• 08251 236599
  • 08251 236444
  • vvsputtur@gmail.com

ರಕ್ಷಬಂಧನ ಉತ್ಸವ

ಉಪ್ಪಿನಂಗಡಿ : ಲೋಕಾ ಸಮಸ್ತ ಸುಖಿನೋ ಭವಂತು ಎಂದು ಪ್ರಾರ್ಥಿಸುವ ಹಿಂದೂಧರ್ಮ ಸಂಸ್ಕೃತಿಯಲ್ಲಿ ಸಹೋದರತೆಯ ಬಾಂಧವ್ಯವನ್ನು ಬೆಸೆದು ಸಾಮರಸ್ಯದ ಬಾಳಿಗೆ ಪೂರಕವಾಗಿ ರಕ್ಷಬಂಧನ ಉತ್ಸವವು ಅನಾದಿಕಾಲದಿಂದ ನಡೆಯುತ್ತಿದ್ದು, ಯುವ ಪೀಳಿಗೆಗೆ ಅದರ ಮೌಲ್ಯವನ್ನು ತಿಳಿಸುವ ಅಗತ್ಯತೆ ಹೆಚ್ಚಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ಪ್ರಮುಖ್‌ ರವೀಂದ್ರ ಇಳಂತಿಲ ಕರೆ ನೀಡಿದರು.


ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿರುವ ಶ್ರೀ ಮಾಧವ ಶಿಶು ಮಂದಿರದಲ್ಲಿ ದಿನಾಂಕ 20/8/13ರಂದು ನಡೆದ ರಕ್ಷಾಬಂಧನ ಉತ್ಸವದಲ್ಲಿ ಬೌದ್ಧಿಕ್ ನೀಡುತ್ತಿದ್ದರು.
ಸಮಾಜದಲ್ಲಿನ ಬೇಧ ಭಾವತೊರೆದು ಎಲ್ಲರೊಳು ಸಮಾನತೆಯನ್ನು ಸಾರುವ ಸಲುವಾಗಿ ಸಂಘ ರಕ್ಷಾಬಂಧನವನ್ನು ಸಾರ್ವತ್ರಿಕ ಉತ್ಸವವಾಗಿ ಆಚರಿಸಲು ಮುಂದಾಗಿದೆ ಎಂದವರು ತಿಳಿಸಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಉದ್ಯಮಿಯುರಾಮ ಮಾತನಾಡಿ, ಹಲವು ದಾರಗಳಿಂದ ರಚಿಸಲ್ಪಟ್ಟ ರಾಖಿಯು ಹೇಗೆ ಗಟ್ಟಿ ಹಾಗೂ ಸುಂದರವಾಗಿ ಕಂಗೊಳಿಸುತ್ತಿದೆಯೋ ಅಂತೆಯೇ ಹಲವು ಜಾತಿ ಮತ ಪಂಥ ಪಂಗಡಗಳ ನಾವು ಈ ಮಣ್ಣಿನ ಸಂಸ್ಕೃತಿಗೆ ಅನುಗುಣವಾಗಿ ಒಗ್ಗೂಡಿ ಸುಂದರ ರಾಷ್ಟ್ರ ನಿರ್ಮಾಣಕಾರ್ಯಕ್ಕೆ ಮುಂದಾಗಬೇಕೆಂದರು. ಶಿಶುಮಂದಿರ ಅಧ್ಯಕ್ಷ ಮನೋಜ್ ಶೆಟ್ಟಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಹರಿರಾಮಚಂದ್ರ ವಂದಿಸಿದರು. ಮಾತಾಜಿ ಪುಷ್ಪಲತಾ ಎಸ್ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin