Saraswathi Vidyalaya, Vidyanagar, Kadaba
ಸರಸ್ವತೀ ವಿದ್ಯಾಲಯ, ವಿದ್ಯಾನಗರ, ಕಡಬ

ಸನ್ಮಾನ್ಯ ವಿದ್ಯಾಭಿಮಾನಿಗಳೇ,

ಸನಾತನವಾದ, ಅತ್ಯುನ್ನತ ತತ್ವ – ಮೌಲ್ಯಗಳನ್ನು ಹೊಂದಿರುವ ಭಾರತೀಯ ಸಂಸ್ಕೃತಿ ನಮ್ಮದು. ಅನಾದಿಯಾದ, ಆಳವಾದ ಮೂಲದಿಂದ ಪೋಷಣೆ ಪಡೆದು ಇಂದು ಹಲವಾರು ಕವಲುಗಳಿರುವ ಮಹಾವೃಕ್ಷವಾಗಿ ಬೆಳೆದಿರುವ ನಮ್ಮ ಈ ಸಂಸ್ಕೃತಿಯೇ ನಮಗೆ ಒಳ್ಳೆಯ ಸಂಸ್ಕಾರಯುಕ್ತವಾಗಿ ಬಾಳಲು ಬುನಾದಿ.

ಇಂದು ಆಧುನಿಕ ಶಿಕ್ಷಣ, ಯಾಂತ್ರಿಕ ಜೀವನದ ವೇಗದ ಬದುಕಿನ ಪಥದಲ್ಲಿ ನಮ್ಮ ಪರಂಪರೆಯ ಆದರ್ಶ, ಉದಾತ್ತ ಮೌಲ್ಯಗಳು ನಶಿಸಿ ಹೋಗುತ್ತಿವೆ. ದೇಶ ಸಂಸ್ಕೃತಿಗಳ ಮೌಲ್ಯಗಳು ನಶಿಸಿ ಹೋಗುತ್ತಿವೆ. ದೇಶ ಸಂಸ್ಕೃತಿಗಳ ಬಗ್ಗೆ ಗೌರವಗಳು ಮಾಯವಾಗುತ್ತಿವೆ. ನಮ್ಮ ಸನಾತನವಾದ ಧರ್ಮ ಸಂಸ್ಕೃತಿಗಳ ಕುರಿತು ಪ್ರಾಥಮಿಕ ಜ್ಞಾನವನ್ನು ತಿಳಿಸಿಕೊಡಬಲ್ಲ ವಿದ್ಯಾಲಯಗಳ ಕೊರತೆ ನಮ್ಮಲ್ಲಿದೆ. ಈ ಕೊರತೆಯನ್ನು ನೀಗಿಸಿ ನಮ್ಮ ಮಕ್ಕಳಿಗೆ ಭಾರತೀಯ ಪರಂಪರೆಯ ತಳಹದಿಯ ಶಿಕ್ಷಣವನ್ನು ನೀಡುವ ಉದ್ದೇಶದಿಂದ, ನಮ್ಮ ಸನಾತನ ಆಚಾರ ವಿಚಾರಗಳನ್ನು ಪರಿಚಯಿಸುವ ದೃಷ್ಟಿಯಿಂದ ಗ್ರಾಮೀಣ ಪ್ರದೇಶವಾದ ಕಡಬದಲ್ಲಿ ಸರಸ್ವತೀ ವಿದ್ಯಾಲಯ ಸಂಸ್ಥಾಪಿಸಿ, ಆದರ್ಶ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯಿಡುತ್ತಿದ್ದೇವೆ. ನಮ್ಮ ಈ ಸಂಸ್ಥೆಯು ವಿವೇಕಾನಂದ ವಿದ್ಯಾವರ್ಧಕ ಸಂಘ. (ರಿ) ಪುತ್ತೂರು ದ.ಕ. ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಈ ವಿದ್ಯಾಲಯವು ಗುರುಕುಲ ಮಾದರಿಯ ಭಾರತೀಯ ಸಂಸ್ಕೃತಿಯ ವಾತಾವರಣದಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಪ್ರಥಮ ಹೆಜ್ಜೆಯಾಗಿ ಸಣ್ಣ ಮಕ್ಕಳಿಂದಲೇ ಈ ಶಿಕ್ಷಣ ವ್ಯವಸ್ಥೆಯನ್ನು ಆರಂಭಿಸುವ ದೃಷ್ಟಿಯಿಂದ ೨೦೦೪ ರಲ್ಲಿ ಶ್ರೀ ಭಾರತೀ ಶಿಶು ಮಂದಿರವನ್ನು ಪ್ರಾರಂಭಿಸಿ ಹಂತಹಂತವಾಗಿ ಮುಂದುವರಿದು ಇದೀಗ ನಮ್ಮ ವಿದ್ಯಾಲಯವು ಪ್ರಾಥಮಿಕ ಹಂತವನ್ನು ದಾಟಿ ಪ್ರೌಢ ಶಿಕ್ಷಣಕ್ಕೆ ಕಾಲಿಟಿದೆ. ಒಟ್ಟು ೫೦೨ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಉದಾರ ಸಹೃದಯಿಗಳೇ,

ಈ ಕೇಂದ್ರವನ್ನು ಆದರ್ಶ ವಿದ್ಯಾಕೇಂದ್ರವನ್ನಾಗಿ ಮಾಡಬೇಕೆಂಬ ಸಂಕಲ್ಪ ನಮ್ಮದು. ಪ್ರಕೃತ ಸುಸಜ್ಜಿತ ಶಾಲಾ ಕಟ್ಟಡದ ನಿರ್ಮಾಣದ ಜೊತೆಗೆ ಪೂರಕವಾಗಿ ಭೂಮಿ ಖರೀದಿ, ನೀರು, ಬೆಳಕು, ಪೀಠೋಪಕರಣಗಳು, ಪುಸ್ತಕಾಲಯ, ಪಾಠೋಪಕರಣ, ಶೌಚಾಲಯ ಇತ್ಯಾದಿಗಳನ್ನು ರೂಢಿಸಿಕೊಳ್ಳುವರೇ ಹಾಗೂ ಉತ್ತಮ ಗುರುಕುಲ ಮಾದರಿಯ ಪರಿಸರವನ್ನು ನಿರ್ಮಿಸುವರೇ, ಸುಮಾರು ಐದು ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿರುತ್ತೇವೆ. ಇದರಲ್ಲಿ ಮೊದಲ ಹಂತವಾಗಿ ದಾನಿಗಳ ನೆರವಿನೊಂದಿಗೆ ಸುಮಾರು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶಾಲಾ ಕಟ್ಟಡದ ನೆಲ ಮತ್ತು ಎರಡು ಅಂತಸ್ತುಗಳ ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ. ಇನ್ನೂ ಪ್ರೌಢಶಾಲೆಗೆ ನೂತನ ಕಟ್ಟಡದ ನಿರ್ಮಾಣ ಕಾರ್ಯ ಆರಂಭಿಸಬೇಕಾಗಿದೆ. ಈ ಯೋಜನೆಯನ್ನು ಸಾಕಾರಗೊಳಿಸಲು ತಮ್ಮೆಲ್ಲರ ಪೂರ್ಣ ಸಹಕಾರಕ್ಕಾಗಿ ಈ ಮೂಲಕ ವಿಜ್ಞಾಪಿಸುತ್ತೇವೆ.

ಉನ್ನತ ಧ್ಯೇಯ ಆದರ್ಶಗಳನ್ನು ಕಣ್ಣ ಮುಂದಿಟ್ಟುಕೊಂಡು ಕಾರ್ಯಪ್ರವೃತ್ತವಾಗುತ್ತಿರುವ ಈ ಕೇಂದ್ರಕ್ಕೆ ತಮ್ಮಿಂದ ಕೊಡುಗೆಗಳನ್ನು, ಆರ್ಥಿಕ ಸಹಕಾರವನ್ನು ಅಪೇಕ್ಷಿಸಿ ನಿಮ್ಮ ಮುಂದಿದ್ದೇವೆ.

