• 08251 236599
  • 08251 236444
  • vvsputtur@gmail.com

Sri Madhava Shishumandira Uppinangadi

ಶ್ರೀ ಮಾಧವ ಶಿಶು ಮಂದಿರ ಉಪ್ಪಿನಂಗಡಿ

Phone No :

About

ಉಪ್ಪಿನಂಗಡಿ ನಟ್ಟಿಬೈಲ್ ನಿವಾಸಿ ಸ್ವರ್ಗೀಯ ಶಂಕರ್ ಭಟ್ ರವರ ಪತ್ನಿ ಶ್ರೀಮತಿ ವೇದಾವತಿ ಅಮ್ಮ ಹಾಗೂ ಅವರ ಪುತ್ರರಾದ ಗೋವಿಂದ ಭಟ್ ಮತ್ತವರ ಸಹೋದರ ರವರ ಉದಾರ ಕೊಡುಗೆಯಾಗಿ ನೀಡಲ್ಪಟ್ಟ ಭೂಮಿಯಲ್ಲಿ ಮೈತಾಳಿ ನಿಂತಿದೆ ಶ್ರೀ ಮಾಧವ ಶಿಶು ಮಂದಿರ. ೨೦೦೮ ರ ಎಪ್ರಿಲ್ ೬ ರಂದು ಲೋಕಾರ್ಪಣೆಗೊಂಡ ಈ ಶಿಶುಮಂದಿರ ಹಿಂದೂ ಸೇವಾ ಪ್ರತಿಷ್ಠಾನದ ಆಶಯವನ್ನು ಅನುಷ್ಠಾನಿಸಲು ಶಕ್ತ್ಯಾನುಸಾರ ಶ್ರಮಿಸುತ್ತಿದ್ದೆ. ಸ್ಥಾಪಕಾಧ್ಯಕ್ಷರಾಗಿ, ಶಿಶುಮಂದಿರದ ನಿರ್ಮಾಣದಲ್ಲಿ ಅಹರ್ನಿಶಿ ದುಡಿದಿರುವ ಯು ಜಿ ರಾಧ ಪ್ರಸಕ್ತ ಸಂಚಾಲಕರಾಗಿ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಉದ್ಯಮಿ, ಕೊಡುಗೈದಾನಿ ಯು ರಾಮ ರವರ ಗೌರವಾಧ್ಯಕ್ಷತೆಯಲ್ಲಿ, ಯುವ ಉದ್ಯಮಿ ಮನೋಜ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ಪತ್ರಕರ್ತ ಯು ಎಲ್ ಉದಯ್ ಕುಮಾರ್ ರವರ ಕಾರ್ಯದರ್ಶಿತ್ವದಲ್ಲಿ ಶಿಶು ಮಂದಿರ ಸಮಿತಿ ಕಾರ್ಯಶೀಲವಾಗಿದೆ. ಯತೀಶ್ ಶೆಟ್ಟಿ ಯು, ಸುಭದ್ರಾಭಟ್, ವಾಸುದೇವ ಪ್ರಭ್ಹು, ಗೀತಾಲಕ್ಷ್ಮೀ ತಾಳ್ತಜೆ, ಪುಷ್ಪಲತಾ ತಿಲಕ್ ಉಪಾಧ್ಯಕ್ಷರುಗಳಾಗಿ, ಯು.ಕೆ ರೋಹಿತಾಕ್ಷ, ರವೀಂದ್ರ ಇಳಂತಿಲ, ಹರಿರಾಮಚಂದ್ರ ಜೊತೆ ಕಾರ್ಯದರ್ಶಿಗಳಾಗಿ, ಕೆ ಜಗದೀಶ್ ಶೆಟ್ಟಿ ಕೋಶಾಧಿಕಾರಿಯಾಗಿ ಸಮಿತಿಯ ಕಾರ್ಯಚಟುವಟಿಕೆಯಲ್ಲಿ ಶ್ರಮಿಸುತ್ತಿದ್ದಾರೆ.ಹಾಗೂ ಹನ್ನೊಂದು ಮಂದಿ ಕಾರ್ಯಾಕಾರಿ ಸಮಿತಿ ಸದಸ್ಯರನ್ನು ಹೊಂದಿದೆ.

೨೦೦೬ ನೇ ಇಸವಿ ಡಿ ೭ ರಂದು ಡಾ. ಕಲ್ಲಡ್ಕ ಪ್ರಭಾಕರ ಭಟ್ ರವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಶ್ರೀ ಮಾಧವ ಶಿಶು ಮಂದಿರ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಬೇಲೂರಿನ ಭಗಿನಿ ರಮ್ಯ ಮಾತಾಜಿ ಎರಡು ವರ್ಷಗಳ ಕಾಲ ಮಾತಾಜಿಯಾಗಿ ದುಡಿದಿದ್ದರು. ಬಳಿಕ ಶಿರಸಿಯ ಭಗಿನಿ ರಮ್ಯ ಮಾತಾಜಿ ೨ ವರ್ಷಗಳ ಕಾಲ, ಶಿರಸಿಯ ಭಗಿನಿ ಮಮತಾ ಮಾತಾಜಿ ಆರು ತಿಂಗಳ ಕಾಲ ಶಿಶು ಮಂದಿರದಲ್ಲಿ ಮಾತಾಜಿಯಾಗಿ ಅರ್ಪಣಾಭಾವದಿಂದ ದುಡಿದಿದ್ದಾರೆ. ಹಾಗೂ ಪ್ರಸಕ್ತ ಮಡಿಕೇರಿಯ ಭಗಿನಿ ಮಾಲಾಶ್ರೀ ಮಾತಾಜಿಯಾಗಿ ತೃಪ್ತಿಕರ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಮತಿ ಚಂದ್ರಾವತಿ ರವರು ಶಿಶುಮಂದಿರದ ಸ್ಥಾಪನಾ ಸಹಾಯಕಿಯಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಶುಮಂದಿರ ಸಮಿತಿಯು ಮಾತೃ ಸಂಗಮ ಹಾಗೂ ನೇತ್ರಾವತಿ ಕುಮಾರಾಧಾರ ನದಿ ಸಂಗಮ ಸ್ಥಳದಲ್ಲಿ ನಡೆಸುವ ಪವಿತ್ರಾ ಗಂಗಾಪೂಜೆ ಮಹತ್ವದ ಕಾರ್ಯಕ್ರಮವಾಗಿದೆ. ಅಲ್ಲದೆ ಶ್ರೀ ಕೃಷ್ಣ ಜನ್ಮಾಷ್ಠಮಿ, ಸಾಮರಸ್ಯ ದಿನಾಚರಣೆ, ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ, ರಕ್ಷಾಬಂಧನ, ತುಳಸಿ ಪೂಜೆ, ಯುಗಾದಿ ಉತ್ಸವ, ಸಂಕ್ರಾತಿ ಉತ್ಸವ, ಗಳನ್ನು ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಶಿಶುಮಂದಿರದ ಬಳಿ ನಿರ್ಮಿಸಲಾದ ಕೇಶವಕೃಪಾ ಎಂಬ  ಸಭಾಂಗಣ ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲಗಳನ್ನು ಸೃಷ್ಠಿಸಿದೆ.

ಸಂಪರ್ಕ ವಿಳಾಸ:
ಮುಖ್ಯ ಮಾತಾಜಿ,
ಮಾಧವ ಶಿಶು ಮಂದಿರ
ವೇದಶಂಕರ ನಗರ, ನಟ್ಟಿಬೈಲು,
ಉಪ್ಪಿನಂಗಡಿ, ಪುತ್ತೂರು, ದ.ಕ.

Photos

News & Events

ಉಪ್ಪಿನಂಗಡಿ: ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇಲ್ಲಿನ ಪುಟಾಣಿ ಮಕ್ಕಳ ಕಿರು ಪ್ರವಾಸವು ದಿನಾಂಕ ೫/೯/೧೨ ರಂದು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ, ಈಶ್ವರ ಮಂಗಲ ಪಂಚಮುಖಿ ಹನುಮ ಗಿರಿಗೆ ನಡೆಯಿತು.

ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿನ ಸರಸ್ವತಿ ವಂದನಾ, ಕಲ್ಲಡ್ಕ ಶಿಶು ಮಂದಿರಗಳ ಪುಟಾಣಿಗಳಿಂದ ದೊರೆತ ಸ್ವಾಗತ ರೂಪಿತಗೊಂಡ ಪ್ರಹಸನ, ಮನಮೋಹಕಗೊಂಡಿತ್ತು. ಉಪಹಾರವನ್ನು ಸೇವಿಸಿ, ಈಶ್ವರ ಮಂಗಲದ ಹನುಮ ಬೆಟ್ಟಕ್ಕೆ ಹೋಗಿ ದೇವರ ದರುಶನ ಮಾಡಿ, ಪೂರ್ವ ನಿಗದಿಯಂತೆ ಈಶ್ವರ ಮಂಗಲದ ಪಂಚಲಿಂಗೇಶ್ವರ ದೇವಾಲಯಕ್ಕೆ ಹೋದೆವು.

ಪವಾಡವೆನಿಸಿತು ಅನ್ನದಾನದ ಮಹಿಮೆ:

ಪೂರ್ವ ನಿಗದಿಯಂತೆ ನಮ್ಮ ಪ್ರವಾಸ ತಂಡದ ಮಧ್ಯಾಹ್ನದ ಭೋಜನ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆಯುವುದೆಂದು ನಿಶ್ಚಯವಾಗಿತ್ತು. ಈ ಬಗ್ಗೆ ಪ್ರಮುಖರ ನಡುವೆ ಮೂರು ಬಾರಿಯ ದೂರವಾಣಿ ಸಂಪರ್ಕವೂ ನಡೆದಿತ್ತು.

ಆದರೆ ದೇವಾಲಯದಲ್ಲಿ ಅಡುಗೆ ವಿಭಾಗಕ್ಕೆ ನಮ್ಮ ಆಗಮನದ ಬಗ್ಗೆ ತಿಳಿಸಲು ಆ ಮಹನೀಯರು ಮರೆತಿದ್ದರು. ಇದರಿಂದಾಗಿ ಹಸಿದು ಕಂಗೆಟ್ಟಿದ್ದ ಮಕ್ಕಳೊಂದಿಗೆ ಹೋಗಿದ್ದ ನಮ್ಮ ತಂಡ ಹಿಂತಿರುಗುವ ನಿರ್ಧಾರವನ್ನು ತಳೆಯುವುದರಲ್ಲಿತ್ತು.

ತನ್ನ ಮರೆಯುವಿಕೆಯ ಬಗ್ಗೆ ಮನನೊಂದು ಧಾವಿಸಿ ಬಂದ ಆ ಮಹನೀಯರು ತ್ವರಿತವಾಗಿ ಅನ್ನ ಬೇಯಿಸಲು ಸೂಚನೆ ನೀಡಿದರು. ಆ ವೇಳೆಗೆ ಪಾಕ ಶಾಲೆಯಲ್ಲಿ ಉಳಿದಿದ್ದ ಒಂದು ಬಕೆಟ್ ಅನ್ನವನ್ನು ಹಸಿದ ಮಕ್ಕಳಿಗೆ ನೀಡಿ ಎಂಬ ನಮ್ಮ ಸಲಹೆಗೆ ಸ್ಪಂದಿಸಿದ ದೇವಾಲಯದ ಸಿಬ್ಬಂದಿಗಳು ಮಕ್ಕಳಿಗೆ ಅನ್ನ ನೀಡಿದರು. ಬಳಿಕ ಮಕ್ಕಳ ಮಾತೆಯಂದಿರಿಗೆ ಅನ್ನ ನೀಡಿದರು. ಬಳಿಕ ಶಿಶು ಮಂದಿರದ ಆಡಳಿತ ಮಂಡಳಿಯ ಸದಸ್ಯರಿಗೂ ಅನ್ನ ನೀಡಿದರು. ಬೇಯುತ್ತಿರುವ ಅನ್ನ ಒಲೆಯಲ್ಲಿ ಬೇಯುತ್ತಿದ್ದಂತೆಯೇ ಉಳಿದಿದ್ದ ಬಕೆಟ್ ಅನ್ನ ಅಕ್ಷಯ ಪಾತ್ರೆಯಾಗಿ ರೂಪಿತಗೊಂಡು ಹಸಿದಿದ್ದ ಪ್ರವಾಸಿಗರಿಗೆ ಲಭಿಸಿ ಮತ್ತೂ ಅದರಲ್ಲಿ ಮಿಕ್ಕಿ ಉಳಿದಿದ್ದು ವಿಸ್ಮಯ ತಂದಿದೆ.

ಸಿದ್ದತೆ ಮಾಡಿಡಲು ಮರೆತರೂ , ಆತಿಥ್ಯ ನೀಡಬೇಕೆಂದು ಪ್ರಾಮಾಣಿಕ ಕಾಳಜಿ ಮೆರೆದ ಅಲ್ಲಿನ ಗಣ್ಯರ ಸದ್ಗುಣಕ್ಕೆ ದೇವನೊಲಿದು ಎಲ್ಲರೂ ಸಂತೃಪ್ತಿಯಿಂದ ಉಣ್ಣುವಂತೆ ಪರಿಸ್ಥಿತಿಯನ್ನು ಬದಲಾಯಿಸಿದ್ದು ಈ ಮಣ್ಣಲ್ಲಿ ಲೀನವಾಗಿರುವ ದೈವಿಕ ಶಕ್ತಿಯಂತೆ ಕಂಡು ಬಂತು.

