ಮ್ಯಾರಥಾನ್ 2012

ಸ್ವಾಮೀ ವಿವೇಕಾನಂದರ ೧೫೦ನೇ ವರ್ಷಾಚರಣೆಯ ಅಂಗವಾಗಿ 2012 ನೇ ದಶಂಬರ್ 25 ರಂದು ಮ್ಯಾರಥಾನ್ ಆಯೋಜಿಸಲಾಯಿತು. ಬೆಳಗ್ಗೆ 8:30ಗೆ ಸರಿಯಾಗಿ ದರ್ಭೆ ವೃತ್ತದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯವರು, ಊರಿನ ಗಣ್ಯರು, ವಿದ್ಯಾರ್ಥಿಗಳು, ಭೋಧಕರು, ಭೋಧಕೇತರು ಸಮಾವೇಶಗೊಂಡರು. ನಂತರ ನಡೆದ  ಸಭಾಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಆರ್ ರಂಗಮೂರ್ತಿ, ವಿವೇಕಾನಂದ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ   ಶ್ರೀ ಕೆ.  ರಾಮ ಭಟ್, ವಿವೇಕಾನಂದ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವಿ ವಿ ಭಟ್, ಐ.ಎ.ಎಸ್, ವಿವೇಕಾನಂದ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ   ಶ್ರೀ ರಾಧಾಕೃಷ್ಣ ಭಕ್ತ ಮತ್ತು ಮುಖ್ಯ ಆತಿಥಿಗಳಾಗಿ ಮಾನ್ಯ ಕ್ರೀಡಾ ಮತ್ತು ಯುವಜನ(ಕರ್ನಾಟಕ ಸರಕಾರ) ಸಚಿವರಾದ ಸನ್ಮಾನ್ಯ ಶ್ರೀ ಅಪ್ಪಚ್ಚು ರಂಜನ್ ಹಾಗೂ ಏಷ್ಯಾಡ್ ಪದಕ ವಿಜೇತ ಭಾರತೀಯ  ಮಹಿಳಾ ಕಬಡ್ಡಿ ತಂಡದ ನಾಯಕಿ ತುಳುನಾಡಿನ ಹೆಮ್ಮೆಯ ಕುವರಿ ಮಮತಾ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಆರ್ ರಂಗಮೂರ್ತಿ ಇವರು ಎಲ್ಲಾರನ್ನೂ ಸ್ವಾಗತಿಸಿದರು ಮತ್ತು ಪ್ರಸ್ತಾವನೆಗೈದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿಯಾದ ಶ್ರೀ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು.

ಚರೈವೇತಿ ಮ್ಯಾರಥಾನ್ ಕಾರ್ಯಕ್ರಮವನ್ನು ದರ್ಭೆ ವೃತ್ತದಲ್ಲಿ ವಿವೇಕಾನಂದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸನ್ಮಾನ್ಯ ಶ್ರೀ ಅಪ್ಪಚ್ಚು ರಂಜನ್ ಇವರು ಉದ್ಘಾಟಿಸಿದರು. ಬೆಳಗ್ಗೆ ಗಂಟೆ 9:00 ಕ್ಕೆ  ಸರಿಯಾಗಿ ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕ್ರೀಡಾಪಟುಗಳು ತಂದ ಕ್ರೀಡಾ ಜ್ಯೋತಿಯಿಂದ ದರ್ಭೆ ವೃತ್ತದಲ್ಲಿದ್ದ ವಿವೇಕಾನಂದ ಭಾವಚಿತ್ರ ಹೊತ್ತ ರಥದಲ್ಲಿ ಇರಿಸಿದ್ದ ಜ್ಯೋತಿಯನ್ನು ಕುಮಾರಿ ಮಮತಾ ಪೂಜಾರಿಯವರು ಉರಿಸುವ ಮೂಲಕ ಮ್ಯಾರಥಾನ್‌ಗೆ ವಿದ್ಯುಕ್ತ ಚಾಲನೆ ನೀಡಿದರು.

ಮಮತಾ ಪೂಜಾರಿಯಿಂದ ಕ್ರೀಡಾ ಜ್ಯೋತಿಯನ್ನು ಪಡೆದ ಕ್ರೀಡಾಪಟುಗಳು ಮುಂದೆ ಸಾಗಿದರೆ ಅವರ ಹಿಂದೆ ಆಡಳಿತ ಮಂಡಳಿಯವರು, ಊರಿನ ಗಣ್ಯರು,  ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಭೋಧಕರು, ಭೋಧಕೇತರು, ಸಾರ್ವಜನಿಕರು ಮ್ಯಾರಥಾನಲ್ಲಿ ಭಾಗವಹಿಸಿ, ಉತ್ಸಾಹದಿಂದ ದರ್ಭೆಯಿಂದ, ವಿವೇಕಾನಂದ ವಿದ್ಯಾ ಸಂಸ್ಥೆಗಳ ಆವರಣದ ತನಕ ಓಡಿ ತಲುಪಿದರು. ಭಾಗವಹಿಸಿದ ಎಲ್ಲರಿಗೂ ಕ್ಯಾಂಪ್ಕೋ ವತಿಯಿಂದ ಕ್ಯಾಪ್ ಮತ್ತು ಚಾಕಲೇಟ್ ವಿತರಿಸಲಾಗಿತ್ತು. ಮ್ಯಾರಥಾನ್ ಓಟದ ದಾರಿಯುದ್ದಕ್ಕೂ ವಿದ್ಯಾರ್ಥಿಗಳಿಗೆ ಪಾನೀಯ ವಿತರಿಸಲಾಯಿತು.

ಮ್ಯಾರಥಾನ್ ಓಟವು ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ಸಮಾಪನಗೊಂಡ ಬಳಿಕ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚಣೆ ಮಾಡಿದ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ  ಕಾರ್ಯನಿರ್ವಹಣಾ ನಿರ್ದೇಶಕರಾದ ಪ್ರೊ|| ಎ.ವಿ ನಾರಾಯಣ ಇವರು ವಂದಿಸಿದರು.

ಪೋಟೋಸ್:

Highslide for Wordpress Plugin