ಕೃಷ್ಣ ಶೆಟ್ಟಿ
ಅಧ್ಯಕ್ಷರು

ಎಂ ವೆಂಕಟರಮಣ ರಾವ್
ಕಾರ್ಯದರ್ಶಿ

ಆಡಳಿತ ಮಂಡಳಿಯ ಸರ್ವಸದಸ್ಯರು.
ಸರಸ್ವತೀ ವಿದ್ಯಾಲಯ
ವಿದ್ಯಾನಗರ, ಪಂಜ ರಸ್ತೆ, ಅಂಚೆ: ಕಡಬ. ಪುತ್ತೂರು ತಾಲೂಕು ದ.ಕ. ೫೭೪೨೨೧.
ಇ-ಮೇಲ್ ವಿಳಾಸ : saraswathividyalaya2004@gmail.com
[ ಮಾತೃ ಸಂಸ್ಥೆ: ವಿವೇಕಾನಂದ ವಿದ್ಯಾವರ್ಧಕ ಸಂಘ. (ರಿ) ಪುತ್ತೂರು ದ.ಕ. ]

ವಿ.ಸೂ. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ)  ಈ ಸಂಸ್ಥೆಗೆ ಸಹಾಯ ಧನ ನೀಡಿದಲ್ಲಿ ೮೦ಜಿಯ ಪ್ರಕಾರ ಆದಾಯ ತೆರಿಗೆ ವಿನಾಯತಿಗೆ ಅನ್ವಯವಾಗುತ್ತದೆ.
ಖಾತೆ ನಂ.: 8613101000160 ಕೆನರಾಬ್ಯಾಂಕ್ ,  IFSC Code: CNRB0008613

An Appeal

Dear lovers of  Education,

Indian culture is the one which is eternal and evershining. It is like a deep rooted tree grown into a mammoth  height  and spread into great width with several branches. This “Culture” is the brain of our lifestyle involving polished innate manners.

Today the modern education by its mechanical and brisk treading nature has caused our traditional values of life and ideas to perish. The veneration of  our Nation and its distinct way of  life is vanishing. Institutions that  inculcate primary knowledge of our ageold culture and Dharma are now missing.

Hence for the purpose of making  good the loss, we have taken a step in establishing Saraswathi Vidyalaya at Kadaba, a rural area to provide indigenous education to our  children, which will suit our cherished rational values  of life. This institution is affiliated to  Vevekananda  Vidyavardhaka Sangha (R) Puttur.

Our initial step had begun in 2004 with the establishment of  “Bharathi Shishu Mandira”  for the kids in this regard. Growing step by step, today our institution has reached upto class 8 looking forward to move further. Now we have 592 students  getting value  oriented education. Apart from studies our institution encourages the students to improve their skill and engage themselves in other activities like Yoga, Karate, Classical Dance and Music, Computer, Yakshagana, Folk Dance, Sports and Game etc.

Therefore, Dear Generous Fellow Citizens,

Character building, developing patriotic qualities, and forming one to live with dignity should be the aim of education and educational institutions. We strive hard to fulfill these aims asserting that our institution will run like a “Gurukula”.

With the help of donors, we have constructed the primary buildings at an approximate cost of Rs.1 Crores..

In our endeavour to shape this institution a standard institution we require well equipped school building with furniture, water supply, electricity, learning materials, toilet facilities etc., for which we need about Rs. 5 Crores. By the end of next academic year we hope to complete the construction of high school and hostel buildings. So we look forward for your kind assistance to complete this huge project and we are here at your door steps seeking generous donation and support.

Krishna Shetty
President

M Venkataramana Rao,
Secretary

Members of  the Committee
Saraswathi Vidyalaya, Vidyanagar, Panja Road,
Kadaba Post, Puttur D.K. – 574221
Web: http://vivekanandaedu.org/other_institutions/saraswathi-vidyalaya-vidyanagar-kadaba/
Email Id: saraswathividyalaya2004@gmail.com
[Affiliated to Vivekananda Vidyavardhaka Sangha (R) Puttur ]

Note: Your donations  are  exempted from Taxation under Section 80G
Acc No.:  8613101000160 Canara bank, IFSC Code: CNRB0008613

 

KPICASA_GALLERY(username:svhpskadaba)

Kredotsava 2012_1A

Kredotsava 2012_1B

Kredotsava 2012_1C

Kredotsava 2012_2A

Kredotsava 2012_2B

Kredotsava 2012_2C

Kredotsava 2012_3A

Kredotsava 2012_3B

Kredotsava 2012_4A

Kredotsava 2012_4B

Kredotsava 2012_4C

Kredotsava 2012_5A

Kredotsava 2012_5B

Kredotsava 2012_5C

Kredotsava 2012_6A

Kredotsava 2012_6B

ಸ್ವಾತಂತ್ರ್ಯ ದಿನಾಚರಣೆ

Independence-Day-1

Independence-Day

15-08-2015 ರ ಶನಿವಾರ ಸರಸ್ವತೀ ವಿದ್ಯಾಲಯ ಕಡಬ ಇಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮ  ಜರಗಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಧ್ವಜರೋಹಣ ಕಾರ್ಯಕ್ರಮವನ್ನು ಕಡಬದ ಉದ್ಯಮಿಯಾಗಿರುವ ಶ್ರೀ ಚಂದ್ರಶೇಖರ ಇವರು ನೇರವೇರಿಸಿದರು. ಜೊತೆಗೆ ಕಡಬದ ಇನ್ನೋರ್ವ ಉದ್ಯಮಿ ಶೇಖರ್ ಬಿರ್ವಾ ಇವರು ಕೂಡ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀಯುತ ವೆಂಕಟ್ರಮಣ ರಾವ್ ಇವರು, ಪ್ರಾಥಮಿಕ, ಪ್ರೌಢ, ಹಾಗೂ ಪದವಿಪೂರ್ವ ವಿಭಾಗದ ಮುಖ್ಯಸ್ಥರು, ಹಾಗೂ ಶ್ರೀಮಾನ್ ಮಾತಾಜಿಗಳು, ಹಾಗೂ ಮಕ್ಕಳು ಭಾಗವಹಿಸಿದ್ದರು.

ನಿತ್ಯ ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪ್ರಾಥಮಿಕ ವಿಭಾಗದ ಮುಖ್ಯ ಶ್ರೀಮಾನ್ ಮಾದವ.ಕೆ ಇವರು ಸ್ವಾಗತಿಸಿದರು. ನಂತರ ನಡೆದ ಧಜಾರೋಹಣ ಕಾರ್ಯಕ್ರಮವನ್ನು ಶ್ರೀ ಚಂದ್ರಶೇಖರ ಇವರು ನೇರವೇರಿಸಿ ಮಕ್ಕಳ ಬಗ್ಗೆ ಹಿತವಚನಗಳನ್ನಾಡಿದರು. ನಂತರ ಸಂಸ್ಥೆಯ ಸಂಚಾಲಕರು ಅಧ್ಯಕ್ಷೀಯ ನುಡಿಗಳನ್ನಾಡಿ ಸ್ವಾತಂತ್ರ್ಯ ದಿನದ ಮಹತ್ವ ವಿವರಿಸಿದರು. ಪ್ರೌಢ ವಿಭಾಗದ ಮುಖ್ಯ ಮಾತಾಜಿ ಶೈಲಶ್ರೀ ಇವರು ವಂದನಾರ್ಪಣೆ ಗೈದರು.

 


 

 • ತಾಲೂಕು ಮಟ್ಟದ ಕರಾಟೆ ಸ್ಪರ್ಧೆ

  ಪುತ್ತೂರು: ದಿನಾಂಕ 13.08.2013ರಂದು ಸರಸ್ವತಿ ವಿದ್ಯಾಲಯ ಕಡಬದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ನಮ್ಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ರತನ್ (14 ವರ್ಷದ ಒಳಗಿನ ಬಾಲಕರು) ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ ಮತ್ತು 9ನೇ ತರಗತಿಯ ಆಶಿಷ್ ಕುಮಾರ್.ಎಸ್.ಕೆ (17 ವರ್ಷದ ಒಳಗಿನ ಬಾಲಕರು) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾನೆ.

 • ವಿವೇಕ ವಿಚಾರ ಅಭಿಯಾನದ ಉದ್ಘಾಟನೆ

  ಭಾರತದ ಭವ್ಯತೆಯನ್ನು ಜಾಗತಿಕ ಮಟ್ಟದಲ್ಲಿ ಸಾರಿದ ಸ್ವಾಮಿ ವಿವೇಕಾನಂದರ 150ನೇ ಜಯಂತಿಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 12.01.2012 ನೇ ಶನಿವಾರದಂದು ನಮ್ಮ ಸಂಸ್ಥೆಯ ವತಿಯಿಂದ ,ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಕಡಬ ಇಲ್ಲಿ ಶ್ರೀಯುತ ವಾಸುದೇವ ಭಟ್ ಕಡ್ಯ ಇವರು ನೆರವೇರಿಸಿ ಕೊಟ್ಟರು.

  ಅಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ನಮ್ಮ ವಿದ್ಯಾಲಯದ ಶಿಶುಮಂದಿರದ ,ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು 100 ಮಂದಿ ವಿದ್ಯಾರ್ಥಿಗಳು ‘ವಿವೇಕಾನಂದರ ವೇಷವನ್ನು‘ ಧರಿಸಿ ಕಡಬದ ಮುಖ್ಯ ಬೀದಿಯಲ್ಲಿ ಭವ್ಯ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಈ ಮೆರವಣಿಗೆಯಲ್ಲಿ ಸಂಸ್ಥೆಯ ಅಧ್ಯಕ್ಷರು ,ಸಂಚಾಲಕರು ,ಅಧ್ಯಾಪಕ ವೃಂದ ,ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದರು.ವೀರಸಂತನ ಅಂತರಂಗದ ಅಮರವಾಣಿಯು ಮೊಳಗಲಿ” ಎನ್ನುವ ದೇಶಭಕ್ತಿಗೀತೆಯೊಂದಿಗೆ ಹೊರಟಂತಹ ಈ ಭವ್ಯವಾದ ಶೋಭಾಯಾತ್ರೆಯು ಕಡಬದ ಎಲ್ಲಾ ವಿದ್ಯಾಭಿಮಾನಿಗಳ ಮನಸ್ಸನ್ನು ಆಕರ್ಷಿಸಿತು.

  ನಂತರ ವಿದ್ಯಾಲಯದ ‘ಸರಸ್ವತಿ‘ ಸಭಾ ಮಂದಿರದಲ್ಲಿ ನಡೆದಸಭಾಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀಯುತ ವೆಂಕಟರಮಣ ರಾವ್ ಅಧ್ಯಕ್ಷತೆಯನ್ನು ವಹಿಸಿಕೊಂಡರು .ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶ್ರೀಯುತ ವಾಸುದೇವಭಟ್ ಕಡ್ಯ ಇವರು ವಿವೇಕಾನಂದರ ಬಗ್ಗೆ ಉಪನ್ಯಾಸ ಮಾಡಿದರು.ವೇದಿಕೆಯಲ್ಲಿ ಪ್ರಾಥಮಿಕ ಶಾಲೆಯ ಮುಖ್ಯಮಾತಾಜೀ,ಶ್ರೀಮತಿ ಯಶೋಧ ಪ್ರೌಢಶಾಲೆಯ ಮುಖ್ಯಮಾತಾಜೀ ಶ್ರೀಮತಿ ಶೈಲಶ್ರೀ.ರೈ ಅವರು ಉಪಸ್ಥಿತರಿದ್ದರು.

  ಮುಂದಿನ ಒಂದು ವರ್ಷ ಪೂರ್ತಿ 150ನೇ ವರ್ಷಾಚರಣೆಯ ಪ್ರಯುಕ್ತ ನಮ್ಮ ವಿದ್ಯಾ ಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರೌಢಶಲೆಯ ಮಖ್ಯಮಾತಾಜೀ ಸ್ವಾಗತಿಸಿ ಪ್ರಾಥಮಿಕ ಶಾಲಾ ಮುಖ್ಯಮಾತಾಜೀ ವಂದಿಸಿದರು .ಶಿಕ್ಷಕ ವಸಂತ್ ಕರ್oಬೋಡಿ ಕಾರ್ಯಕ್ರಮ ನಿರೂಪಿಸಿದರು.