ಪ್ರವಾಸದಲ್ಲಿ ಇಪ್ಪತ್ತು ಮಕ್ಕಳು, ಮತ್ತವರ ಪೋಷಕರು, ಶಿಶು ಮಂದಿರ ಸಮಿತಿಯ ಅಧ್ಯಕ್ಷ ಮನೋಜ್ ಶೆಟ್ಟಿ, ಕಾರ್ಯದರ್ಶಿ ಯು.ಎಲ್ ಉದಯ್ ಕುಮಾರ್, ಜೊತೆ ಕಾರ್ಯದರ್ಶಿ ಹರಿರಾಮಚಂದ್ರ, ಯು ಕೆ ರೋಹಿತಾಕ್ಷ, ಭಾಸ್ಕರ್ ಆಚಾರ್ಯ, ಜಿಲ್ಲಾ ಮಾತಾಜಿ ಭಗಿನಿ ಅಭಿಲಾಶಾ, ಶಿಶು ಮಂದಿರ ಮಾತಾಜಿ ಭಗಿನಿ ಮಾಲಾಶ್ರೀ, ಮೊದಲಾದವರು ಭಾಗಿಯಾಗಿದ್ದರು.

~~

ಉಪ್ಪಿನಂಗಡಿ : ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಶಿಶು ಮಂದಿರದ ಬಳಿ ನಿರ್ಮಿಸಲಾದ  ಕೇಶವ ಕೃಪಾ ಕಟ್ಟಡವನ್ನು ಆರ್ ಎಸ್ ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ| ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸುತ್ತಿರುವುದು.

ಚಿತ್ರದಲ್ಲಿ ಶಿಶು ಮಂದಿರ ಸಮಿತಿಯ ಗೌರವಾಧ್ಯಕ್ಷ ಯು ರಾಮ , ಅಧ್ಯಕ್ಷ ಮನೋಜ್ ಶೆಟ್ಟಿ ಮಾತಾಜಿ ಭ ರಮ್ಯಾ ಶಿರಸಿ ರವರನ್ನು ಕಾಣಬಹುದು.

~~

ಉಪ್ಪಿನಂಗಡಿ : ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇದರ ವತಿಯಿಂದ ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆಂದು ನೀಡಲಾಗುವ ಮಾಂಗಲ್ಯ ನಿಧಿ ಧನ ಸಹಾಯವನ್ನು ಉಪ್ಪಿನಂಗಡಿಯ ದಿವಂಗತ ನಾರಾಯಣ ಟೈಲರ್ ರವರ ಮಗಳ ಮದುವೆಗೆಂದು ಮದುಮಗಳ ತಾಯಿ ಶ್ರೀಮತಿ ಕೃಷ್ಣಮ್ಮ ರವರಿಗೆ ವಿತರಿಸುತ್ತಿರುವುದು

ಚಿತ್ರದಲ್ಲಿ ಉದ್ಯಮಿ ಹಾಗೂ ನಿವೃತ್ತ ಸೇನಾನಿ ಕೆ ಸುರೇಶ್ ಮತ್ತು ಶಿಶು ಮಂದಿರ ಸಮಿತಿಯ ಗೌರವಾಧ್ಯಕ್ಷ ಯು ರಾಮ, ಅಧ್ಯಕ್ಷ ಮನೋಜ್ ಶೆಟ್ಟಿ ರವರನ್ನು ಕಾಣಬಹುದು.

~~

ಭಜನಾ ತರಬೇತಿ ಕಮ್ಮಟ

ಉಪ್ಪಿನಂಗಡಿ : ಭಕ್ತಿ ಮತ್ತು ಶಕ್ತಿ ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ನಮಗೆಲ್ಲವನ್ನ್ನೂ ನೀಡಿರುವ ಭಗವಂತನನ್ನು ಭಜನೆಯ ಮೂಲಕ ಸದಾ ನೆನೆಯುವಕಾರ್ಯ ಪ್ರತಿ ಮನೆ ಪ್ರತಿ ಮನದಲ್ಲೂ ಪ್ರತಿನಿತ್ಯ ನಡೆಯಬೇಕಾಗಿದೆ ಎಂದು ಸಾಮಾಜಿಕ ಮುಂದಾಳು ಪುರುಷೋತ್ತಮ ಮುಂಗ್ಲಿಮನೆ ತಿಳಿಸಿದರು. ಅವರು ವಿಜಯದಶಮಿಯಂದು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಹಮ್ಮಿಕೊಂಡಿದ್ದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿಶ್ವ ವಂದನೀಯ ಸಂಸ್ಕೃತಿಯ ನೆಲೆಯಾದ ಭಾರತದಲ್ಲೇ ಆಧುನಿಕತೆಯ ಭರಾಟೆಯಲ್ಲಿ ಸಾಂಸ್ಕೃತಿಕ ಅಧಃಪತನದ ಹಾದಿಯಲ್ಲಿ ಸಮಾಜ ಸಾಗುತ್ತಿದೆ. ಈ ಅಪಾಯಕಾರಿ ಬೆಳವಣಿಗೆಯಲ್ಲಿ ಸಮಾಜವನ್ನು ಸಂಸ್ಕಾರಭರಿತಗೊಳಿಸುವ ಕಾರ್ಯವನ್ನು ನಡೆಸುತ್ತಿರುವುದು ನಿಜವಾಗಿಯೂದೇವ ಸೇವೆ ಹಾಗೂ ದೇಶ ಸೇವೆ ಎಂದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ ಶ್ರೀ ರಾಮ ಶಾಲಾ ಸಂಚಾಲಕ ಯು ಜಿ ರಾಧ ಮಾತನಾಡಿ ಮಕ್ಕಳಾದಿಯಾಗಿ ಸಮಾಜದ ಎಲ್ಲಾ ವರ್ಗದವರಿಗೂ ಸಂಸ್ಕಾರದ ಸವಿಯುಣ್ಣುವ ಅವಕಾಶವನ್ನು ಶಿಶು ಮಂದಿರದ ಮೂಲಕ ನೀಡುತ್ತಿರುವುದು ಶ್ಲಾಘನೀಯಕಾರ್ಯ.ದೇವ ನಾಮ ಸ್ಮರಣೆಯನ್ನು ಮರೆತ ಸಮಾಜಕ್ಕೆಅದರ ಸವಿಯೇನೆಂಬುವುದನ್ನು ತಿಳಿಸುವ ಕಾರ್ಯಎಲ್ಲೆಡೆ ನಡೆದಾಗಇಡೀ ಸಮಾಜ ಸಾತ್ವಿಕ ಪ್ರಭಾ ವಲಯಕ್ಕೆ ಒಳಗಾಗುವುದೆಂದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ, ಮಾಸ್ ನಿರ್ದೇಶಕ ಯು ರಾಮ ಮಾತನಾಡಿ ಮನೆ ಮಕ್ಕಳು ಮನೆಯ ಸಂಪತ್ತಾಗಿ ರೂಪುಗೊಳ್ಳಬೇಕಾದರೆ ಅವರನ್ನು ಬಾಲ್ಯದಲ್ಲೇ ಸಂಸ್ಕಾರ ಶಿಕ್ಷಣಕ್ಕೆ ಒಳಪಡಿಸಬೇಕು. ಮಗು ತನ್ನ ನಡೆ ನುಡಿಯನ್ನು ಸಂಸ್ಕಾರಭರಿತಗೊಳಿಸಿದಾಗ ಆ ಮಗುವಿನ ಮನೆ, ಪರಿಸರ ಉತ್ತಮಗೊಳ್ಳುವುದಕ್ಕೆ ಶಿಶು ಮಂದಿರದ ಕಾರ್ಯಚಟುವಟಿಕೆಗಳಿಂದ ದೊರೆತ ಫಲವೇ ಸಾಕ್ಷಿ ಎಂದರು.

ಭಜನಾ ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ ಮಾತಾಜಿ ಪುಷ್ಪಲತಾಎಸ್, ಮತ್ತು ಚಂದ್ರಾವತಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ಸ್ವಾಗತಿಸಿ, ಮೋಹನ್ ಭಟ್ ವಂದಿಸಿದರು.

ಆರೋಗ್ಯ ನಿಧಿ ಹಸ್ತಾಂತರ

ಉಪ್ಪಿನಂಗಡಿ :ಸಂಕಷ್ಠದಲ್ಲಿರುವವರಿಗೆ ಸಹಾಯ ಸಹಕಾರ ನೀಡಿ ಸ್ಪಂದಿಸುವುದೇ ಮಾನವ ಜೀವನದ ಆದರ್ಶ ನಡೆಯಾಗಿದ್ದು, ಇದು ಭಗವಂತನ ಕೃಪೆಗೆ ಒಳಗಾಗುವ ಕಾರ್ಯವೂ ಹೌದುಎಂದು ಶ್ರೀ ಮಾಧವ ಶಿಶು ಮಂದಿರದ ಗೌರವಾಧ್ಯಕ್ಷ ಯು ರಾಮ ತಿಳಿಸಿದರು.


ಅವರು ಇತ್ತೀಚೆಗೆ ಅಪಘಾತದಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಉಪ್ಪಿನಂಗಡಿಯ ಶ್ರೀ ರಾಮ ಶಾಲಾ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚಕ್ಕಾಗಿ ಶ್ರೀ ಮಾಧವ ಶಿಶು ಮಂದಿರದ ವತಿಯಿಂದ ನೀಡಲಾದ 25 ಸಾವಿರ ರೂಪಾಯಿಯ ಆರೋಗ್ಯ ನಿಧಿಯನ್ನು ಶ್ರೀ ರಾಮ ಶಾಲಾ ಸಂಚಾಲಕ ಯು ಜಿ ರಾಧರವರಿಗೆ ಅಕ್ಟೋಬರ್ 14 ರಂದು ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಆರೋಗ್ಯ ನಿಧಿ ಹಸ್ತಾಂತರ ಕಾರ್ಯಕ್ರಮದಲ್ಲಿ ಶ್ರೀ ಮಾಧವ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ, ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಶಿಶು ಮಂದಿರದ ಪೋಷಕರಾದ ಮೋಹನ್ ಭಟ್, ಹೆಚ್ ಸುಬ್ರಹ್ಮಣ್ಯ ಶೆಣೈ, ಶಿಶು ಮಂದಿರದ ಮಾತಾಜಿ ಪುಷ್ಪಲತಾ ಎಸ್, ಹಾಗೂ ಚಂದ್ರಾವತಿ ಭಾಗವಹಿಸಿದ್ದರು.

ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಉಪ್ಪಿನಂಗಡಿ: ಹಿಂದೂ ಸೇವಾ ಪ್ರತಿಷ್ಠಾನ ಸಮಾಜದ ಬಡ ವಿದ್ಯಾರ್ಥಿಗಳಿಗೆ ಕೊಡ ಮಾಡಿದ ಪುಸ್ತಕಗಳನ್ನು ಉಪ್ಪಿನಂಗಡಿಯ ಶ್ರೀ ಮಾಧವ ಶಿಶು ಮಂದಿರದಲ್ಲಿ ವಿತರಿಸಲಾಯಿತು.

ಪುಸ್ತಕ ವಿತರಣೆಯನ್ನು ನೆರವೇರಿಸಿ ಮಾತನಾಡಿದ ,ಉಪ್ಪಿನಂಗಡಿ ಸಿ ಎ ಬ್ಯಾಂಕ್ ನಿರ್ದೇಶಕಯತೀಶ್ ಶೆಟ್ಟಿ ಸುವ್ಯ ಮಾತನಾಡಿಸತ್ ಪಾತ್ರರಿಗೆ ನೀಡುವದಾನ ಭಗವಂತನ ಪ್ರೀತಿಗೆ ಪಾತ್ರವಾಗುವುದಲ್ಲದೆ, ಭಗವಂತನದಯೆಯಿಂದ ಲಭಿಸಿದ ಸಂಪತ್ತು ಭಗವಂತನ ಸೇವೆಗೆ ವಿನಿಯೋಗವಾದ ಪುಣ್ಯ ಪ್ರಾಪ್ತವಾಗುವುದು . ಬಡ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಮನಗಂಡು ಈ ಪರಿಸರದ ನೂರಾರು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲು ಮುಂದಾಗಿರುವ ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವೆನಿಸಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ರಾಜಾದಾದ್ಯಂತ ಬಡ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಪೂರೈಸಲು ಶ್ರಮಿಸುತ್ತಿರುವ ಹಾಗೂ ಅನ್ಯಾನ್ಯ ವಿಭಾಗಗಳಲ್ಲಿ ಸೇವಾ ಕಾರ್ಯವನ್ನು ಕೈಗೊಂಡು ನೈಜ ರಾಷ್ಟ್ರ ಸೇವೆ ಸಲ್ಲಿಸುತ್ತಿರುವ ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯಆದರ್ಶ ಪ್ರಾಯವಾಗಿದೆ ಎಂದರು.

ಶಿಶುಮಂದಿರದ ಮಾತಾಜಿ ಪುಷ್ಪಲತಾ ಸ್ವಾಗತಿಸಿ, ಸಹಾಯಕಿಚಂದ್ರಾವತಿ ವಂದಿಸಿದರು.

ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

ಉಪ್ಪಿನಂಗಡಿ: ಭಕ್ತಿ-ಶಕ್ತಿ-ಯುಕ್ತಿ ಯಿಂದ ಧರ್ಮ ಸಂಸ್ಥಾಪನೆಗೈದ ಶ್ರೀ ಕೃಷ್ಣನ ಜೀವನವೇ ಮನು ಕುಲಕ್ಕೆ ಆದರ್ಶ ಪ್ರಾಯವಾಗಿದ್ದು, ಸಮಾಜದಲ್ಲಿ ಮೇಲೈಸುವ ದುಷ್ಠ ಶಕ್ತಿಗಳನ್ನು ನಿಗ್ರಹಿಸುವಲ್ಲಿ ಇಡೀ ಸಮಾಜ ಶ್ರೀ ಕೃಷ್ಣನ ಆದರ್ಶವನ್ನು ಪಾಲಿಸಬೇಕಾಗಿದೆ ಎಂದು ಚಿಂತಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವಾಹ ಚಂದ್ರಶೇಖರ್ ಮರ್ಧಾಳ ತಿಳಿಸಿದರು.

ಅವರು ಉಪ್ಪಿನಂಗಡಿಯ ಶ್ರೀ ಮಾಧವ ಶಿಶುಮಂದಿರದಲ್ಲಿ ಬುಧವಾರದಂದು ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಧಾಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು.

ಸಮಾಜದ ನಾನಾ ಕ್ಷೇತ್ರದಲ್ಲಿ ಸಮಾಜವನ್ನು ದುರ್ಬಲಗೊಳಿಸುವ ಷಡ್ಯಂತ್ರ ನಿತ್ಯ ನಿರಂತರ ನಡೆಯುತ್ತಿದೆ. ಭಾರತದ ಸುದೃಢತೆಗೆ ಮೂಲ ಕಾರಣವಾಗಿರುವಇಲ್ಲಿನ ಸಂಸ್ಕೃತಿಯನ್ನು ಹಾಳುಗೆಡವಿ ರಾಷ್ಟ್ರವನ್ನು ದುರ್ಬಲಗೊಳಿಸುವ ಯತ್ನ ವ್ಯಾಪಕವಾಗಿ ನಡೆಯುತ್ತಿದೆ. ಇದರಿಂದ ವಿಶ್ವ ಮಾನ್ಯವೆನಿಸಿದ ನಮ್ಮದೇಶ ನಮ್ಮ ಸಂಸ್ಕೃತಿ ಪತನದ ಭೀತಿಗೆತುತ್ತಾಗಿದೆ. ಈ ಸಂಧರ್ಭದಲ್ಲಿ ಪ್ರತಿ ಮನೆಯ ಮಾತೆಯರೂಜಾಗೃತಾಗಿ, ಮನೆಯಲ್ಲಿನ ಮಕ್ಕಳಿಗೆ ಅಗತ್ಯ ಸಂಸ್ಕಾರವನಿತ್ತು, ಸಂಸ್ಕೃತಿಯ ಹಿರಿಮೆ ಗರಿಮೆಗಳನ್ನು ತಿಳಿಸಿ, ಅನುಷ್ಠಾನಿಸುವ ಮೂಲಕ ಸವಾಲುಗಳನ್ನು ಎದುರಿಸಲು ಪಣತೊಡಬೇಕಾಗಿದೆ ಎಂದರು. ಸಮಾಜದ ರಕ್ಷಣೆ ನಮ್ಮೆಲ್ಲರ ಆದ್ಯಕರ್ತವ್ಯವಾಗಿದ್ದು, ಈ ದಿಶೆಯಲ್ಲಿ ನಮ್ಮೆದರಾಗುವಸಣ್ಣ ಸಣ್ಣ ಕಾರ್ಯಗಳನ್ನು ಶ್ರದ್ದೆ ನಿಷ್ಠಯಿಂದ ನಿರ್ವಹಿಸಬೇಕಾಗಿದೆ ಎಂದು ಕರೆ ನೀಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ, ಮಾಜಿ ಪಂಚಾಯತ್ ಅಧ್ಯಕ್ಷ ರಾಮದಾಸ್ ಪೈ ರಾಮನಗರ ಮಾತನಾಡಿ, ಭರತ ಭೂಮಿಯ ಶ್ರೇಷ್ಠತೆ ಶ್ರೀ ಕೃಷ್ಣನ ಜೀವನಾದರ್ಶದಲ್ಲಿ ಅಡಗಿದೆ.ನಮ್ಮ ಭವ್ಯ ದಿವ್ಯ ಸಂಸ್ಕೃತಿಯ ರಕ್ಷಣೆ ಮತ್ತು ಅನಾವರಣದಲ್ಲಿ ಶಿಶು ಮಂದಿರದಂತಹ ಸಂಸ್ಥೆಗಳ ಶ್ರಮ ಶ್ಲಾಘನೀಯವೆನಿಸುತ್ತಿದೆ ಎಂದು ಶ್ಲಾಘಿಸಿದರು.

ಸಭಾಕಾರ್ಯಕ್ರಮದ ಪೂರ್ವದಲ್ಲಿ ಆಯೋಜಿಸಲಾದ ಶ್ರೀ ಕೃಷ್ಣ ವೇಷಧಾರಿ ಪುಟಾಣಿ ಮಕ್ಕಳ ವಿವಿಧ ಕಾರ್ಯಕ್ರಮಗಳನ್ನು ಉದ್ಯಮಿ ವೆಂಕಪ್ಪಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಶುಮಂದಿರದ ಮಾತಾಜಿ ಪುಷ್ಪಲತಾ ಎಸ್ ಹಾಗೂ ಚಂದ್ರಾವತಿರವರ ಮಾರ್ಗರ್ಶನದಲ್ಲಿ ಪುಟಾಣಿ ಮಕ್ಕಳ ಸಾಂಸ್ಕೃತಿ ಕಕಾರ್ಯಕ್ರಮ ನಡೆಯಿತು.

ಸಭೆಯಲ್ಲಿ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ಉಪಸ್ಥಿತರಿದ್ದು, ಶ್ರೀಮತಿ ನಯನ ಸ್ವಾಗತಿಸಿದರು. ಶ್ರೀಮತಿ ಪವಿತ್ರಾ ವಂದಿಸಿದರು. ಹರಿರಾಮ ಚಂದ್ರಕಾರ್ಯಕ್ರಮ ನಿರೂಪಿಸಿದರು.

ರಕ್ಷಬಂಧನ ಉತ್ಸವ

ಉಪ್ಪಿನಂಗಡಿ : ಲೋಕಾ ಸಮಸ್ತ ಸುಖಿನೋ ಭವಂತು ಎಂದು ಪ್ರಾರ್ಥಿಸುವ ಹಿಂದೂಧರ್ಮ ಸಂಸ್ಕೃತಿಯಲ್ಲಿ ಸಹೋದರತೆಯ ಬಾಂಧವ್ಯವನ್ನು ಬೆಸೆದು ಸಾಮರಸ್ಯದ ಬಾಳಿಗೆ ಪೂರಕವಾಗಿ ರಕ್ಷಬಂಧನ ಉತ್ಸವವು ಅನಾದಿಕಾಲದಿಂದ ನಡೆಯುತ್ತಿದ್ದು, ಯುವ ಪೀಳಿಗೆಗೆ ಅದರ ಮೌಲ್ಯವನ್ನು ತಿಳಿಸುವ ಅಗತ್ಯತೆ ಹೆಚ್ಚಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ಪ್ರಮುಖ್‌ ರವೀಂದ್ರ ಇಳಂತಿಲ ಕರೆ ನೀಡಿದರು.


ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿರುವ ಶ್ರೀ ಮಾಧವ ಶಿಶು ಮಂದಿರದಲ್ಲಿ ದಿನಾಂಕ 20/8/13ರಂದು ನಡೆದ ರಕ್ಷಾಬಂಧನ ಉತ್ಸವದಲ್ಲಿ ಬೌದ್ಧಿಕ್ ನೀಡುತ್ತಿದ್ದರು.
ಸಮಾಜದಲ್ಲಿನ ಬೇಧ ಭಾವತೊರೆದು ಎಲ್ಲರೊಳು ಸಮಾನತೆಯನ್ನು ಸಾರುವ ಸಲುವಾಗಿ ಸಂಘ ರಕ್ಷಾಬಂಧನವನ್ನು ಸಾರ್ವತ್ರಿಕ ಉತ್ಸವವಾಗಿ ಆಚರಿಸಲು ಮುಂದಾಗಿದೆ ಎಂದವರು ತಿಳಿಸಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಉದ್ಯಮಿಯುರಾಮ ಮಾತನಾಡಿ, ಹಲವು ದಾರಗಳಿಂದ ರಚಿಸಲ್ಪಟ್ಟ ರಾಖಿಯು ಹೇಗೆ ಗಟ್ಟಿ ಹಾಗೂ ಸುಂದರವಾಗಿ ಕಂಗೊಳಿಸುತ್ತಿದೆಯೋ ಅಂತೆಯೇ ಹಲವು ಜಾತಿ ಮತ ಪಂಥ ಪಂಗಡಗಳ ನಾವು ಈ ಮಣ್ಣಿನ ಸಂಸ್ಕೃತಿಗೆ ಅನುಗುಣವಾಗಿ ಒಗ್ಗೂಡಿ ಸುಂದರ ರಾಷ್ಟ್ರ ನಿರ್ಮಾಣಕಾರ್ಯಕ್ಕೆ ಮುಂದಾಗಬೇಕೆಂದರು. ಶಿಶುಮಂದಿರ ಅಧ್ಯಕ್ಷ ಮನೋಜ್ ಶೆಟ್ಟಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಹರಿರಾಮಚಂದ್ರ ವಂದಿಸಿದರು. ಮಾತಾಜಿ ಪುಷ್ಪಲತಾ ಎಸ್ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟನೆ

ಉಪ್ಪಿನಂಗಡಿ :ಚಿತ್ರ ಕಲೆ ಮನಸ್ಸನ್ನು ಅರಳಿಸುವ ಕಲೆಯಾಗಿದ್ದು, ಮಕ್ಕಳ ಕಲಾಭಿರುಚಿಯನ್ನು ಗುರುತಿಸಿ ಅರಳಿಸುವ ಕಾರ್ಯವನ್ನು ಶ್ರೀ ಮಾಧವ ಶಿಶು ಮಂದಿರ ಸಮಿತಿಯು ನಡೆಸುತ್ತಿರುವುದು ಶ್ಲಾಘನೀಯವೆಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಶ್ರೀ ಸಹಸ್ರಲಿಂಗೇಶ್ವರದೇವಾಲಯದ ಆಡಳಿತ ಮಂಡಳಿ ಸದಸ್ಯಕಂಗ್ವೆ ವಿಶ್ವನಾಥ ಶೆಟ್ಟಿ ತಿಳಿಸಿದರು.

ಅವರು ಆದಿತ್ಯವಾರದಂದು (18/8/13)ಉಪ್ಪಿನಂಗಡಿಯಲ್ಲಿ ಶ್ರೀ ಮಾಧವ ಶಿಶು ಮಂದಿರ ಸಮಿತಿಯ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಆಯೋಜಿಸಲಾದ ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿತ್ರಕಲಾ ಶಿಕ್ಷಕ ಜಗದೀಶ್ ಪಾಟೀಲ್ ಮಾತನಾಡಿ, ಕಲೆ ಅರಳಲು ಸಮಾಜದ ಪ್ರೋತ್ಸಾಹ ಅತೀ ಅಗತ್ಯ.ಎಳೆಯ ಮಕ್ಕಳಲ್ಲಿ ಕಲಾಭಿರುಚಿಯನ್ನು ಮೂಡಿಸಿ, ಅದನ್ನು ಅರಳಿಸುವಂತೆ ಪ್ರತಿ ವರ್ಷ ಕೈಗೊಳ್ಳುತ್ತಿರುವ ಈ ಸ್ಪರ್ಧೆಕಲಾರಾಧನೆಗೆ ಸಮಾನವಾದುದ್ದು ಎಂದರು.

ವಿವಿಧ ವಿಭಾಗದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ 128 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾರಂಭದಲ್ಲಿ ಶ್ರೀ ಮಾಧವ ಶಿಶು ಮಂದಿರ ಸಮಿತಿಯಅಧ್ಯಕ್ಷ ಮನೋಜ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ಯತೀಶ್ ಶೆಟ್ಟಿ ವಂದಿಸಿದರು. ಜೊತೆ ಕಾರ್ಯದರ್ಶಿ ರೋಹಿತಾಕ್ಷ ಯು ಕೆ ಕಾರ್ಯಕ್ರಮ ನಿರೂಪಿಸಿದರು.

ಬೇಸಿಗೆ ಸಂಸ್ಕಾರ ಶಿಬಿರ

ಉಪ್ಪಿನಂಗಡಿ : ಎಳೆಯ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಅವರನ್ನು ಭವ್ಯರಾಷ್ಟ್ರದ ದಿವ್ಯ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವೆಂದು ಯುವ ಸಾಮಾಜಿಕ ಕಾರ್ಯಕರ್ತ ರಾಜ್‌ಗೋಪಾಲ ಹೆಗ್ಡೆ ತಿಳಿಸಿದರು.

ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ನಡೆದ ಒಂದುವಾರದ ಬೇಸಿಗೆ ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ಉದ್ಯಮಿ ಹರ್ಷಕುಮಾರ್ ಜೈನ್ ಮಾತನಾಡಿ, ಪಾಶ್ಚ್ಯಾತ್ಯ ಸಂಸ್ಕೃತಿಯ ಪ್ರಭಾವದಿಂದ ದುರ್ಬಲವಾದ ಮನೆ-ಮನಸ್ಸುಗಳನ್ನು ಹಳಿಗೆ ತರಲು ನಮ್ಮ ಭಾರತೀಯ ಸಂಸ್ಕಾರವನ್ನು ಎಳೆಯ ಮಕ್ಕಳಿಗೆ ನೀಡಲೇಬೇಕಾದ ಅನಿವಾರ್ಯತೆ ಇದೆ. ಈ ಸೂಕ್ಷ್ಮತೆಯನ್ನು ಮನಗಂಡು ಹಿಂದೂ ಸೇವಾ ಪ್ರತಿಷ್ಠಾನ ಸಮಾಜದ ಯುವ ಸಮೂಹಕ್ಕೆ ವಿವಿಧ ಸ್ತರದಲ್ಲಿ ಸಂಸ್ಕಾರ ನೀಡಲು ಮುಂದಾಗಿರುವುದು ಸಂತಸದ ವಿದ್ಯಾಮಾನ. ಅದಕ್ಕೆ ಪೂರಕ ಬೆಂಬಲ ನೀಡಬೇಕಾದುದ್ದು ನಾಗರಿಕ ಸಮಾಜದ ಆದ್ಯಕರ್ತವ್ಯ ಎಂದು ತಿಳಿಸಿದರು.

ಶಿಶು ಮಂದಿರದ ಅಧ್ಯಕ್ಷ ಮನೋಜ್‌ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿಶು ಮಂದಿರದ ಮಾತಾಜಿ ಭಗಿನಿ ಪುಷ್ಪಲತಾ ಸ್ವಾಗತಿಸಿದರು.ಶಿಬಿರದಲ್ಲಿ ಶ್ರೀಮತಿ ಪುಷ್ಪಲತಾ ತಿಲಕ್, ಪುರುಷೋತ್ತಮ, ಹರಿರಾಮಚಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.

ಯುಗಾದಿ ಹೊಸ ವರ್ಷಾಚರಣೆ

ಉಪ್ಪಿನಂಗಡಿ : ಯುಗಾದಿ ಹೊಸ ವರ್ಷಾಚರಣೆ ಮಾತ್ರವಾಗಿರದೇ ನಮ್ಮ ನಮ್ಮ ಸಾಮಾಜಿಕ ಬದ್ದತೆಯನ್ನು ನೆನೆಯುವ, ಸಂಕಲ್ಪಿಸುವ ಹಬ್ಬವಾಗಿರಬೇಕು. ಸದ್ವಿಚಾರಧಾರೆ ನಮ್ಮೆರಲ್ಲ ಮೈ ಮನದಲ್ಲಿ ನೆಲೆಗೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಂದಾಳು ಹರಿರಾಮಚಂದ್ರ ತಿಳಿಸಿದರು.

ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಯುಗಾದಿ ಉತ್ಸವದಲ್ಲಿ ಬೌದ್ಧಿಕ್ ನೀಡುತ್ತಾ ಮಾತನಾಡುತ್ತಿದ್ದರು. ನಮ್ಮ ದೇಶದ ಸಮಸ್ಯೆ, ನಮ್ಮ ಸಮಾಜದ ಸಮಸ್ಯೆ, ನಮ್ಮ ನೆರೆ ಮನೆಯ ಸಮಸ್ಯೆ, ನಮ್ಮ ಮನೆಯ ಸಮಸ್ಯೆ, ನಮ್ಮ ಸಮಸ್ಯೆಗಳನ್ನು ನಿವಾರಿಸುವ ಮುನ್ನ ಸಮಸ್ಯೆಯ ಕಾರಣವನ್ನು ತಿಳಿಯಬೇಕಾಗಿದೆ. ಬಹುತೇಕ ಸಮಸ್ಯೆ ನಮ್ಮ ನಮ್ಮ ಕಾರಣದಿಂದಲೇ ಮೂಡುವುದರಿಂದ ನಮ್ಮ ನಮ್ಮನ್ನು ತಿದ್ದಿಕೊಳ್ಳುವುದು ಮೊದಲ ಅಗತ್ಯವಾಗಿರುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಭಾರತ್ ಬೀಡಿ ವರ್ಕ್ಸ್ ಮಂಗಳೂರು ಶಾಖಾ ಮೇನೇಜರ್ ವಾಸುದೇವ್‌ರವರು ಮಾತನಾಡಿ, ಕಣ್ಮರೆಯಾಗುತ್ತಿರುವ ನಮ್ಮ ಸಂಸ್ಕಾರ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಡೆಯುವ ಪ್ರಯತ್ನಗಳಿಗೆ ಭಗವಂತನ ಕೃಪೆ ಸದಾ ಇರಲಿ ಎಂದಾರೈಸಿದರು. ಶಿಶುಮಂದಿರದ ಮಾತಾಜಿ ಭಗಿನಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ನವಿನಾ ಸ್ವಾಗತಿಸಿ, ಪವಿತ್ರಾ ವಂದಿಸಿದರು.

ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಹಾಗೂ ಸಾಮರಸ್ಯ ದಿನಾಚರಣೆ

ಉಪ್ಪಿನಂಗಡಿ: ಜಗದ್ವಂದ್ಯ ಭಾರತೀಯ ಸಂಸ್ಕೃತಿಯನ್ನು ಎಳೆಯ ಮಕ್ಕಳಲ್ಲಿ ಮೂಡಿಸಿ, ಅವರನ್ನು ಸತ್‌ಪ್ರಜೆಗಳನ್ನಾಗಿ ರೂಪಿಸುವಲ್ಲಿ ಸಮಾಜದ ಸರ್ವ ಸ್ತರದ ಸಹಕಾರವೂ ಲಭಿಸಬೇಕಾಗಿದೆ. ಜಾತಿ-ಮತ-ಬಡವ-ಬಲ್ಲಿದನೆಂಬ ಭೇದತೋರದೇ ಎಲ್ಲಾ ಮಕ್ಕಳ ಹುಟ್ಟುಹಬ್ಬವನ್ನು ಒಂದೇ ವೇದಿಕೆಯಲ್ಲಿ ಸಾಮೂಹಿಕವಾಗಿ ಆಚರಿಸುವುದು ಮೌಲ್ಯಯುತವಾದ ನಡೆಯಾಗಿದೆ. ದೇಶದ ಮಹಾನ್ ನಾಯಕ ಡಾ| ಬಿ  ಆರ್‌ ಅಂಬೇಡ್ಕರ್‌ರವರ ಜನ್ಮದಿನಾಚರಣೆಯನ್ನೂ ಎಲ್ಲರೂ ಸಾಮೂಹಿಕವಾಗಿ ಆಚರಿಸುವುದು ಅವರ ಜೀವನಾದರ್ಶಗಳಿಗೆ ನೀಡುವ ಅನುಪಮ ಗೌರವವಾಗಿದೆ ಎಂದು ಹಿರಿಯ ಚಿಂತಕಿ, ಉಪ್ಪಿನಂಗಡಿ ವಿಜಯಾ ಬ್ಯಾಂಕ್ ಶಾಖಾಧಿಕಾರಿ ಶ್ರೀಮತಿ ಪದ್ಮ ತಿಳಿಸಿದರು.

ಅವರು ಆದಿತ್ಯವಾರ (14/04/13) ರಾತ್ರಿ ಉಪ್ಪಿನಂಗಡಿಯ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಗಾಣಿಗ ಸಭಾಭವನದಲ್ಲಿ ನಡೆಸಲಾದ ಶಿಶು ಮಂದಿರದ ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಹಾಗೂ ಸಾಮರಸ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಸಂಕುಚಿತ ಭೇದಭಾವವ ತೊರೆದು ರಾಷ್ಟ್ರದ ಉನ್ನತಿಯೇ ತನ್ನ ಉನ್ನತಿ ಎಂದು ತಿಳಿದು ಬದುಕಿಗೆ ಆದರ್ಶಮಯವಾದ ಗುರಿಯನ್ನು ಮೂಡಿಸುವ ಶಿಕ್ಷಣದ ಅಗತ್ಯತೆಯನ್ನು ಮನಗಂಡು ಕಾರ್ಯಚರಿಸುವ ಸಂಘ-ಸಂಸ್ಥೆಗಳ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದವರು ಕೊಂಡಾಡಿದರು.

ಮುಖ್ಯ ಭಾಷಣ ಮಾಡಿದ ಸೇವಾ ಭಾರತಿಯ ಪ್ರಮುಖ್ ಪುಷ್ಪರಾಜ್ ಶೆಟಿ ಅಡೆಕ್ಕಲ್‌ರವರು ಈ ಮಣ್ಣಿನ ಸಂಸ್ಕೃತಿಯ ಬಗ್ಗೆ ಅಪಾರ ಗೌರವವಿರಿಸಿಕೊಂಡಿದ್ದ ಅಂತೆಯೇ ಸಂಸ್ಕೃತಿಯೊಳಗೆ ನುಸುಳಿಕೊಂಡಿದ್ದ ವಿಕೃತಿಯ ಬಗ್ಗೆ ಸಡ್ಡೊಡೆದು ನಿಂತ ಅಂಬೇಡ್ಕರ್‌ರವರ ಜೀವನಾದರ್ಶಗಳ ಪಾಲನೆಯೊಂದಿಗೆ ಈ ಸಮಾಜದ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ. ದೇಶದ ಮಹಾನ್ ಚಿಂತಕ-ನಾಯಕರಾಗಿದ್ದ ಅಂಬೇಡ್ಕರ್‌ರವರಿಂದಾಗಿ ಈ ಮಣ್ಣಿನ ಮೂಲ ಸತ್ವದ ಗುಣಗಳಿಂದ ಕೂಡಿದ ಸಂವಿಧಾನ ರಚನೆಯಾಗಿದೆ ಎಂದು ವಿವರಿಸಿದರು. ಅಶ್ಪೃಶ್ಯ ಭಾವನೆಯ ಅನಿಷ್ಠ ಪದ್ದತಿಯಆ ಚರಣೆಯಿಂದ ಹಿಂದೂ ಸಮಾಜದ ಹಲವು ಮಂದಿ ತಪ್ಪು ಹೆಜ್ಜೆಯನ್ನಿರಿಸಿ ಅಮಾನವೀಯವಾಗಿ ವರ್ತಿಸಿದಾಗ ಹೋರಾಟದ ಮೂಲಕ ದಮನಿಸಲ್ಪಟ್ಟ ಸಮಾಜವನ್ನು ರಕ್ಷಿಸಲು ಮುಂದಾದ ಅಂಬೇಡ್ಕರ್‌ರವರು, ಲೋಕಾ ಸಮಸ್ತಾ ಸುಖಿನೋ ಭವಂತು ಎಂದ ಹಿಂದೂಧರ್ಮದ ಮೂಲ ಆಶಯವನ್ನು ಮನಗಂಡು ಸ್ವತಂತ್ರ ಭಾರತ ಹಿಂದೂಧರ್ಮದ ಮೂಲ ಆಶಯದಂತೆ ಕಾರ್ಯನಿರ್ವಹಿಸಬೇಕೆಂದು ಆಶಿಸಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಶಿಕ್ಷಣ ಸಂಯೋಜಕ ಮುದರ ಕಲ್ಕಾಡಿಯವರು ಮಾತನಾಡಿ, ಒರ್ವ ಭ್ರಾಹ್ಮಣ ಶಿಕ್ಷಕನ ಪ್ರೋತ್ಸಾಹದಿಂದ ವಿದ್ಯಾಭ್ಯಾಸ ಕಲಿತ ಭೀಮರಾವ್ ಅವರಿಂದಲೇ ಬ್ರಾಹ್ಮಣ ಸಮಾಜದ ಬಳಕೆಯಲ್ಲಿದ್ದ ಅಂಬೇಡ್ಕರ್ ಎಂಬ ಉಪ ನಾಮವನ್ನೂ ಪಡೆದುಕೊಂಡು ಖ್ಯಾತರಾದರು. ಧರ್ಮ ಶಿಕ್ಷಣದಿಂದ ವಿಮುಖರಾದ ಮಂದಿ ಸ್ಪರ್ಶ ಅಸ್ಪೃಶ್ಯತೆಯ ಬಾವದಲ್ಲಿ ಸಮಾಜವನ್ನು ಶೋಷಿಸಲು ಮುಂದಾದಾಗ ಮೌನ ಮುರಿದು ಮಾತನಾಡಿದರು. ಅಮಾನುಷತ್ವದ ವಿರುದ್ದ ಸಮರ ಸಾರಿದರು.ಅವರ ಜೀವನಾದರ್ಶವನ್ನು ಯುವ ಪೀಳಿಗೆಗೆ ತಿಳಿಯುವಂತಾಗಲು ಹಿಂದೂ ಸೇವಾ ಪ್ರತಿಷ್ಠಾನ ಸಂಕಲ್ಪಿತ ಸಾಮರಸ್ಯ ದಿನಾಚರಣೆಯನ್ನು ಸಮಾಜದ ಎಲ್ಲಾ ವರ್ಗದ ಜನತೆ ಒಗ್ಗೂಡಿ ಆಚರಿಸುತ್ತಿರುವುದು ಆರೋಗ್ಯ ಪೂರ್ಣ ಬೆಳವಣಿಗೆ.ತನ್ಮೂಲಕ ಅಂಬೇಡ್ಕರ್‌ರವರು ಕೇವಲ ಒಂದು ಜಾತಿಯ ನಾಯಕರಲ್ಲ ಬದಲಾಗಿ ಅವರು ಇಡೀ ಮನುಕುಲದ ನಾಯಕರೆಂದು ಮಾನ್ಯ ಮಾಡಿ ಗೌರವಿಸಿದಂತಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀ ಮಾಧವ ಶಿಶು ಮಂದಿರ ಸಮಿತಿಯ ಅಧ್ಯಕ್ಷ ಮನೋಜ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಯು.ಎಲ್ ಉದಯ್‌ಕುಮಾರ್ ವರದಿ ವಾಚಿಸಿ, ಕೆ ಸುಧಾಕರ ಶೆಟ್ಟಿ ವಂದಿಸಿದರು.

ಶ್ರೀಮತಿ ಪುಷ್ಪಲತಾತಿಲಕ್ ಹಾಗೂ ಹರಿರಾಮಚಂದ್ರರವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಿಂದ ಹಾಗೂ ಪುಟಾಣಿ ಮಕ್ಕಳಿಂದ ಭಾರತ ಮಾತೆಗೆ ಪೂಜೆ ಹಾಗೂ ವೀರ ಸನ್ಯಾಸಿ ವಿವೇಕಾನಂದ ಹಾಗೂ ಬಿ ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಗೈಯಲಯಿತು.

ಮಾತಾಜಿ ಪುಷ್ಪಲತಾ ಎಸ್‌ರವರ ಮಾರ್ಗದರ್ಶನದಲ್ಲಿ ಶಿಶು ಮಂದಿರದ ಪುಟಾಣಿಗಳಿಂದ ಹಾಗೂ ಬಾಲಗೋಕುಲದ ಮಕ್ಕಳಿಂದ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.

ಮಾತೃ ಸಂಗಮ

ಉಪ್ಪಿನಂಗಡಿ :ಇಲ್ಲಿನ ಶ್ರೀಮಾಧವ ಶಿಶು ಮಂದಿರ ಮತ್ತು ಮಾತೃ ಮಂಡಳಿಯ ಆಶ್ರಯದಲ್ಲಿ ನಡೆದ ಮಾ 3ರ ಆದಿತ್ಯವಾರದಂದು ನಡೆದ ಗಂಗಾ ಪೂಜೆ ಹಾಗೂ ಮಾತೃ ಸಂಗಮ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಾತೃ ಮಂಡಳಿ ಸದಸ್ಯರು, ಭರತ ನಾಟ್ಯದಲ್ಲಿ ಮಿಂಚಿದ ಬಾಲಗೋಕುಲ ಮಕ್ಕಳು, ಹಾಗೂ ಶಿಶು ಮಂದಿರದ ಪುಟಾಣಿಗಳ ನರ್ತನ ಗಮನ ಸೆಳೆಯಿತು.

ಗಂಗಾ ಪೂಜನಾ ಮತ್ತು ಮಾತೃ ಸಂಗಮ ಸಭಾ ಕಾರ್ಯಕ್ರಮ

ಉಪ್ಪಿನಂಗಡಿ : ಸಮಾಜದ ಶ್ರದ್ಧಾ ಬಿಂದುಗಳಲ್ಲಿ ಒಂದಾಗಿರುವ ಮಾತೃಶಕ್ತಿಯ ಜಾಗೃತಿಯಿಂದ ರಾಷ್ಟ್ರದ ನವೋತ್ಥಾನ ಸಾಧ್ಯ. ನಮ್ಮ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆಗೈದ ವೀರ ವನಿತೆಯರ ಬಗ್ಗೆ, ರಾಷ್ಟ್ರ ಪುರುಷರಿಗೆ ಜನ್ಮವಿತ್ತ ಮಹಾ ಮಾತೆಯರ ಬಗ್ಗೆ ಮರೆವು ಸಲ್ಲದು. ರಾಷ್ಟ್ರ್ರದೆದುರಿನ ಸವಾಲುಗಳನೆದುರಿಸಲು ಸಾಂಘಿಕ ಹೋರಾಟ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಪರ್ಕ ಪ್ರಮು ಖ್‌ ರವೀಂದ್ರರವರು ಕರೆ ನೀಡಿದರು. ಅವರು, ಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದ ಮತ್ತು ಮಾತೃ ಮಂಡಳಿಯ ಆಶ್ರಯದಲ್ಲಿ ಉಪ್ಪಿನಂಗಡಿಯ ನೇತ್ರಾವತಿ ಕುಮಾರಾಧಾರ ನದಿ ಸಂಗಮ ತಟದಲ್ಲಿ ಆದಿತ್ಯವಾರದಂದು (ಮಾ 3) ನಡೆದ ಗಂಗಾ ಪೂಜನಾ ಮತ್ತು ಮಾತೃ ಸಂಗಮದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.

ನಂಬಿಕೆಯ ಆಧಾರದಲ್ಲಿ ಬಾಳುವ ಸಮಾಜ ಹಿಂದೂ ಸಮಾಜ. ಇಲ್ಲಿ ಎಲ್ಲಾ ಕಣ ಕಣಗಳಲ್ಲೂ ನಾವು ದೇವರನ್ನು ಕಾಣುತ್ತೇವೆ. ಪವಿತ್ರ ಪಾವನಳಾದ ಗಂಗೆಯನ್ನು ನಾವು ನಿತ್ಯ ಸ್ಮರಿಸುತ್ತೇವೆ. ದೇಶದ ಎಲ್ಲಾ ನದಿಗಳನ್ನು ಗಂಗೆ ಸಮಾನಳು ಎಂದು ಪೂಜಿಸುತ್ತೇವೆ. ಸಕಲ ಜೀವಕೋಟಿಗೂ ಜೀವ ಜಲವನ್ನುಒದಗಿಸುವ ಗಂಗೆಯನ್ನು ಪೂಜಿಸುವುದು , ದೇವರೆಂದು ನಂಬಿರುವುದು ಈ ಮಣ್ಣಿನ ಸಂಸ್ಕೃತಿ. ಈ ಸಂಸ್ಕೃತಿಯ ಮೌಲ್ಯವನ್ನು ಪುನರಪಿ ಮನವರಿಕೆ ಮಾಡಿಕೊಡುವ  ಹಿನ್ನೆಲೆಯಲ್ಲಿ ಗಂಗಾ ಪೂಜೆಯನ್ನು ನೇತ್ರಾವತಿ ಮತ್ತು ಕುಮಾರಾಧಾರ ನದಿ ಸಂಗಮ ಸ್ಥಳದಲ್ಲಿ ನಡೆಸಲಾಗುತ್ತಿದೆ. ನಮ್ಮದೇಶದಲ್ಲಿ ಬಟ್ಟೆಧರಿಸುವುದು ಮಾನರಕ್ಷಣೆಗಾಗಿ, ಅದು ಗೌರವದ ಸಂಕೇತವೂ ಹೌದು. ತಿಲಕವಿಟ್ಟು, ಬಳೆತೊಟ್ಟು ಸುತ್ತಾಡುವುದೆಂದರೆ ಅದೆಲ್ಲವೂ ಗೌರವದ ಪ್ರತೀಕವಾಗಿದೆ. ಆದರೆ ನಮ್ಮ ಇಂದಿನ ಜನಾಂಗ ಈ ಬಗ್ಗೆ ಅನಾದರವಿರಿಸಿ, ಫ್ಯಾಷನ್ ಹೆಸರಿನಲ್ಲಿ ತಿಲಕ, ಬಳೆಗಳನ್ನು ತ್ಯಜಿಸಿರುವುದು ದುರಂತಮಯ ವಿದ್ಯಾಮಾನ. ಉಳಿಸಿಕೊಡಬೇಕಾದವರು ತಿಳಿಸಿಕೊಡದಿದ್ದರೆ, ದಿನ ನಿತ್ಯ ನೋಡುವ ಟಿ ವಿಯಲ್ಲ ಿಕಾಣಿಸುವ ಮಹಿಳೆಯರು ಇದೇ ರೀತಿಯ ತಿಲಕ ಬಳೆಗಳ ರಹಿತವಾದವರೇ ಆದರೆ ಹೆಣ್ಣು ಮಕ್ಕಳು ಇದರತ್ತ ಸಕಾರಾತ್ಮಕವಾಗಿ ಚಿಂತಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು. ನಮ್ಮ ಸಂಸ್ಕೃತಿಯ ಬಗ್ಗೆ ನಿರ್ಲಕ್ಷದಿಂದಾಗಿ ಅವಿಭಕ್ತ ಕುಟುಂಬ ವಿಭಕ್ತವಾಗಿದೆ. ದೀರ್ಘ ದಾಂಪತ್ಯ ವಿಚ್ಚೇದನದತ್ತ ಸಾಗಿದೆ. ಕೌಟುಂಬಿಕ ಪ್ರೀತಿ- ವಿಶ್ವಾಸ- ಗೌರವ- ರಕ್ಷಣೆ ಮರೆಯಾಗಿದೆ. ಒಟ್ಟು ಸಮಾಜದ ದಿಕ್ಕು ತಪ್ಪಿ ಬವಣೆ ಪಡುವಂತಾಗಿದೆ. ಈ ಸೂಕ್ಷ್ಮತೆಯನ್ನು ಮನಗಂಡು ದೇಶದ ಹಲವಾರು ಸಂಘ ಸಂಸ್ಥೆಗಳು ಸಮಾಜದ ಪುನರುತ್ಥಾನಕ್ಕಾಗಿ ಶ್ರಮಿಸುತ್ತಿದೆ. ಅಂತಹ ಶ್ರಮವನ್ನು ಸಾರ್ಥಕಗೊಳಿಸಲು ಪ್ರತಿಯೊಂದು ಮನೆಯೂ ಪ್ರತಿಯೊಬ್ಬ ಮಹಿಳೆಯೂ ಕಂಕಣ ಬದ್ದರಾಗಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಮುಖ್ಯೋಪಧ್ಯಾಯಿನಿ ಶ್ರೀಮತಿ ಶಶಿಕಲಾ ರಾವ್‌ರವರು ಮಾತನಾಡಿ, ಮಹಿಳೆಯನ್ನು ಮಾತೆ ಎಂದು ಗೌರವಿಸಿ ಪೂಜಿಸುವ ನಮ್ಮ ಈ ಸಮಾಜಕ್ಕೆ ಮಹಿಳೆಯರೂ ಜಾಗೃತಶೀಲರಾಗಿ ಕಾರ್ಯ ನಿರ್ವಹಿಸುವ ಕಾಲ ಘಟ್ಟದಲ್ಲಿದ್ದೇವೆ. ಧಾರ್ಮಿಕ ವಾಗಿ  ಮಹತ್ವ ಪಡೆದಿರುವ, ಗಂಗಾ ಪೂಜೆಯನ್ನುಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ಸಾಮರಸ್ಯ ಭಾವದಿ, ಸಾಮಾಜಿಕ ಕಾಳಜಿಯ ಹಿನ್ನೆಲೆಯೊಂದಿಗೆ ನಡೆಸುತ್ತಿರುವುದು ಆದರ್ಶಪ್ರಾಯವೆನಿಸಿದೆ ಎಂದರು.

ನೂರಾರು ಮಾತೆಯರು ಭಾಗವಹಿಸಿದ್ದ ಈ ಗಂಗಾ ಪೂಜನಾ ಕಾರ್ಯಕ್ರಮದ ಪ್ರಧಾನ ಪೂಜೆಯನ್ನು ಸಮಸ್ತ ಮಾತೆಯರ ಪರವಾಗಿ ಕುಂಜ್ಞ ನಲಿಕೆ ದಂಪತಿಗಳು ನೆರವೇರಿಸಿದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಶ್ವಹಿಂದೂ ಪರಿಷತ್ ಪ್ರಾಂತ ಸರಸಂಘ ಪ್ರಮುಖ್ ಬಸವರಾಜ ಮಾತನಾಡಿ, ಪ್ರಯಾಗದಲ್ಲಿ ಈ ಬಾರಿ ನಡೆದಕುಂಭ ಮೇಳದಲ್ಲಿ ಸಂತ ಸಮಾವೇಶದಲ್ಲಿ ಕೈಗೊಂಡ ನಿರ್ಣಯದಂತೆ ದೇಶವ್ಯಾಪಿ ಹಿಂದೂಗಳೆಲ್ಲರೂ ರಾಮನಾಮ ಜಪಯಜ್ಞದಲ್ಲಿ ಪಾಲ್ಗೊಂಡು, ಅಯೋಧ್ಯಾ ಶ್ರೀ ರಾಮ ಮಂದಿರ ನಿರ್ಮಾಣದತ್ತ ಚಿಂತನಾಶೀಲರಾಗಬೇಕೆಂದರು. ಹಿಂದೂ ಸೇವಾಪ್ರತಿಷ್ಠಾನದ ಸಂಚಾಲಕ ಶ್ರೀಪಾದ, ಪುತ್ತೂರುಜಿಲ್ಲಾ ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷ ರಾಧಾಕೃಷ್ಣ ಭಟ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ಶ್ರೀ ಮಾಧವ ಶಿಶು ಮಂದಿರ ಸಮಿತಿಯು ಸ್ವಾಮೀ ವಿವೇಕಾನಮಂದರ ನೂರೈವತ್ತು ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಅಂಚೆ ಕಾರ್ಡ್ ನಲ್ಲಿ ಸ್ವಾಮೀ ವಿವೇಕಾನಂದರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಸುಭದ್ರಾ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಪುಷ್ಪಲತಾ ಜನಾರ್ಧನ್ ವಂದಿಸಿದರು. ಪುಷ್ಪಲತಾ ತಿಲಕ್‌ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮುಂದಾಳುಗಳಾದ , ದಿನೇಶ್‌ಜೈನ್, ಶಿವಪ್ರಸಾದ್, ಕರುಣಾಕರ ಸುವರ್ಣ, ಕಂಗ್ವೆ ವಿಶ್ವಾನಾಥ ಶೆಟ್ಟಿ, ಸಂಜೀವ ಮಠಂದೂರು, ಡಾ . ಎಂ ಎನ್ ಭಟ್, ಯು ರಾಮ, ಮೊದಲಾದವರು ಭಾಗವಹಿಸಿದ್ದರು.

ಗಂಗಾ ಪೂಜನಾ

ಉಪ್ಪಿನಂಗಡಿ : ಇಲ್ಲಿನ ಶ್ರೀಮಾಧವ ಶಿಶು ಮಂದಿರ ಮತ್ತು ಮಾತೃ ಮಂಡಳಿಯ ಆಶ್ರಯದಲ್ಲಿ ನಡೆದ ಗಂಗಾ ಪೂಜನಾ ಕಾರ್ಯಕ್ರಮದಲ್ಲಿ ಮಾತೆಯರಿಂದ ಪೂಜಿಸಲ್ಪಟ್ಟ ನೇತ್ರಾವತಿ ನದಿ ಕಂಗೊಳಿಸಿದ ಬಗೆ ಇದು. ಕುಂಜ್ಞ ನಲಿಕೆ ದಂಪತಿಗಳ ಪೂಜಾ ನೇತೃತ್ವದಲ್ಲಿ ಗಂಗೆ ಸ್ವರೂಪಿ ನೇತ್ರಾವತಿಗೆ ಭಾಗೀನ ಸಮರ್ಪಣೆ, ಪ್ರತಿಯೋರ್ವ ಭಕ್ತರು ಗಂಗೆಯನ್ನು ಪೂಜಿಸಿ ಬಿಟ್ಟ ಹಣತೆಗಳು ನದಿಯಲ್ಲಿ ಸಾಲುಗಟ್ಟಿ ಸಾಗಿದ ದೃಶ್ಯಗಳು ಮನೋಹರವಾಗಿತ್ತು.

ಮಕರ ಸಂಕ್ರಮಣ ಉತ್ಸವ

ಉಪ್ಪಿನಂಗಡಿ : ಪ್ರಾಕೃತಿಕ ಹಾಗೂ ಧಾರ್ಮಿಕವಾಗಿ ಮಹತ್ವವುಳ್ಳ ಮಕರ ಸಂಕ್ರಮಣ ಉತ್ಸವವನ್ನು ಸಾಮೂಹಿಕವಾಗಿ ಆಚರಿಸುವುದರಿಂದ ಸಮಾಜದ ಸ್ವಾಸ್ಥ್ಯ ಬೆಳಗುವುದು. ರಾತ್ರಿ ಕಡಿಮೆಯಾಗಿ ಹಗಲು ಹೆಚ್ಚಾಗುವ ಈ ಸಮಯದಲ್ಲಿದೇವತಾ ಶಕ್ತಿ ಯಾ ಸಾತ್ವಿಕ ಶಕ್ತಿಗಳು ಮೇಲೈಸಲಿರುವ ಸಂಕೇತವೂ ಇದೆ. ಎಂದುಉದ್ಯಮಿ, ಚಿಂತಕ ಮಿತ್ರಸೇನ್‌ ಜೈನ್ ತಿಳಿಸಿದರು.  ಅವರು ಸೋಮವಾರದಂದು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶುಮಂದಿರದಲ್ಲಿ  ನಡೆದ ಮಕರ ಸಂಕ್ರಮಣ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು.

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಯಕ್ಷಗಾನ ಕಲಾವಿದ ಅಂಬಾಪ್ರಸಾದ್ ಪಾತಾಳ ರವರು, ಸೂರ್ಯನ ಚಲನೆ ಪ್ರಾಕೃತಿಕ ಬದಲಾವಣೆಯನ್ನು ಹೇಗೆ ಉಂಟು ಮಾಡುತ್ತಿದೆಯೋ ಹಾಗೇ ಮಾನವ ಜೀವನದಲ್ಲಿ ಬದಲಾವಣೆಯನ್ನು ಮೂಡಿಸುತ್ತದೆ. ಗತಿಸಿದ ತಂದೆಗೆ ಮೋಕ್ಷ ಬಯಸುವ ಈ ಹಬ್ಬದಲ್ಲಿ ವಿವೇಕದಿಂದ ವಿನಾಶವನ್ನುತಡೆಯುವ ಸಂದೇಶವೂ ಇದೆ ಎಂದರು.

ಸಂಕ್ರಾಂತಿ ಹಬ್ಬದ ಈ ಕಾರ್ಯಕ್ರಮದಲ್ಲಿ ಸಮಾಜ ಪರಿವರ್ತನೆಯ ಕೈಂಕರ್ಯ ತೊಟ್ಟ ಭಗಿನಿ ಪುಷ್ಪಲತಾ ಮಾತಾಜಿ ಮತ್ತು ಶ್ರೀಮತಿ ಚಂದ್ರಾವತಿಯವರನ್ನು ಶಿಶುಮಂದಿರ ಸಮಿತಿ ಗೌರವಾಧ್ಯಕ್ಷಯು ರಾಮರವರು ವಸ್ತ್ರ- ಪುಷ್ಪವನ್ನಿತ್ತು ಗೌರವಿಸಿದರು. ಸಮಿತಿ ಅಧ್ಯಕ್ಷ ಮನೋಜ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿ ಹಬ್ಬಗಳನ್ನು ಏಕೀಭಾವದಿಂದ ಆಚರಿಸಿದಾಗ, ಸಾಮರಸ್ಯ ಭಾವ ಮೊಳಗಿ ಬ್ರಾತೃತ್ವ ಬೆಳಗುವುದು ಎಂದರು.  ಶ್ರೀಮತಿ ಮಮತಾ ಸ್ವಾಗತಿಸಿ, ಶ್ರೀಮತಿ ರವಿಕಲಾ ವಂದಿಸಿದರು. ಯತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿವೇಕಾನಂದರ ಆದರ್ಶ ಪಾಲಕರಾಗೋಣ – ಯು ವಿ ಭಟ್

ಉಪ್ಪಿನಂಗಡಿ : ಜಗತ್ತಿಗೆ  ಭಾರತೀಯಜೀವನ ಮೌಲ್ಯಗಳನ್ನು ತಿಳಿಸಿದ, ಹಿಂದೂಧರ್ಮದ ಶ್ರೇಷ್ಠತೆಯನ್ನು ಪರಿಚಯಿಸಿದ ಸ್ವಾಮಿ ವಿವೇಕಾನಂದರು ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕಾಗಿ ಕನಸು ಕಂಡವರು. ಇದೀ ದೇಶ ಮೌಡ್ಯಕ್ಕೆ ಸಿಲುಕಿ ಒದ್ದಾಡುತ್ತಿದ್ದಾಗ, ಅಂಘಟಿತರಾಗಿ ದುರ್ಬಲರಾಗಿದ್ದಾಗ ಅವರುಗಳ ಉದ್ದಾರಕ್ಕೆ ಶ್ರಮಿಸಿದವರು. ದೇಶದ ಸನ್ಯಾಸಿ ಪರಂಪರೆಗೆ ಮೆರಗು ತಂದುಕೊಟ್ಟ ಈ ಮಹಾನ್‌ ಚೇತನದ ನೂರೈವತ್ತು ವರ್ಷಾಚರಣೆ ಅವರ ಆದರ್ಶ ಪಾಲನೆಯ ಬದ್ದತೆಯನ್ನು ನೆನಪಿಸುವಂತಾಗಲಿ ಎಂದು ಹಿರಿಯ ಮುತ್ಸದ್ದಿ ಸಾಮಾಜಿಕ ಮುಂದಾಳು ಸಾಹುಕಾರ್‌ ಯು ವಿ ಭಟ್ ತಿಳಿಸಿದರು. ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ  ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ವಿವೇಕಾನಂದ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಸಾಮಾಜಿಕ ಮುಂದಾಳು ಯು ವಿ ಭಟ್ ಮಾತನಾಡುವುದು.

ಭಾರತದೇಶದ ಭವ್ಯಇತಿಹಾಸದ ಹೊರತಾಗಿಯೂ ದೇಶ ದಾಸ್ಯಕ್ಕೆ ಸಿಲುಕಿದ ಸಮಯದಲ್ಲಿ, ಭಾರತದ ಬಗ್ಗೆ ವಿದೇಶದಲ್ಲಿ ಕೇವಲ ಭಾವನೆ ಮೂಡಿದ್ದ ಸಮಯದಲ್ಲಿ ಭಾರತದ ಬಗ್ಗೆ ಬೆರಗುಕಣ್ಣಿನಿಂದ ನೋಡುವಂತೆ ಮಾಡಿದ ಮಹಾನ್ ಸನ್ಯಾಸಿಯಾಗಿದ್ದಾರೆ. ಧರ್ಮವನ್ನು ದುರ್ಬಳಕೆ ಮಾಡುವ ಕೃತ್ಯವನ್ನು ಖಂಡಿಸಿ,  ಧರ್ಮದ ಸಾರ ಸರ್ವಸ್ವವನ್ನು ಸಾಮಾನ್ಯ ಜನರಿಗೂ ತಲುಪಿಸುವಂತೆ ಮಾಡಿದ ಅವರ ಕಾರ್ಯಶೈಲಿ ದೇಶಕ್ಕೆಅವರ ಮಾಹನ್‌ ಕೊಡುಗೆಯಾಗಿದೆ. ಆಧ್ಯಾತ್ಮಿಕ ಜೀವನದ ರಸವನ್ನು ಜಗತ್ತಿಗೆ ಸಾರಿದರಾಷ್ತ್ರದ ಪುನರ್ ವೈಭವಕ್ಕೆ ಶ್ರಮಿಸಿದ ವಿವೇಕಾನಂದರನ್ನುಅವರ ಆದರ್ಶ ಪಾಲನೆಯೊಂದಿಗೆ, ಅವರ ಕನಸು ನನಸಾಗಿಸುವುದರೊಂದಿಗೆ ಅವರ ನೂರೈವತತ್ತನೇ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ ಎಂದರು.

ವಿವೇಕಾನಂದರ ವೇಷ ತೊಟ್ಟ ಉಪ್ಪಿನಂಗಡಿ ಶ್ರೀ ಮಾಧವ ಶಿಶುಮಂದಿರ ಮತ್ತು ಇಳಂತಿಲ ಶ್ರೀ ಕೇಶವ ಶಿಶುಮಂದಿರದ ಪುಟಾಣಿ ಮಕ್ಕಳ ಪೋಟೋ .

ಮುಖ್ಯ ಭಾಷಣ ಮಾಡಿದ ರಾ ಸ್ವ ಸೇ ಸಂಘದ ಯತೀಶ್‌ ಆಚಾರ್ಯರವರು, ಎದೆಗುಂದದ, ಅಳುಕದ, ಹಿಂಜರಿಯದ , ದೃಢಮನಸ್ಸಿನ, ಗುರಿಯತ್ತ ಸಾಗುವ ಯುವಜನಾಂಗದ ನಿರ್ಮಾಣದೊಂದಿಗೆ ರಾಷ್ಟ್ರವನ್ನು ಗತ ವೈಭವಕ್ಕೆಕೊಂಡೊಯ್ಯಲು ವಿವೇಕಾನಂದರು ಬಯಸಿದ್ದರು.  ಸಾತ್ವಿಕ ಉದ್ದೇಶಕ್ಕಾಗಿ, ಸತತಯತ್ನವನ್ನು ನಡೆಸಿದಾಗ ದೇವರದಯೆ ನಿಖರವಾಗಿ ಲಭಿಸುವುದಕ್ಕೆ ವಿವೇಕಾನಂದರು ನೈಜ ಸಾಕ್ಷಿಯಾಗಿದ್ದಾರೆ ಎಂದು ವಿವರಿಸಿದರು.

ಶಿಶು ಮಂದಿರ ಅಧ್ಯಕ್ಷ ಮನೋಜ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಜಗದೀಶ್ ಶೆಟ್ಟಿ ಸ್ವಾಗತಿಸಿ, ಹರಿರಾಮಚಂದ್ರ ವಂದಿಸಿದರು. ಶಿಶುಮಂದಿರ ಮಾತಾಜಿ ಭಗಿನಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.

