ದೇಶದ ಒಳಿತಿಗಾಗಿ ಉದ್ಯೋಗ ಸೃಷ್ಟಿಯಾಗಬೇಕು: ಬಿ.ಎಸ್.ಶ್ರೀನಿವಾಸನ್
ಪುತ್ತೂರು: ಭಾರತವು ಇಂದು ಯುವಜನರನ್ನು ಅವಲಂಭಿಸಿಕೊಂಡಿದೆ. ನಮ್ಮಲ್ಲಿ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸತನದ ಕೊರತೆ ಇದು ಹೀಗೆಯೇ ಮುಂದುವರಿದರೆ ಇದ್ದು ಮುಂದಿನ ವರ್ಷಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ದೇಶದ ಒಳಿತಿಗಾಗಿ ಉದ್ಯೋಗದ ಸೃಷ್ಟಿಯಾಗಬೇಕಾಗಿದೆ ಎಂದು ಲಘು ಉದ್ಯೋಗ ಭಾರತೀಯ ಉಪಾಧ್ಯಕ್ಷ ಬಿ ಎಸ್ ಶ್ರೀನಿವಾಸನ್ ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶುಕ್ರವಾರ ವಿವೇಕಾನಂದ ಕ್ಯಾಂಪಸ್‌ನಲ್ಲಿ ಆಯೋಜಿಸಲಾದ ಬೃಹತ್ ಉದ್ಯೋಗ ಮೇಳದ ಸಂದರ್ಭದಲ್ಲಿ ನಡೆದ ಸ್ವ ಉದ್ಯೋಗ ಮಾಹಿತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿಕ್ಸೂಚಿ ಭಾಷಣ ಮಾಡಿದ ಮಂಗಳೂರಿನ ಡಿಐಸಿಯ ಸಹ ನಿರ್ದೇಶಕ ವೆಂಕಟೇಶ ಕೆ.ವಿ ಮಾತನಾಡಿ ಇಂದಿನ ಯುವಜನತೆಯಲ್ಲಿ ಮಾಹಿತಿ, ಕೌಶಲ್ಯದ ಕೊರತೆಯಿದೆ. ಸಮಾಜದಲ್ಲಿ ಮುಂದೆ ಬರಬೇಕೆನ್ನುವ ಹಂಬಲ ಇರಬೇಕು. ಮೊದಲು ಸಂಕಷ್ಟಗಳು ಬರುತ್ತವೆ. ಅದನ್ನು ದಿಟ್ಟವಾಗಿ ಅದನ್ನು ಎದುರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲಘು ಉದ್ಯೋಗ ಭಾರತಿಯ ಕಾರ್ಯದರ್ಶಿಯಜ್ಞ ನಾರಾಂiಣ ಉಪಸ್ಥಿತರಿದ್ದರು. ವಿವೇಕಾನಂದ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ ವಿಘ್ನೇಶ್ವರ ವರ್ಮುಡಿ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕ ವಾಸುದೇವ ಎನ್ ವಂದಿಸಿ, ವಿಭಾಗದ ಉಪನ್ಯಾಸಕಿ ಮಲ್ಲಿಕಾ ವಿ ಕಾರ್ಯಕ್ರವನ್ನು ನಿರ್ವಹಿಸಿದರು.