• 08251 236599
  • 08251 236444
  • vvsputtur@gmail.com

Sri Laksmi Venkatramana Higher Primary School, Sarya

ಶ್ರೀ ಲಕ್ಷ್ಮೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ, ಸಾರ್ಯ

Phone No :

About

ಶ್ರೀ ಲಕ್ಷ್ಮೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ, ಸಾರ್ಯ
(ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು)
ಬೆಳಿಯೂರುಕಟ್ಟೆ ಅಂಚೆ, ಬಲ್ನಾಡು, ಪುತ್ತೂರು, ದ.ಕ., 574243

ಶಾಲೆ ಪ್ರಾರಂಭ : 01.06.1995 (ಕನ್ನಡ ಮಾಧ್ಯಮ)

ನಡೆದು ಬಂದ ದಾರಿ : 1995-96 ರಲ್ಲಿ 1ನೇ ತರಗತಿಯನ್ನು ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಿಸಿ ಇದೀಗ ಸ್ವಂತ ಕಟ್ಟಡದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಅಂಗ ಸಂಸ್ಥೆಯಾಗಿ 1 ರಿಂದ 7ನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿವೆ.

ಪಾಠ ಪ್ರವಚನದೊಂದಿಗೆ ಪಠ್ಯೇತರ ಚಟುವಟಿಕೆಗಳಿಗಳು ಹಾಗೂ ಚಿಂತನ ವಿಜ್ಞಾನ, ಗಣಿತ, ಚಿತ್ರಕಲೆ, ಕನ್ನಡ ಸಾಹಿತ್ಯ ಪರಿಷತ್‌ನ ವತಿಯಿಂದ ನಡೆಯುವ ಪರೀಕ್ಷೆಗಳನ್ನು ನಡೆಸಲಾಗುವುದು. ಇದರಲ್ಲಿ 2010-11 ನೇ ಸಾಲಿನಲ್ಲಿ ಅನೇಕ ವಿದ್ಯಾರ್ಥಿಗಳು ಜಿಲ್ಲಾ ಮತ್ತು ರಾಜ್ಯಮಟ್ಟ, ತಾಲೂಕು ಮಟ್ಟಗಳಲ್ಲಿ ಪದಕಗಳನ್ನು ಪಡೆದಿರುತ್ತಾರೆ.

ಹಾಗೆಯೇ 2007-08 ರಲ್ಲಿ ಕನ್ನಡ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ 30,000/- ರೂ.ಗಳನ್ನು ‘ಯಶೋಧ’ ಎಂಬ ವಿದ್ಯಾರ್ಥಿನಿಯು ಪಡೆದಿರುತ್ತಾಳೆ.

ಈ ಶಾಲೆಯು ಹಳ್ಳಿಯ ಪರಿಸರದಲ್ಲಿರುತ್ತದೆ. ಹಳ್ಳಿಯ ಪರಿಸರದಲ್ಲಿದ್ದರೂ ಮಕ್ಕಳ ಪ್ರತಿಭಾ ಪುರಸ್ಕಾರದಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಅಲ್ಲದೆ ರಾಷ್ಟ್ರೀಯ ಹಬ್ಬಗಳು, ಶಾರದಾ ಪೂಜೆ ಹಾಗೂ ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆ ಮುಂತಾದ ಕಾರ್ಯಕ್ರಮಗಳು, ಅಲ್ಲದೆ ಶಾಲಾ ಮಕ್ಕಳ ಹುಟ್ಟುಹಬ್ಬವನ್ನು ಪ್ರತಿ ತಿಂಗಳ ಕೊನೆಯಲ್ಲಿ ಆಚರಿಸುತ್ತೇವೆ. ಪ್ರತಿಭಾ ಪುರಸ್ಕಾರದಂದು ಕಲಿಕೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆಗಳಿಸಿದ ನಮ್ಮ ಶಾಲಾ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸುತ್ತೇವೆ. ಈ ಶಾಲೆಯಿಂದಾಗಿ ಈ ಹಳ್ಳಿಯ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುತ್ತದೆ. ಈ ಶಾಲೆಯಲ್ಲಿ ಬೋಧಿಸುತ್ತಿರುವ ಶಿಕ್ಷಕರ ವಿವರ ಈ ಕೆಳಗಿನಂತಿದೆ.

1.  ಜಗದೀಶ್ ಜೆ.ಕೆ. (ಮುಖ್ಯ ಗುರುಗಳು) SSLC, TCH
2.  ಫಾತಿಮತ್ ಝಹುರಾ (ಸಹಶಿಕ್ಷಕಿ) B.A. ಹಿಂದಿ ಪ್ರವೀಣ
3.  ದಾಕ್ಷಾಯಿಣಿ ಪಿ. (ಸಹಶಿಕ್ಷಕಿ) PUC DEd.
4.  ಅನುರಾಧಾ ಹೆಚ್ (ಸಹಶಿಕ್ಷಕಿ) MA, BEd.
5.  ಅನುರಾಧಾ ಜಿ. (ಸಹಶಿಕ್ಷಕಿ) PUC DEd

ಶಾಲಾ ಆಡಳಿತ ಸಮಿತಿಯ ಪದಾಧಿಕಾರಿಗಳ ವಿವರ :

1.   ಬಾಲಕೃಷ್ಣ ರೈ, ಮುಗೆರೋಡಿ        –  ಗೌರವ ಅಧ್ಯಕ್ಷರು
2.  ರಾಮ್  ಭಟ್, ಹಸಂತಡ್ಕ            –  ಅಧ್ಯಕ್ಷರು
3. ಕರುಣಾಕರ ರೈ ಸಾರ್ಯಬೀಡು      –  ಉಪಾಧ್ಯಕ್ಷರು
4. ಜಯರಾಮ ರೈ ಸಾರ್ಯಮಠ       –   ಕಾರ್ಯದರ್ಶಿ
5. ವಿಶ್ವಂಭರ ಶೆಟ್ಟಿ, ಸಲ್ಪಾಜೆ             –   ಜೊತೆ ಕಾರ್ಯದರ್ಶಿ
6. ಯದುರಾಜ ರೈ, ಸಾರ್ಯಬೀಡು    –   ಕೋಶಾಧಿಕಾರಿಗಳು
7. ಬಾಲಚಂದ್ರ ಭಟ್, ಹಸಂತಡ್ಕ       –   ಸಲಹಾ ಸಮಿತಿಯ ಸದಸ್ಯರು
8.  ದಿನೇಶ್ ರೈ, ಮುಗೆರೋಡಿ           –   ಸಲಹಾ ಸಮಿತಿಯ ಸದಸ್ಯರು

ಹಾಗೆಯೇ ದಿನಾಂಕ 30-07-2012 ನೇ ಸೋಮವಾರದಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಶ್ರೀಯುತ ಕೊರಗಪ್ಪ ನಾಯ್ಕ ಅಜಕ್ಕಳ ಹಾಗೂ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

Photos

News & Events

Highslide for Wordpress Plugin