ಸೇವಾ ದಿನ ಆಚರಣೆ

ಉಪ್ಪಿನಂಗಡಿ : ಮೌಲ್ಯಗಳ ಕುಸಿತಕ್ಕೆ ಒಳಗಾಗಿರುವ ಇಂದಿನ ಆಧುನಿಕಜೀವನದಲ್ಲಿ ಸಂಸ್ಕಾರ ಶಿಕ್ಷಣ ನೀಡುವ ಕಾರ್ಯ ಅತ್ಯಗತ್ಯವಾದದ್ದು ಹಾಗೂ ದೇವತಾಕಾರ್ಯಕ್ಕೆ ಸರಿಸಮಾನವಾದದ್ದಾಗಿದೆ. ಹಿಂದೂ ಸಮಾಜದಲ್ಲಿ ಅನಪೇಕ್ಷಿತ ರೀತಿಯಲ್ಲಿ ಸೇರಿಕೊಂಡಿದ್ದ ಅನಿಷ್ಠಗಳನ್ನು ಸೇವೆಯೆಂಬ ಧ್ಯೇಯದಲ್ಲಿ ನಿವಾರಿಸಲು ಶ್ರಮಿಸಿದ  ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಸ್ವರ್ಗೀಯ ಅಜಿತ್‌ಕುಮಾರಜೀ ಸ್ಮರಣಾರ್ಥ ನಡೆಸುವ ಸೇವಾ ದಿನ ಸಮಾಜಕ್ಕೆ ಸೇವಾ ದೀಕ್ಷೆ ನೀದಲು ಸಹಕಾರಿಯಾಗಲಿ ಎಂದು ಹಿರಿಯ ಚಿಂತಕ, ವಿಶ್ರಾಂತ ಶಿಕ್ಷಕ ಎಂ ಕೆ ಸಾಲಿಯಾನ್‌ ಕರೆ ನೀಡಿದ್ದಾರೆ. ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಸೇವಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಸಮಾಜದ ಭವಿಷತ್‌ಕಾಲದ ಸಂಪತ್ತಾಗಿರುವ ಎಳೆಯ ಮಕ್ಕಳನ್ನು ಸಂಸ್ಕಾರ ಶಿಕ್ಷಣಕ್ಕೆ ಒಳಪಡಿಸಿ ಅವರನ್ನುರಾಷ್ಟ್ರಭಕ್ತರನಾಗಿಸುವ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ಜಾತಿ ವೈಪರೀತ್ಯಗಳನ್ನು ಮೆಟ್ಟಿ ನಿಂತು, ಸಮಾನ ಭಾವದಿಂದ ಎಲ್ಲರನ್ನೂ ಮುಖ್ಯ ವಾಹಿನಿಯಲ್ಲಿ ತಂದು ನಿಲ್ಲಿಸುವಕಾರ್ಯ ಯೋಜನೆಗಳು ಆದರ್ಶಪ್ರಾಯವಾಗಿದೆ. ಈ ಸಾತ್ವಿಕ ಕಾರ್ಯಕ್ಕೆ ಪ್ರೇರಣೆಯಾಗಿ ಹಿಂದೂ ಸೇವಾ ಪ್ರತಿಷ್ಠಾನವನ್ನು ಹುಟ್ಟು ಹಾಕಿದ ಅಜಿತ್ ಪುಣ್ಯತಿಥಿಯ ಅಂಗವಾಗಿ ನಡೆಸುವ ಸೇವಾ ದಿನಾಚರಣೆಯು ಸಮಾಜದ ಎಲ್ಲರ ಜವಾಬ್ದಾರಿಯನ್ನು ನೆನಪಿಸುವಂತಿದೆ ಎಂದರು.

ಮುಖ್ಯ ಭಾಷಣ ಮಾಡಿದ ಶ್ರೀರಾಮ ಪ್ರಾಥಮಿಕ ಶಾಲೆಯ ಸಂಚಾಲಕ ಯು ಜಿ ರಾಧ, ಭವ್ಯ ಸಂಸ್ಕೃತಿ, ಭವ್ಯ ಪರಂಪರೆ ಭವ್ಯ ಇತಿಹಾಸವನ್ನು ಹೊಂದಿದ ನಮ್ಮಜೀವನ ಪದ್ದತಿಯಲ್ಲಿ ಹೊಕ್ಕಿರುವ ಹಲವು ಅನಿಷ್ಠ ಪದ್ದತಿಗಳಿಂದಾಗಿ ಸಮಾಜ ದುರ್ಬಲವಾಗಿದೆ. ಇಂತಹ ಅನಿಷ್ಠ ಪದ್ದತಿಗಳನ್ನು ಆರೋಗ್ಯಕರ ರೀತಿಯಲ್ಲಿ ನಿವಾರಿಸಿಕೊಂಡು, ಸಮಾಜವನ್ನು ಸುದೃಢವಾಗಿ ಬೆಳೆಸುವ ಯೋಜನೆ ಅಜಿತ್‌ಜೀಯವರದ್ದಾಗಿತ್ತು. ಅವರ ಆಶಯಗಳನ್ನು ಅನುಷ್ಠಾನಿಸಲು ಇಂದು ಸಾವಿರಾರು ಸೇವಾವ್ರತಿಗಳು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಅಗತ್ಯವುಳ್ಳವರಿಗೆ ಸಲ್ಲಿಸುವ  ಸೇವೆ ನಮ್ಮ ಜೀವನದ ದೇವನೊಲುಮೆಯ ಕಾರ್ಯವೆಂಬ ಸತ್ಯವನ್ನುಅಜಿತರು ಪ್ರತಿಪಾದಿಸಿದ್ದು, ಅದನ್ನುಎಲ್ಲರೂ ನಿತ್ಯಜೀವನದಲ್ಲಿ ಅನುಷ್ಠಾನಿಸಬೇಕೆಂದು ಕರೆ ನೀಡಿದರು.


ಇದೇ ಸಂಧರ್ಭದಲ್ಲಿ ಜೀವನೋಪಾಯಕ್ಕಾಗಿ ಕ್ಷೌರಿಕ ವೃತ್ತಿಯನ್ನು ನಡೆಸುತ್ತಿದ್ದರೂ, ತನ್ನ ಬಹು ಪಾಲು ಸಮಯವನ್ನು ಸಮಾಜದ ದುಃಖಿತರ ಸೇವೆಗೆ ಮೀಸಲಿರಿಸಿ, ಅವರುಗಳ ನೋವು ನಿವಾರಿಸುವ, ಮರಣದಂತಹ ಸಂದರ್ಭದಲ್ಲಿ ಮರಣೋತ್ತರ ವಿಧಿ ವಿಧಾನಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನೆರವೇರಿಸುವ, ತನ್ಮೂಲಕ ಸಮಾಜದ ಮಮತೆಯ ಮಗನಾಗಿರುವ ಹರೀಶ್ ಭಂಢಾರಿರವರ ಸೇವಾ ಗುಣವನ್ನು ಪರಿಗಣಿಸಿ, ಶಾಲು, ಫಲ-ಪುಷ್ಪ ತಾಂಬೂಲವನ್ನಿತ್ತು ಗೌರವಿಸಲಾಯಿತು.

ಪ್ರತಿಷ್ಠಾನದಲ್ಲಿ ಸೇವಾವ್ರತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಸಹಾಯಕಿ ಭಗಿನಿ ಅಭಿಲಾಶಾ ಮಾತಾಜಿ ಹಾಗೂ ಯೋಗ ಶಿಕ್ಷಕಿಯಾಗಿ ನಿಯುಕ್ತಿಗೊಂಡ ಭಗಿನಿ ಮಾಲಾಶ್ರೀ ಮಾತಾಜಿಯವರಿಗೆ ಮಾತೃ ಮಂಡಲಿಯ ಮಾತೆಯರು ಮಡಿಲು ತುಂಬಿಸಿ ಅಭಿನಂದಿಸಿದರು.

ಶಿಶು ಮಂದಿರದ ಪುಟಾಣಿ ಮಕ್ಕಳ ಪ್ರಾರ್ಥನಾ ವಿಧಿವಿಧಾನಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ, ಮಾತೃ ಮಂಡಳಿಯ ಸದಸ್ಯೆ ಶ್ರೀಮತಿ ನಂದಿನಿ ಸ್ವಾಗತಿಸಿದರು. ಶಿಶುಮಂದಿರದ ಮಾತಾಜಿ ಭಗಿನಿ ಪುಷ್ಪಲತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಿಶು ಮಂದಿರ ಸಮಿತಿಯ ಅಧ್ಯಕ್ಷ ಮನೋಜ್ ಶೆಟ್ಟಿ, ಉಪಾಧ್ಯಕ್ಷ ಯತೀಶ್ ಶೆಟ್ಟಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಹರಿರಾಮಚಂದ್ರ, ಉಪ್ಪಿನಂಗಡಿ ಸಿ ಎ ಬ್ಯಾಂಕ್‌ ಅಧ್ಯಕ್ಷ ಭಾಸ್ಕರ ಆಚಾರ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದ್ದರು.

ಗಂಗಾ ಪೂಜೆ ಮತ್ತು ಮಾತೃ ಸಂಗಮ ಕಾರ್ಯಕ್ರಮ

ಉಪ್ಪಿನಂಗಡಿ : ಭಾರತೀಯಜೀವನ ಪದ್ದತಿಯಲ್ಲಿ ಬೆರೆತಿರುವ ಮೌಲ್ಯಬಿಂದುಗಳ ಮಹತ್ವವನ್ನು ಅರಿತು ಅದನ್ನು ಉಳಿಸಿ ಬೆಳೆಸುವತ್ತ ಮಾತೆಯರು ಕಾಳಜಿಯುಕ್ತ ಗಮನಹರಿಸಬೇಕೆಂದು ಎಂಆರ್‌ಪಿಎಲ್‌ ಡೆಪ್ಯೂಟಿ ಜನರಲ್ ಮೆನೇಜರ್ ಶ್ರೀಮತಿ ಲಕ್ಷ್ಮೀ ಎಂ ಕುಮಾರನ್‌ಕರೆ ನೀಡಿದರು. ಅವರು ಉಪ್ಪಿನಂಗಡಿಯ ನೇತ್ರಾವತಿ-ಕುಮಾರಾಧಾರ ನದಿ ಸಂಗಮ ಸ್ಥಳದಲ್ಲಿ ಶ್ರೀ ಮಾಧವ ಶಿಶುಮಂದಿರ ಸಮಿತಿ ಮತ್ತು ಮಾತೃ ಮಂಡಳಿ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಆದಿತ್ಯವಾರ ರಾತ್ರಿ ನಡೆದ ಗಂಗಾ ಪೂಜೆ ಮತ್ತು ಮಾತೃ ಸಂಗಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

 

ನಮ್ಮ ವೇದ ಪುರಾಣಗಳಲ್ಲಿ ಲಭಿಸುವಜೀವನದ ಮೌಲ್ಯಗಳನ್ನು ನಾವಿಂದು ಪಾಶ್ಚ್ಯಾತ ದೇಶಗಳ ಅನುಕರಣೆಯ ಭರದಲ್ಲಿ ಕಡೆಗಣಿಸುತ್ತಿದ್ದೇವೆ. ಆದರೆ ಅದನ್ನೇ ಅಮೇರಿಕಾ ದೇಶದವರು ಉತ್ತಮವೆಂದರೆ ನಾವದನ್ನು ಗೌರವಿಸಲು ಮುಂದಾಗುತ್ತೇವೆ ಎಂದ ಅವರು, ಋಷಿ ಮುನಿಗಳು ತಪಸ್ಸಿನಿಂದ ಕಂಡುಕೊಂಡ ಸತ್ಯವನ್ನುಇಂದು ವಿಜ್ಞಾನಿಗಳು ಪರೀಕ್ಷೆಯಿಂದ ಕಂಡುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು. ಮಾತೆಯರು ಧರಿಸುವ ಬಿಂದಿ, ಬಳೆ, ಕಾಲುಂಗುರ, ಬಟ್ಟೆ ಬರೆ ಸಹಿತ ಎಲ್ಲವೂ ಒಂದೊಂದು ಮಹತ್ವವನ್ನು ಹೊಂದಿದೆ. ನಮ್ಮ ಉಡುಗೆ ತೊಡುಗೆ ನಮ್ಮನ್ನು ಗೌರವದಿಂದ ನೋಡುವಂತಿರಬೇಕೆ ವಿನಃ ಅನ್ಯದೃಷ್ಠಿಯಿಂದ ನೋಡುವಂತಿರಬಾರದು ಎಂದವರು ಕಳಕಳಿ ವ್ಯಕ್ತಪಡಿಸಿ ತಿಳಿಸಿದರು.

 

ಮುಖ್ಯ ಭಾಷಣ ಮಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ಸರೋಜಿನಿ ಕೆ ಮೆನಾಲ ರವರು, ಮನೆ,  ಮಕ್ಕಳನ್ನು ಸಂಸ್ಕಾರಗೊಳಿಸುವ ಮಹಿಳೆ ಇಡೀ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ್ರವಹಿಸುತ್ತಾಳೆ. ಈ ಕಾರಣಕ್ಕೆಇಂದು ಸಮಾಜದ ಎಲ್ಲಾ ನ್ಯೂನ್ಯತೆಗಳಿಗೆ ಮಹಿಳೆಯರನ್ನೇ  ದೂಷಿಸಲಾಗುತ್ತಿದೆ. ಭಾರತೀಯ ಜೀವನದಲ್ಲಿ ಮಹಿಳೆಯರಿಗೆ ಇರುವ ಗೌರವವನ್ನು ಉಳಿಸಿ ಬೆಳೆಸುವಲ್ಲಿ ಪ್ರತಿ ಮನೆಯ ಮಹಿಳೆಯೂ ಕಂಕಣಬದ್ದರಾಗಬೇಕು. ಪ್ರಕೃತಿ ಮಾತೆಯನ್ನು ಪೂಜಿಸುವ ನಮ್ಮ ಸನಾತನ ಸಂಸ್ಕೃತಿಯ ಹಿನ್ನೆಲೆಯಲ್ಲಿ ಸಂಗಮ ಸ್ಥಳವಾದ ಉಪ್ಪಿನಂಗಡಿಯಲ್ಲಿ ಗಂಗಾ ಪೂಜೆಯನ್ನುಧಾರ್ಮಿಕ ನೆಲೆಯಲ್ಲಿ ನಡೆಸಿಕೊಂಡು ಬರುತ್ತಿರುವುದು ಸಂತಸದಾಯಕವೆಂದರು.

 

ನೂರಾರು ಸಂಖ್ಯೆಯಲ್ಲಿ ಗಂಗಾ ಪೂಜೆಯನ್ನು ನೆರವೇರಿಸಿದ ಮಾತೆಯರ ಪರವಾಗಿ ಪೂಜಾ ನೇತೃತ್ವವನ್ನು ಉಪ್ಪಿನಂಗಡಿ ರಾಮನಗರ ನಿವಾಸಿ ಕಿಶೋರ್ ಮತ್ತು ಸೌಮ್ಯ ದಂಪತಿಗಳು ನೆರವೇರಿಸಿದರು. ಮಾತೃಮಂಡಳಿ ಅಧ್ಯಕ್ಷೆ ಶ್ರೀಮತಿ ಸುಭದ್ರಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸ್ವಾಗತಿಸಿದರು. ಕಾರ್ಯದರ್ಶಿ ಪುಷ್ಪಲತಾ ಜನಾರ್ಧನ್‌ ಧನ್ಯವಾದ ಸಲ್ಲಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದದಕ್ಷಿಣ ಮಧ್ಯಕೇತ್ರ ಸಂಪರ್ಕ ಪ್ರಮುಖ್‌ ಡಾ| ಕಲ್ಲಡ್ಕ ಪ್ರಭಾಕರ ಭಟ್  ಸಹಿತ ಸಮಾಜದ ಹಲವಾರುಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಂಗಾಮಾತೆಗೆ ಭಾಗಿನ ಸಮರ್ಪನೆಗೈದ ಬಳಿಕ ಗಂಗಾರತಿ ಬೆಳಗಿ, ಎಲ್ಲಾ ಪೂಜಾಕರ್ತರಿಂದ ಗಂಗಾರತಿ ನಡೆಸಲಾಯಿತು.

ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ

ಉಪ್ಪಿನಂಗಡಿ : ದಿನಾಂಕ ೯/೮/೨೦೧೨ ರಂದು ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವು ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿ ಪಂ ಸದಸ್ಯ ಕೇಶವ ಗೌಡ ಬಜತ್ತೂರು, ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಶ್ರೀ ಕೃಷ್ಣನ ಜೀವನಾದರ್ಶವನ್ನು ವಿವರಿಸಿದರು.

ಶ್ರೀ ಕೃಷ್ಣವೇಷಧಾರಿ ಮಕ್ಕಳ ಮಡಿಕೆ ಒಡೆಯುವ ಸ್ಪರ್ಧೆ, ಮಕ್ಕಳಿಗೆ ಹಾಗೂ ಮಾತೆಯರಿಗೆ ಮತ್ತು ಪುರುಷರಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ಗಳು ಉತ್ಸಾಹಭರಿತವಾಗಿ ನಡೆಯಿತು. ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ನಡೆಸಲಾದ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಿಗೆ, ಮಾತೆಯರಿಗೆ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.

ಕೇಶವ ಕೃಪಾ ಕಟ್ಟಡ ಉದ್ಘಾಟನೆ

ಉಪ್ಪಿನಂಗಡಿ : ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಶಿಶು ಮಂದಿರದ ಬಳಿ ನಿರ್ಮಿಸಲಾದ  ಕೇಶವ ಕೃಪಾ ಕಟ್ಟಡವನ್ನು ಆರ್ ಎಸ್ ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ| ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸುತ್ತಿರುವುದು.


ಚಿತ್ರದಲ್ಲಿ ಶಿಶು ಮಂದಿರ ಸಮಿತಿಯ ಗೌರವಾಧ್ಯಕ್ಷ ಯು ರಾಮ , ಅಧ್ಯಕ್ಷ ಮನೋಜ್ ಶೆಟ್ಟಿ, ಮಾತಾಜಿ  ರಮ್ಯಾ ಶಿರಸಿ ರವರನ್ನು ಕಾಣಬಹುದು.

ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ, ಈಶ್ವರ ಮಂಗಲ ಪಂಚಮುಖಿ ಹನುಮಗಿರಿಗೆ ಪ್ರವಾಸ

ಉಪ್ಪಿನಂಗಡಿ: ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇಲ್ಲಿನ ಪುಟಾಣಿ ಮಕ್ಕಳ ಕಿರು ಪ್ರವಾಸವು ದಿನಾಂಕ ೫/೯/೧೨ ರಂದು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ, ಈಶ್ವರ ಮಂಗಲ ಪಂಚಮುಖಿ ಹನುಮ ಗಿರಿಗೆ ನಡೆಯಿತು.

ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿನ ಸರಸ್ವತಿ ವಂದನಾ, ಕಲ್ಲಡ್ಕ ಶಿಶು ಮಂದಿರಗಳ ಪುಟಾಣಿಗಳಿಂದ ದೊರೆತ ಸ್ವಾಗತ ರೂಪಿತಗೊಂಡ ಪ್ರಹಸನ, ಮನಮೋಹಕಗೊಂಡಿತ್ತು. ಉಪಹಾರವನ್ನು ಸೇವಿಸಿ, ಈಶ್ವರ ಮಂಗಲದ ಹನುಮ ಬೆಟ್ಟಕ್ಕೆ ಹೋಗಿ ದೇವರ ದರುಶನ ಮಾಡಿ, ಪೂರ್ವ ನಿಗದಿಯಂತೆ ಈಶ್ವರ ಮಂಗಲದ ಪಂಚಲಿಂಗೇಶ್ವರ ದೇವಾಲಯಕ್ಕೆ ಹೋದೆವು.

ಪವಾಡವೆನಿಸಿತು ಅನ್ನದಾನದ ಮಹಿಮೆ:

ಪೂರ್ವ ನಿಗದಿಯಂತೆ ನಮ್ಮ ಪ್ರವಾಸ ತಂಡದ ಮಧ್ಯಾಹ್ನದ ಭೋಜನ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆಯುವುದೆಂದು ನಿಶ್ಚಯವಾಗಿತ್ತು. ಈ ಬಗ್ಗೆ ಪ್ರಮುಖರ ನಡುವೆ ಮೂರು ಬಾರಿಯ ದೂರವಾಣಿ ಸಂಪರ್ಕವೂ ನಡೆದಿತ್ತು.

ಆದರೆ ದೇವಾಲಯದಲ್ಲಿ ಅಡುಗೆ ವಿಭಾಗಕ್ಕೆ ನಮ್ಮ ಆಗಮನದ ಬಗ್ಗೆ ತಿಳಿಸಲು ಆ ಮಹನೀಯರು ಮರೆತಿದ್ದರು. ಇದರಿಂದಾಗಿ ಹಸಿದು ಕಂಗೆಟ್ಟಿದ್ದ ಮಕ್ಕಳೊಂದಿಗೆ ಹೋಗಿದ್ದ ನಮ್ಮ ತಂಡ ಹಿಂತಿರುಗುವ ನಿರ್ಧಾರವನ್ನು ತಳೆಯುವುದರಲ್ಲಿತ್ತು.

ತನ್ನ ಮರೆಯುವಿಕೆಯ ಬಗ್ಗೆ ಮನನೊಂದು ಧಾವಿಸಿ ಬಂದ ಆ ಮಹನೀಯರು ತ್ವರಿತವಾಗಿ ಅನ್ನ ಬೇಯಿಸಲು ಸೂಚನೆ ನೀಡಿದರು. ಆ ವೇಳೆಗೆ ಪಾಕ ಶಾಲೆಯಲ್ಲಿ ಉಳಿದಿದ್ದ ಒಂದು ಬಕೆಟ್ ಅನ್ನವನ್ನು ಹಸಿದ ಮಕ್ಕಳಿಗೆ ನೀಡಿ ಎಂಬ ನಮ್ಮ ಸಲಹೆಗೆ ಸ್ಪಂದಿಸಿದ ದೇವಾಲಯದ ಸಿಬ್ಬಂದಿಗಳು ಮಕ್ಕಳಿಗೆ ಅನ್ನ ನೀಡಿದರು. ಬಳಿಕ ಮಕ್ಕಳ ಮಾತೆಯಂದಿರಿಗೆ ಅನ್ನ ನೀಡಿದರು. ಬಳಿಕ ಶಿಶು ಮಂದಿರದ ಆಡಳಿತ ಮಂಡಳಿಯ ಸದಸ್ಯರಿಗೂ ಅನ್ನ ನೀಡಿದರು. ಬೇಯುತ್ತಿರುವ ಅನ್ನ ಒಲೆಯಲ್ಲಿ ಬೇಯುತ್ತಿದ್ದಂತೆಯೇ ಉಳಿದಿದ್ದ ಬಕೆಟ್ ಅನ್ನ ಅಕ್ಷಯ ಪಾತ್ರೆಯಾಗಿ ರೂಪಿತಗೊಂಡು ಹಸಿದಿದ್ದ ಪ್ರವಾಸಿಗರಿಗೆ ಲಭಿಸಿ ಮತ್ತೂ ಅದರಲ್ಲಿ ಮಿಕ್ಕಿ ಉಳಿದಿದ್ದು ವಿಸ್ಮಯ ತಂದಿದೆ.

ಸಿದ್ದತೆ ಮಾಡಿಡಲು ಮರೆತರೂ , ಆತಿಥ್ಯ ನೀಡಬೇಕೆಂದು ಪ್ರಾಮಾಣಿಕ ಕಾಳಜಿ ಮೆರೆದ ಅಲ್ಲಿನ ಗಣ್ಯರ ಸದ್ಗುಣಕ್ಕೆ ದೇವನೊಲಿದು ಎಲ್ಲರೂ ಸಂತೃಪ್ತಿಯಿಂದ ಉಣ್ಣುವಂತೆ ಪರಿಸ್ಥಿತಿಯನ್ನು ಬದಲಾಯಿಸಿದ್ದು ಈ ಮಣ್ಣಲ್ಲಿ ಲೀನವಾಗಿರುವ ದೈವಿಕ ಶಕ್ತಿಯಂತೆ ಕಂಡು ಬಂತು.

ಪ್ರವಾಸದಲ್ಲಿ ಇಪ್ಪತ್ತು ಮಕ್ಕಳು, ಮತ್ತವರ ಪೋಷಕರು, ಶಿಶು ಮಂದಿರ ಸಮಿತಿಯ ಅಧ್ಯಕ್ಷ ಮನೋಜ್ ಶೆಟ್ಟಿ, ಕಾರ್ಯದರ್ಶಿ ಯು.ಎಲ್ ಉದಯ್ ಕುಮಾರ್, ಜೊತೆ ಕಾರ್ಯದರ್ಶಿ ಹರಿರಾಮಚಂದ್ರ, ಯು ಕೆ ರೋಹಿತಾಕ್ಷ, ಭಾಸ್ಕರ್ ಆಚಾರ್ಯ, ಜಿಲ್ಲಾ ಮಾತಾಜಿ ಭಗಿನಿ ಅಭಿಲಾಶಾ, ಶಿಶು ಮಂದಿರ ಮಾತಾಜಿ ಭಗಿನಿ ಮಾಲಾಶ್ರೀ, ಮೊದಲಾದವರು ಭಾಗಿಯಾಗಿದ್ದರು.

ಮಾಂಗಲ್ಯ ನಿಧಿ ಧನ ಸಹಾಯ

ಉಪ್ಪಿನಂಗಡಿ : ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇದರ ವತಿಯಿಂದ ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆಂದು ನೀಡಲಾಗುವ ಮಾಂಗಲ್ಯ ನಿಧಿ ಧನ ಸಹಾಯವನ್ನು ಉಪ್ಪಿನಂಗಡಿಯ ದಿವಂಗತ ನಾರಾಯಣ ಟೈಲರ್ ರವರ ಮಗಳ ಮದುವೆಗೆಂದು ಮದುಮಗಳ ತಾಯಿ ಶ್ರೀಮತಿ ಕೃಷ್ಣಮ್ಮ ರವರಿಗೆ ವಿತರಿಸುತ್ತಿರುವುದು

ಚಿತ್ರದಲ್ಲಿ ಉದ್ಯಮಿ ಹಾಗೂ ನಿವೃತ್ತ ಸೇನಾನಿ ಕೆ ಸುರೇಶ್ ಮತ್ತು ಶಿಶು ಮಂದಿರ ಸಮಿತಿಯ ಗೌರವಾಧ್ಯಕ್ಷ ಯು ರಾಮ, ಅಧ್ಯಕ್ಷ ಮನೋಜ್ ಶೆಟ್ಟಿ ರವರನ್ನು ಕಾಣಬಹುದು.

Highslide for Wordpress Plugin