ವಿದ್ಯಾವರ್ಧಕ ಸಂಘಕ್ಕೆ ಕರ್ನಾಟಕ ರಾಜ್ಯಪಾಲರಾದ ವಜೂಭಾಯಿ ರುಢಬಾಯಿ ವಾಲಾರವರು 7-1-2015 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಸಂಸ್ಥೆಯ ಗಣ್ಯರು ಉಪಸ್ಥಿತರಿದ್ದರು.
ವಿದ್ಯಾಭಾರತಿ ವತಿಯಿಂದ ದಿನಾಂಕ 16-11-2014 ರಿಂದ 18-11-2014 ರವರೆಗೆ ರಾಜಸ್ಥಾನದ ಬಿಕನೆರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಿಶೋರವರ್ಗ ವಿಭಾಗದಲ್ಲಿ ವಿಷ್ಣುಕೀರ್ತಿ ಹಾಗೂ ಪ್ರನ್ವಿತ್ ಆಳ್ವ -ಇನೋವೇಟಿವ್ ವಿಭಾಗದಲ್ಲಿ ಪ್ರದರ್ಶಿಸಿದ್ದ ಸ್ಪೈ ಮೇಷೀನ್ ಮಾದರಿಯು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತದೆ ಎಂದು ಶಾಲಾ ಮುಖ್ಯಗುರು ತಿಳಿಸಿದ್ದಾರೆ.
More than 800 highschool students of Vivekananda Kannada and English medium school participated in swacha Bharat andolan at Puttur… Also more than 2000 college students participated in the same, selected 150 centres of Puttur town and cleaning done……
ಕೇಂದ್ರ ರೈಲ್ವೆ ಸಚಿವರಾದ ಡಿ. ವಿ. ಸದಾನಂದ ಗೌಡ ಮತ್ತು ಸಂಸದ ಶ್ರೀ ನಳೀನ್ ಕುಮಾರ್ ಕಟೀಲ್‌ರವರು ಇಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ – ಸಂಸ್ಥೆಗಳಿಗೆ ಭೇಟಿ ನೀಡಿದರು. ಸ್ವಾಮಿ ವಿವೇಕಾನಂದರ ಭವ್ಯ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಶ್ರೀ ಡಿ. ವಿ. ಸದಾನಂದ ಗೌಡ ಮತ್ತು ಶ್ರೀ ನಳೀನ್ ಕುಮಾರ್ ಕಟೀಲ್‌ರವರನ್ನು ಸನ್ಮಾನಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಹಿರಿಯರು ಹಾಗೂ ಪುತ್ತೂರು ನಗರದ ಗಣ್ಯರು ಉಪಸ್ಥಿತರಿದ್ದರು.
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಸ್ಥಾಪಿಸಿದ ಹವಾಮಾನ ವೀಕ್ಷಣಾ ಘಟಕದ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂಗಳೂರು ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಇಸ್ರೋದ ಈ ಕೊಡುಗೆ ಅತ್ಯಂತ ಉಪಕಾರಿಯಾಗಿದ್ದು, ಇದನ್ನು ಇಂಜಿನಿಯರಿಂಗ್ ಕಾಲೇಜಿನಂತಹ ಶಿಕ್ಷಣ ಸಂಸ್ಥೆಗಳು ಪರಿಣಾಮಕಾರಿಯಾಗಿ ಬಳಸಿಕೊಂಡು ಜನಸಾಮಾನ್ಯರಿಗೆ ಮತ್ತು ಸ್ಥಳೀಯ ರೈತಾಪಿ ವರ್ಗಕ್ಕೆ ಇದರ ಪೂರ್ಣ ಪ್ರಯೋಜನವನ್ನು ನೀಡುತ್ತಿರುವ ಬಗ್ಗೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