• 08251 236599
  • 08251 236444
  • vvsputtur@gmail.com

Sri Bharati Shishu Mandir Kadaba

ಶ್ರೀ ಭಾರತೀ ಶಿಶು ಮಂದಿರ ಕಡಬ

Phone No : 08251-260255

About

ಸನ್ಮಾನ್ಯ ವಿದ್ಯಾಭಿಮಾನಿಗಳೇ,

ಸನಾತನವಾದ, ಅತ್ಯುನ್ನತ ತತ್ವ-ಮೌಲ್ಯಗಳನ್ನು ಹೊಂದಿರುವ ಭಾರತೀಯ ಸಂಸ್ಕೃತಿ ನಮ್ಮದು. ಅನಾದಿಯಾದ, ಆಳವಾದ ಮೂಲದಿಂದ ಪೋಷಣೆ ಪಡೆದು ಇಂದು ಹಲವಾರು ಕವಲುಗಳಿರುಉವ ಮಹಾವೃಕ್ಷವಾಗಿ ಬೆಳೆದಿರುವ ನಮ್ಮಿ ಸಂಸ್ಕೃತಿಯೇ ನಮಗೆ ಒಳ್ಳೆಯ ಸಂಸ್ಕಾರ ಯುಕ್ತವಾಗಿ ಬಾಳಲಿ ಬುನಾದಿ.

ಇಂದು ಆಧುನಿಕ ಶಿಕ್ಷಣ ಯಾಂತ್ರಿಕ ಜೀವನದ – ವೇಗದ ಬದುಕಿನ ಪಥದಲ್ಲಿ ನಮ್ಮ ಪರಂಪರೆಯ ಆದರ್ಶಕ, ಉದಾತ್ತ ಮೌಲ್ಯಗಳು ನಶಿಸಿ ಹೋಗುತ್ತಿವೆ. ದೇಶ-ಸಂಸ್ಕೃತಿಗಳ ಬಗ್ಗೆ ಗೌರವ ಶ್ರದ್ಧೆಗಳು ಮಾಯವಾಗುತ್ತಿವೆ. ನಮ್ಮ ಸನಾತನವಾದ ಧರ್ಮ ಸಂಸ್ಕೃತಿಗಳ ಕುರಿತು ಪ್ರಾಥಮಿಕ ಜ್ಞಾನವನ್ನು ತಿಳಿಸಿಕೊಡಬಲ್ಲ ವಿದ್ಯಾಲಯಗಳ ಕೊರತೆ ನಮ್ಮಲ್ಲಿವೆ. ಈ ಕೊರತೆಯನ್ನು ನೀಗಿಸಿ ನಮ್ಮ ಮಕ್ಕಳಿಗೆ ಭಾರತೀಯ ಪರಂಪರೆಯ ತಳಹದಿಯ ಶಿಕ್ಷಣವನ್ನು ನೀಡುವ ಉದ್ದೇಶದಿಂದ ನಮ್ಮ ಸನಾತನ ಆಚಾರ-ವಿಚಾರಗಳನ್ನು ಪರಿಚಯಿಸುವ ದೃಷ್ಟಿಯಿಂದ ಗ್ರಾಮೀಣ ಪ್ರದೇಶವಾದ ಕಡಬದಲ್ಲಿ ಆದರ್ಶ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯಿಡುತ್ತಿದ್ದೇವೆ.

ಪ್ರಥಮ ಹೆಜ್ಜೆಯಾಗಿ ಸಣ್ಣ ಮಕ್ಕಳಿಂದಲೇ ಈ ಶಿಕ್ಷಣ ವ್ಯವಸ್ಥೆಯನ್ನು ಆರಂಭಿಸುವ ದೃಷ್ಟಿಯಿಂದ  ಶ್ರೀ ಭಾರತೀ ಶಿಶು ಮಂದಿರ’ವನ್ನು ಪ್ರಾರಂಭಿಸಿರುತ್ತೇವೆ. ಇಲ್ಲಿ ಎರಡೂವರೆ ವರ್ಷದಿಂದ ಐದು ವರ್ಷ ಪ್ರಾಯದ ಮಕ್ಕಳನ್ನು ನೊಂದಾಯಿಸಿ ‘ಹಿಂದೂ ಸೇವಾ ಪ್ರತಿಷ್ಠಾನ’ದಿಂದ ತರಬೇತಿ ಹೊಂದಿದ ನುರಿತ ಮಾತಾಜಿಯವರು, ಸಾಮಾನ್ಯ ಓದು ಬರಹದ ಜೊತೆಗೆ ಭಾರತೀಯ ಪರಂಪರೆಯ ಶಿಕ್ಷಣ ನೀಡುತ್ತಿದ್ದಾರೆ. ಈ ಕೇಂದ್ರವು ಗುರುಕುಲ ಮಾದರಿಯ ಭಾರತೀಯ ಸಂಸ್ಕೃತಿಯ ವಾತಾವರಣದಲ್ಲಿ, ಉತ್ತಮ ವ್ಯಕ್ತಿತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಉದಾರ ಹೃದಯಿಗಳೇ,

