Sri Devi Higher Primary School, Punacha
ಶ್ರೀ ದೇವಿ ಹಿರಿಯ ಪ್ರಾಥಮಿಕ ಶಾಲೆ, ಪುಣಚ

Sridevi-higher

 


 

  • ತಾಲೂಕು ಮಟ್ಟದ ಕಬ್ಬಡ್ಡಿ ಪಂದ್ಯಾಟ

    ಪುಣಚ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪುಣಚ ಶ್ರೀದೇವಿ ಪ್ರೌಢ ಶಾಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರೌಢ ಶಾಲಾ ವಿಭಾಗದ ಬಾಲಕ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾಟ ಸೆಪ್ಟೆಂಬರ್ 7 ರಂದು ನಡೆಯಿತು.

    DSC_4314-2

    ಪಂದ್ಯಾಟವನ್ನು ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ವಿದ್ಯಾಶಂಕರ್ ಉದ್ಘಾಟಿಸಿದರು. ಪುಣಚ ಗ್ರಾ. ಪಂ. ಉಪಾಧ್ಯಕ್ಷ ಮಹೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ. ಪಂ. ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ತಾಲೂಕು ದೈ. ಶಿ. ಪರಿವೀಕ್ಷಣಾಧಿಕಾರಿ ಗುರುನಾಥ ಬಾಗೇವಾಡಿ, ದೈ.ಶಿ. ಶಿಕ್ಷಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಅಡ್ಯಂತಾಯ, ಕಾರ್ಯದರ್ಶಿ ರಾಜೇಂದ್ರ ರೈ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಉಮಾನಾಥ ರೈ, ಅಜ್ಜಿನಡ್ಕ ಕ್ಲಸ್ಟರ್ ಮುಖ್ಯಸ್ಥ ಶ್ರೀಪತಿ ನಾಯಕ್, ವಿದ್ಯಾಕೇಂದ್ರದ ಸದಸ್ಯರಾದ ನಾರಾಯಣ ಭಟ್ ಕುಪ್ಳುಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಪ್ರೌಢ ಶಾಲಾ ಮುಖ್ಯ ಶಿಕ್ಷಕ ಶ್ರೀರಾಮಚಂದ್ರ ಭಟ್ ಸ್ವಾಗತಿಸಿ, ನಾರಾಯಣ ಭಟ್ ವಂದಿಸಿದರು. ಶಿಕ್ಷಕ ಭವಾನಿ ಶಂಕರ ಕೆ. ಕಾರ್ಯಕ್ರಮ ನಿರ್ವಹಿಸಿದರು.

Highslide for Wordpress Plugin