 • Kreedothsava 2012-2013

  ಪಕೃತಿಯ ಮಡಿಲಿನಲ್ಲಿ ಕಂಗೋಳಿಸುವ ನಮ್ಮ ವಿದ್ಯಾಮಂದಿರದಲ್ಲಿ ಡಿಸೆಂಬರ್ ೨೨ರ ಶನಿವಾರದಂದು ರಾತ್ರಿ ವಾರ್ಷಿಕ ಕ್ರೀಡೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.ವಿದ್ಯಾರ್ಥಿಗಳು ಪ್ರದರ್ಶಿಸಿದ ಪಥಸಂಚಲನ, ದೇಶಭಕ್ತಿಗೇತೆ, ಶಿಶುನೃತ್ಯ, ಕೋಲಾಟ, ಯೋಗಾನ, ದೀಪಾರತಿ, ಮೈನವಿರೇಳಿಸುವ ಕೂಪಿಕಾ, ಬೆಂಕಿಯೊಂದಿಗಿನ ಸಾಹಸ, ಭಜನೆ, ಶಿಶುಮಂದಿರದ ಮಕ್ಕಳಿಂದ ನೃತ್ಯ, ಕರಾಟೆ, ಮಲ್ಲಕಂಬ, ದೊಂದಿ ಪ್ರದರ್ಶನದೊಂದಿಗೆ ಯಕ್ಷರೂಪಕ, ಸಾಮೂಹಿಕ ಜನಪದ ನೃತ್ಯ (ವೀರಗಾಸೆ), ಸೈಕಲ್ ಮತ್ತು ಬೈಕ್ ಸಾಹಸ, ಮುಂತಾದ ಕಾರ್‍ಯಕ್ರಮಗಳು ಉಪಸ್ಥಿತರಿದ್ಧ ಗಣ್ಯರು ಹಾಗೂ ವೀಕ್ಷಕರ ಮೆಚ್ಚಗೆಗೆ ಪಾತ್ರವಾದವು.ವೇದಿಕೆಯಲ್ಲಿ ಸುಳ್ಯದ ಶಾಸಕರಾದ ಎಸ್.ಅಂಗಾರ, ಮಂಗಳೂರಿನ ನ್ಯಾಯವಾದಿ ಪಿ.ಪಿ.ಹೆಗ್ಡೆ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಎಸ್.ಆರ್ ರಂಗಮೂರ್ತಿ, ಪ್ರತಿನಿಧಿ ರಘುನಾಥ ರಾವ್, ಕೋಶಾಧಿಕಾರಿ ರವೀಂದ್ರ ಪಿ,ಶ್ರೀಮತಿ ಆಶಾ ಬೆಳ್ಳಾರೆ, ಪಂಜ ವಲಯ ಅರಣ್ಯಾಧಿಕಾರಿ ಮನೋಹರ ಚಿತ್ತವಾಡಗಿ, ಸುಬ್ರಮಣ್ಯದ ಉದ್ಯಮಿ ರವಿಕ್ಕೆಪದವು, ಪಶುವೈದ್ಯ ದೇವಿಪ್ರಸಾದ್ ಕಾನತ್ತೂರು, ಪಿಡಬ್ಲ್ಯುಡಿ ಗುತ್ತಿಗೆದಾರ ರಘುರಾಮ್ ಭಟ್ ಉಪ್ಪಂಗಳ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್, ಶ್ರೇಯಂಸ ಕುಮಾರ್ ಜೈನ್ ನೆಲ್ಯಾಡಿ, ದಿನೇಶ್ ಬೆಂಗಳೂರು, ಮುಂತಾದ ಪ್ರಮುಖ ಗಣ್ಯರು ವಿಶೇಷ ಆಹ್ವಾನಿತರಾಗಿ ಆಗಮಿಸಿ ಕಾರ್ಯಕ್ರಮವನ್ನು ವೀಕ್ಷೀಸಿದರು. ವಿದ್ಯಾಲಯದ ಸಂಚಾಲಕ ಮಂಕುಡೆ ವೆಂಕಟರಮಣ ರಾವ್ ಸ್ವಾಗತಿಸಿ ನಿರೂಪಿಸಿದರು.ಅಧ್ಯಕ್ಷ ಕೃಷ್ಣಶೆಟ್ಟಿ ವಂದಿಸಿದರು.

 • ಕ್ರೀಡೋತ್ಸವ 2012 Part 6

  Kredotsava 2012_6A

  Kredotsava 2012_6B

 • ಕ್ರೀಡೋತ್ಸವ 2012 Part 5

  Kredotsava 2012_5A

  Kredotsava 2012_5B

  Kredotsava 2012_5C

 • ಕ್ರೀಡೋತ್ಸವ 2012 Part 4

  Kredotsava 2012_4A

  Kredotsava 2012_4B

  Kredotsava 2012_4C

 • ಕ್ರೀಡೋತ್ಸವ 2012 Part 3

  Kredotsava 2012_3A

  Kredotsava 2012_3B

 • ಕ್ರೀಡೋತ್ಸವ 2012 Part 2

  Kredotsava 2012_2A

  Kredotsava 2012_2B

  Kredotsava 2012_2C

 • ಕ್ರೀಡೋತ್ಸವ 2012 Part 1

  Kredotsava 2012_1A

  Kredotsava 2012_1B

  Kredotsava 2012_1C

Highslide for Wordpress Plugin