ಈ ಕೇಂದ್ರವನ್ನು ಆದರ್ಶ ವಿದ್ಯಾಕೇಂದ್ರವನ್ನಾಗಿ ಮಾಡಬೇಕೆಂಬ ಸಂಕಲ್ಪ ನಮ್ಮದು. ಪ್ರಕೃತ ಸುಸಜ್ಜಿತ ಶಾಲಾ ಕಟ್ಟಡದ ನಿರ್ಮಾಣದ ಜೊತೆಗೆ, ಪೂರಕವಾಗಿ ನೀರು, ಬೆಳಕು, ಪೀಠೋಪಕರಣಗಳು, ಪುಸ್ತಕಾಲಯ, ಪಾಠೋಪಕರಣ, ಶೌಚಾಲಯ ಇತ್ಯಾದಿಗಳನ್ನು ರೂಢಿಸಿಕೊಂಡು, ಉತ್ತಮ ಗುರುಕುಲ ಮಾದರಿಯ ಪರಿಸರವನ್ನು ನಿರ್ಮಾಣ ಮಾಡಬೇಕೆಂಬ ಬಯಕೆ ನಮ್ಮದು. ನಮ್ಮೀ ಗುರುಕುಲದಲ್ಲಿ ೮೦ ವಿದ್ಯಾರ್ಥಿಗಳು ಉಚಿತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಉನ್ನತ ಧ್ಯೇಯ – ಆದರ್ಶಗಳನ್ನು ಕಣ್ಣ – ಮುಂದಿಟ್ಟುಕೊಂಡು ಕಾರ್ಯ ಪ್ರವೃತ್ತವಾಗುತ್ತಿರುವ ಈ ಕೇಂದ್ರಕ್ಕೆ ನಿಮ್ಮಿಂದ ಕೊಡುಗೆಗಳನ್ನು ಆರ್ಥಿಕ ಸಹಕಾರವನ್ನು ಬಯಸುತ್ತೇವೆ.

ವಿಶೇಷ ಸೂಚನೆ :
೧. 80 ಸೌಲಭ್ಯವಿರುತ್ತದೆ.
೨. ವಿವೇಕಾನಂ ವಿದ್ಯಾವರ್ಧಕ ಸಂಘ, ಪುತ್ತೂರು (ರಿ)  IFSC : CNRB 0008613, A/c No. 8613101000160, ಕೆನರಾ ಬ್ಯಾಂಕ್ ಖಾತೆಗೆ ಜಮೆ ಮಾಡಿದಲ್ಲಿ ತೆರಿಗೆ ವಿನಾಯಿತಿ ಸೌಲಭ್ಯವಿರುತ್ತದೆ.

ನಮ್ಮ ಮುಂದಿನ ಯೋಜನೆಗಳು
ಕಂಪೌಂಡ್ ರಚನೆ    –    2,00,000
ಮಾದರಿ ಶಿಶುಮಂದಿರದ ಒಂದು ಕುಟೀರ    –    5,00,000
ಶುದ್ಧ ಕುಡಿಯುವ ನೀರಿನ ಯೋಜನೆ    –    1,00,000
ಹೊರಾಂಗಣ ಆಟದ ಸಾಮಾಗ್ರಿಗಳು    –    1,00,000
ಒಳಾಂಗಣ ಆಟದ ಸಾಮಾಗ್ರಿಗಳು    –    1,00,000
ವಾರ್ಷಿಕ ನಿರ್ವಹಣಾ ವೆಚ್ಚ    –    1,00,000
ಈಜು ಕೊಳ    –    60,000
ಈಶ್ವರನ ಧ್ಯಾನಗ್ರಸ್ತ ಮೂರ್ತಿ    –    50,000

ಸಂಪರ್ಕ ವಿಳಾಸ
ಮುಖ್ಯ ಮಾತಾಜಿ
ಶ್ರೀ ಭಾರತೀ ಶಿಶು ಮಂದಿರ
ವಿದ್ಯಾನಗರ ಪಂಜ ರಸ್ತೆ
ಅಂಚೆ: ಕಡಬ, ಪುತ್ತೂರು, ದ.ಕ. 574211
ದೂರವಾಣಿ: 08251-260255
ಮಿಂಚಂಚೆ: sbskadaba@gmail.com

Photos

News & Events

Highslide for Wordpress Plugin