
ಪುತ್ತೂರು,ಮಾ. 22: ನಮ್ಮ ರಾಷ್ಟ್ರದ ಸ್ಥಾನಮಾನ ಅನಾವರಣವಾಗಬೇಕಾದರೆ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿರುತ್ತದೆ. ಭಾರತಕ್ಕೆ ಒಂದು ಸಾಂಸ್ಕøತಿಕ ಪರಂಪರೆ ಇದೆ, ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ, ಇಂತಹ ಸಂದರ್ಭದಲ್ಲಿ ಯುವಜನತೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ವಿದ್ಯಾರ್ಥಿಗಳು ಕೀಳರಿಮೆಯ ಮಾನಸಿಕತೆಯನ್ನು ಬಿಟ್ಟು ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು, ಹಾಗಿದ್ದಾಗ ಮಾತ್ರ ನಾವು ಗೆಲ್ಲಲು ಸಾಧ್ಯ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಇಲ್ಲಿ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವದ ಸಂಭ್ರಮಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ರಾಷ್ಟ್ರದ ಹಿತ ಚಿಂತನೆಯ ಪರಿಕಲ್ಪನೆಯನ್ನು ಇಟ್ಟುಕೊಂಡು ವಿವೇಕಾನಂದ ವಿದ್ಯಾಸಂಸ್ಥೆಯು ಪ್ರಾರಂಭವಾಯಿತು. ವಿದ್ಯಾರ್ಥಿಗಳಲ್ಲಿ ಸಮಾಜದ ಚಿಂತನೆ, ಸೇವೆಯ ಮನೋಭಾವ ಬೆಳೆಸಲು ಈ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತದೆ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ವಿಭಾಗದ ವಿವೇಕ ಸ್ಮೃತಿ ಪುಸ್ತಕವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಾಧಕರಾದ ಡಾ. ಗೌರಿ ಪೈ( ವೈದ್ಯಕೀಯ ಮತ್ತು ಸಮಾಜ ಸೇವೆ ), ಎಂ ರಾಮ ಮೋಹನ್ ರಾವ್ ( ಕಾನೂನು), ಡಾ. ಮೋಹನ್ ಕುಮಾರ್ ವೈ (ಸಾಮಾಜಿಕ ಹೋರಾಟ ), ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ( ಶಿಕ್ಷಣ ಕ್ಷೇತ್ರ ), ಸತ್ಯಶಂಕರ್ ( ಉದ್ಯಮ ಮತ್ತು ವ್ಯವಹಾರ ),ವೇ. ಮೂ. ಕಶೆಕೊಡಿ ಸೂರ್ಯನಾರಾಯಣ ( ಧಾರ್ಮಿಕ ಮತ್ತು ಸಮಾಜ ಸೇವೆ), ಡಾ. ರವೀಶ್ ಪಡುಮಲೆ( ಜನಪದ), ದೇವಿ ಪ್ರಸಾದ್ ಕಡಮಜೆ ( ಕೃಷಿ), ಪಿ. ಜಿ.ಎಸ್.ಎನ್.ಪ್ರಸಾದ್ ( ಮಳೆ ದಾಖಲೀಕರಣ ), ನಾಯಕ್ ಪಾಲೆಚ್ಚಾರು ( ಯಕ್ಷಗಾನ) ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ,ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ ಕೃಷ್ಣ ಭಟ್,ಕಾಲೇಜಿನ ಪರೀಕ್ಷಾಂಗ ಕುಲಸಚಿವ ಮತ್ತು ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ. ಶ್ರೀಧರ್ ಹೆಚ್. ಜಿ ಮತ್ತು ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಉಪಸ್ಥಿತರಿದ್ದರು.
ತದನಂತರ ಮೈಸೂರಿನ ಸರಗೂರು ವಿವೇಕಾನಂದ ಆಸ್ಪತ್ರೆಯ ಮೂಳೆಶಸ್ತ್ರ ಚಿಕಿತ್ಸಾ ತಜ್ಞ ಮತ್ತು ಸ್ವಾಮಿ ವಿವೇಕಾನಂದ ಯುವಜನ ವಿಭಾಗದ ಮಾರ್ಗದರ್ಶಕ ಡಾ. ಸೀತಾರಾಮ್ ಎಂ.ಆರ್ ಭಾರತೀಯ ಶ್ರೀಮಂತ ಜ್ಞಾನ ಸಂಪತ್ತಿನ ಅನಾವರಣ: ಶಿಕ್ಷಣದ ಕುರಿತು ಹೊಸ ದೃಷ್ಟಿಕೋನ ಎಂಬ ವಿಷಯದ ಕುರಿತು ವಿಚಾರಗೋಷ್ಠಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಸ್ವಾಗತಿಸಿ,ಕಾಲೇಜಿನ ಪ್ರಾಂಶುಪಾಲ ಪೆÇ್ರ. ವಿಷ್ಣು ಗಣಪತಿ ಭಟ್ ವಂದಿಸಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಪೆÇ್ರ. ಲಕ್ಷ್ಮಿ ಭಟ್ ನಿರ್ವಹಿಸಿದರು.
ಸಮಾರೋಪ ಸಮಾರಂಭ
ವಿದ್ಯಾದಾನ ಅತ್ಯಂತ ಶ್ರೇಷ್ಠ ದಾನ: ಎಡನೀರು ಶ್ರೀ
ಪುತ್ತೂರು, ಮಾರ್ಚ್ 22: ” ವಿದ್ಯಾದಾನ ಅತ್ಯಂತ ಶ್ರೇಷ್ಠವಾದುದು. ಯುವ ಜನತೆ ದುಶ್ಚಟ, ದುರ್ನಡತೆಗಳಿಂದ ದಾರಿತಪ್ಪುವ ಸನ್ನಿವೇಶ ಇರುತ್ತದೆ. ಆಗ ನಮ್ಮ ಸಂಸ್ಕøತಿಯ ಅರಿವು ಮೂಡಿಸಿ ನೈತಿಕ ಮೌಲ್ಯಗಳನ್ನು ಹೇಳಿ ಸರಿ ದಾರಿ ತೋರುವ ಕಾರ್ಯವಾಗಬೇಕು. ವಿದ್ಯಾಸಂಸ್ಥೆಯೊಂದು ಊಹಿಸಲಾಗದ ರೀತಿಯಲ್ಲಿ ಅಭಿವೃದ್ಧಿ ಹೊಂದಿದಾಗ ಅದು ಅಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳಿಗೊಂದು ಹೆಮ್ಮೆಯ ಕ್ಷಣ ” ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದರು.
ಇವರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಪಿ.ಎಲ್ ಧರ್ಮ, ಶಿಕ್ಷಕರಿಲ್ಲದೇ ವ್ಯಕ್ತಿಯೊಬ್ಬನ ಜೀವನ ಪೂರ್ಣವಾಗಲು ಸಾಧ್ಯವಿಲ್ಲ.ವಿದ್ಯಾರ್ಥಿಗಳು ಶಿಕ್ಷಣ ಪೂರೈಸಿದ ನಂತರವೂ ಸಂಸ್ಥೆಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರಬೇಕು. ಸಮಾಜವೇ ಒಂದು ಪಾಠಶಾಲೆ. ಅಲ್ಲಿ ನಾವು ಕಲಿಯುವುದು ಬಹಳಷ್ಟಿದೆ ” ಎಂದು ನುಡಿದರು.
” ಜ್ಞಾನ ಎಂಬುದು ಪಠ್ಯಪುಸ್ತಕದಾಚೆಗಿನ ಅರಿವು. ಪಠ್ಯ ವಿಷಯಗಳ ಜೊತೆಗೆ ಇತರ ಜ್ಞಾನ ಕೌಶಗಳನ್ನೂ ಗಳಿಸಿದಾಗ ಜೀವನದಲ್ಲಿ ಪರಿಪೂರ್ಣತೆ ಸಾಧ್ಯ. ನಮ್ಮ ತಾಯಿ, ರೈತರು ಜಗತ್ತಿನ ಉತ್ತಮ ವಿಜ್ಞಾನಿಗಳು. ಬದುಕೇ ಒಂದು ಪ್ರಯೋಗಶಾಲೆ. ಹಾಗಿರುವಾಗ ವೈಜ್ಞಾನಿಕ ದೃಷ್ಟಿಕೋನವನ್ನು ನಾವು ಬೆಳೆಸಿಕೊಳ್ಳಬೇಕು ” ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಡಿ.ಆರ್.ಡಿ.ಒ ದೆಹಲಿಯ ಸಾಲಿಡ್ ಸ್ಟೇಟ್ ಭೌತಶಾಸ್ತ್ರ ಪ್ರಯೋಗಶಾಲೆಯ ವಿಜ್ಞಾನಿ ಡಾ. ಮಹಾದೇವ ಭಟ್ ಕಾನತ್ತಿಲ ತಿಳಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷೀಯ ಮಾತುಗಳನ್ನಾಡಿದರು.ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಸಂಸ್ಥೆಯ ವಾರ್ಷಿಕ ವರದಿಯನ್ನು ಮಂಡಿಸಿದರು.ಸ್ನಾತಕೋತ್ತರ ಸಂಸ್ಥೆಯಲ್ಲಿ ರ್ಯಾಂಕ್ ಗಳಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿವೇಕೋತ್ಸವದ ಪ್ರಯಕ್ತ ನಡೆಸಲಾದ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್.ಜಿ ವಂದಿಸಿ ಸಂಸ್ಕ್ರತ ವಿಭಾಗದ ಮುಖ್ಯಸ್ಥ ಡಾ. ಶ್ರೀಷ ಕುಮಾರ್ ನಿರೂಪಿಸಿದರು.
