• 08251 236599
  • 08251 236444
  • vvsputtur@gmail.com

ಉದ್ಯೋಗ ನೈಪುಣ್ಯ ಪುಸ್ತಕಗಳ ಲೋಕಾರ್ಪಣೆ

ಉದ್ಯೋಗ ನೈಪುಣ್ಯ ಪುಸ್ತಕಗಳ ಲೋಕಾರ್ಪಣೆ ಮತ್ತು ನೈಪುಣ್ಯ ಸಾಧಕರ ಸಮ್ಮಿಲನ ಕಾರ್ಯಕ್ರಮ ಪುತ್ತೂರಿನ ವಿವೇಕಾನಂದ ಕ್ಯಾಂಪಸ್­ನಲ್ಲಿ ದಿನಾಂಕ 20 ಸೆಪ್ಟೆಂಬರ್ 2021 ರಂದು ಅಪರಾಹ್ನ 2.30 ರಿಂದ ಪ್ರಾರಂಭಗೊಂಡು 4.30ರ ತನಕ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಕು. ಶೋಭಾ ಕರಂದ್ಲಾಜೆ ಉದ್ಯೋಗ ನೈಪುಣ್ಯ ಪುಸ್ತಕಗಳ ಲೋಕಾರ್ಪಣೆ ಮಾಡಿದರು.

ಲೋಕಾರ್ಪಣೆಗೊಂಡ 15 ಪುಸ್ತಗಳು:

• ಮಧು ಮಾಹಿತಿ
• ಕಸಿ ಕಟ್ಟುವಿಕೆ ಮತ್ತು ಅಣಬೆ ಕೃಷಿ
• ಫ್ಯಾಶನ್ ಡಿಸೈನ್ ಮತ್ತು ಗಾರ್ಮೆಂಟ್ ಮೇಕಿಂಗ್
• ವೆಲ್ಡಿಂಗ್ ಮತ್ತು ಅಲ್ಯುಮಿನಿಯಮ್ ಫ್ಯಾಭ್ರಿಕೇಷನ್
• ನೆಲಹಾಸು (ಟೈಲ್ಸ್ ಹಾಕುವ ಕ್ರಮಗಳು)
• ಗೃಹ ಶುಶ್ರೂಷೆ (Home Nursing)
• ಪ್ಲಂಬಿಂಗ್
• ಫುಡ್ ಟೆಕ್ನಾಲಜಿ (ಅಹಾರ ಮೌಲ್ಯವರ್ಧನೆ)
• ಮೊಬೈಲ್ ಫೋನ್ ಸರ್ವೀಸಿಂಗ್
• ಸಿ.ಸಿ.ಟಿ.ವಿ ಅಳವಡಿಕೆ
• ವಿದ್ಯುತ್ ಉಪಕರಣಗಳ ದುರಸ್ತಿ
• ಹೈನುಗಾರಿಕೆ
• ಇಲೆಕ್ಟ್ರಿಕಲ್ ವಯರಿಂಗ್
• ಗ್ರಾಹಕ ಮಾಹಿತಿ ಸೇವಾಕೇಂದ್ರ ನಿರ್ವಹಣೆ
• ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ದುರಸ್ತಿ

ಉದ್ಯೋಗ ನೈಪುಣ್ಯ ತರಬೇತಿ ಶಿಬಿರಗಳಲ್ಲಿ ತರಬೇತಿ ಪಡೆದ ನಂತರ ಸ್ವಯಂ ಉದ್ಯೋಗ ಪ್ರಾರಂಭಿಸಿರುವ 90 ಆಯ್ಕೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ. ಕೆ. ವಿ ಮತ್ತು ಕ್ಯಾಂಪ್ಕೋ ನಿಯಮಿತದ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ಕೊಡ್ಗಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಶ್ರೀ ಪ್ರಕಾಶ್ ಪಿ.ಎಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸಾಧಕರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಬೆಳಿಗ್ಗೆ 9.00 ರಿಂದಲೇ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆಯಿತು.

Highslide for Wordpress Plugin