುರುತಿಸಲಾಯಿತು. ಈ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ವಿವೇಕಾನಂದ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ವಿಶೇಷ ಶ್ರಮ ವಹಿಸಿದರು.

ಈ ಉದ್ಯೋಗ ಮೇಳಕ್ಕೆ ಸಹಕರಿಸಿದ ನಾಡಿನ ವಿವಿಧ ಕಂಪೆನಿಗಳು, ಬ್ಯಾಂಕುಗಳು, ಸಂಸ್ಥೆಗಳು, ಆರಕ್ಷಕ ಸಿಬ್ಬಂದಿ, ಉಪನ್ಯಾಸಕ ವರ್ಗ, ವಿದ್ಯಾರ್ಥಿ ವೃಂದ, ಸ್ವಯಂಸೇವಕರು, ಉದ್ಯೋಗಾರ್ಥಿಗಳಾಗಿ ಹೆಸರು ನೋಂದಾಯಿಸಿದವರು, ನಾಗರಿಕರು, ಸಹೃದಯರು, ಮಾಧ್ಯಮ ಮಿತ್ರರು ಮಾತ್ರವಲ್ಲದೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಕೃತಜ್ಞತೆ ಸಲ್ಲಿಸುತ್ತದೆ.

ಅಭ್ಯರ್ಥಿಗಳ ಅಭಿಪ್ರಾಯ

  • ನಾನು ಮೊದಲಬಾರಿ ಸಂದರ್ಶನ ಮಾಡಿದಾಗ ಹೊಸದಾಗಿ ಆನುಭವ ಸಿಕ್ಕಿದೆ ಇನ್ನು ಮುಂದೆ ಯಾವುದೇ ಸಂದರ್ಶನವನ್ನು ಎದುರಿಸಲು ಸಿದ್ಧನಿದ್ಧೇನೆ. – ಹರಿಪ್ರಸಾದ್, ಬೆಳ್ತಂಗಡಿ
  • ನಾನು ಹಲವು ಬಾರಿ ಇಂಟರ್‌ವ್ಯೂವ್ ಎದುರಿಸಿದ್ದೇನೆ, ಅವೆಲ್ಲವುಕ್ಕಿಂತಲೂ ಇದು ಸೂಪರ್ ಅನುಭವ – ಸುಷ್ಮಾ ಬಿ.
  • ಇದು ನನ್ನ ಮೊದಲ ಅನುಭವ, ಉತ್ತಮವಾಗಿದೆ- ಶ್ರೀಲಕ್ಷ ಕೆ. ವಿ.
  • ಉದ್ಯೋಗ ಮೇಳದಂತಹ ಕಾರ್ಯಕ್ರಮವು ಉದ್ಯೋಗಾಂಕಾಕ್ಷಿಗಳಿಗೆ ಉತ್ತಮ ವೇದಿಕೆಯಾಗಿದೆ. ನಮಗೆ ಸಂದರ್ಶನದ ಅನುಭವವಾಯಿತು. ಇದು ಹೀಗೆಯೇ ಮುಂದುವರೆಯಲಿ- ಅಮೃತ ಕೃಷ್ಣ ಎನ್.

Leave a Reply

Your email address will not be published. Required fields are marked *

Related News

News
16/06/2025

ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶ

Events
16/06/2025

ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Uncategorized
16/06/2025

ಕಡಬ ಸರಸ್ವತೀ ಪ್ರೌಢಶಾಲೆಯಲ್ಲಿ ಹಿಂದೂ ಸಾಮ್ರಾಜ್ಯ ದಿನ