Inauguration of Water Harvesting

Inauguration of Water Harvesting

Friday, July 28th, 2017

On 27-7-2017 Inauguration of Water Harvesting at Vivekananda Campus by Dr. K. Prabhakar Bhat, President, Vivekananda Vidyavardhaka Sangha Puttur (R).

ಕೆಲಸದ ಗುಣಮಟ್ಟ ಹೆಚ್ಚಿಸಲು ಕಾರ್ಯಾಗಾರ ಪೂರಕ: ಡಾ. ಕೃಷ್ಣ ಭಟ್

ಕೆಲಸದ ಗುಣಮಟ್ಟ ಹೆಚ್ಚಿಸಲು ಕಾರ್ಯಾಗಾರ ಪೂರಕ: ಡಾ. ಕೃಷ್ಣ ಭಟ್

Wednesday, January 25th, 2017

ಪುತ್ತೂರು: ಕಾಲೇಜುಗಳ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಕಛೇರಿ ಸಹಾಯಕರು, ಅಟೆಂಡರ್‍ಸ್‌ಗಳೂ ಕೂಡ ಸಂಸ್ಥೆಯ ಆಧಾರಸ್ಥಂಭಗಳು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ನುಡಿದರು. ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕದಿಂದ ಸಂಸ್ಥೆಯ ಕಚೇರಿ ಸಹಾಯಕರು ಮತ್ತು ಅಟೆಂಡರ್‍ಸ್‌ಗಳಿಗೆ ನಡೆಸಿದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಹಂತದಲ್ಲೂ ತಮ್ಮ ಕೆಲಸದ ಗುಣ ಮಟ್ಟವನ್ನು ಹೆಚ್ಚಿಸಲು ಮತ್ತು ನಿರಂತರವಾಗಿ ಕಾರ್ಯದ ಹೊಸ ಅನ್ವೇಷಣೆಗಾಗಿ ಇಂತಹ ಕಾರ್ಯಾಗಾರಗಳು ಉಪಯುಕ್ತ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಪ್ರಾಚಾರ್ಯ […]

ವಿವೇಕ ಉದ್ಯೋಗ ಮೇಳದಲ್ಲಿ ಭಾಗಿಯಾದವರಿಗೆ ಹೃತ್ಪೂರ್ವಕ ವಂದನೆಗಳು

ವಿವೇಕ ಉದ್ಯೋಗ ಮೇಳದಲ್ಲಿ ಭಾಗಿಯಾದವರಿಗೆ ಹೃತ್ಪೂರ್ವಕ ವಂದನೆಗಳು

Saturday, January 14th, 2017
ಅಮೋಘ ಯಶಸ್ಸನ್ನು ದಾಖಲಿಸಿದ ಪುತ್ತೂರಿನ ವಿವೇಕ ಉದ್ಯೋಗ ಮೇಳ

ಅಮೋಘ ಯಶಸ್ಸನ್ನು ದಾಖಲಿಸಿದ ಪುತ್ತೂರಿನ ವಿವೇಕ ಉದ್ಯೋಗ ಮೇಳ

Friday, January 13th, 2017

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಬೃಹತ್ ವಿವೇಕ ಉದ್ಯೋಗ ಮೇಳ – 2017 ಅಮೋಘ ಯಶಸ್ಸನ್ನು ದಾಖಲಿಸಿದೆ. ಆನ್ ಲೈನ್ ಹಾಗೂ ಆಫ್ ಲೈನ್ ನಲ್ಲಿ ಒಟ್ಟಾಗಿ 15,112 ಮಂದಿ ಈ ಉದ್ಯೋಗ ಮೇಳಕ್ಕಾಗಿ ತಮ್ಮನ್ನು ನೋಂದಾವಣೆ ಮಾಡಿಕೊಂಡಿದ್ದರು. ಅವರಲ್ಲಿ 10,020 ಮಂದಿ ಇಂದು ನಡೆದ ಸಂದರ್ಶನಕ್ಕೆ ಆಗಮಿಸಿದ್ದರು. ತಾಂತ್ರಿಕ, ತಾಂತ್ರಿಕೇತರ ಹಾಗೂ ಇತರ ಎಂಬ ಮೂರು ವರ್ಗಗಳಲ್ಲಿ ಸಂದರ್ಶನ ನಡೆಸಲಾಯಿತು. ಈ ಮೂರೂ ವಿಭಾಗಗಳನ್ನು ಒಳಗೊಂಡು ಒಟ್ಟು 3232 ಮಂದಿಯನ್ನು ಶಾರ್ಟ್‌ಲಿಸ್ಟ್ ಮಾಡಲಾಗಿರುವುದು ಈ ಉದ್ಯೋಗ ಮೇಳದ […]

ಕೌಶಲ್ಯಾಭಿವೃದ್ಧಿ ಒಂದು ರಾಷ್ಟ್ರೀಯ ಆಂದೋಲನ: ರಾಜೀವ್ ಪ್ರತಾಪ್ ರೂಢಿ

ಕೌಶಲ್ಯಾಭಿವೃದ್ಧಿ ಒಂದು ರಾಷ್ಟ್ರೀಯ ಆಂದೋಲನ: ರಾಜೀವ್ ಪ್ರತಾಪ್ ರೂಢಿ

Friday, January 13th, 2017

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ನೆಹರು ನಗರದ ವಿವೇಕಾನಂದ ಕ್ಯಾಂಪಸ್‌ನಲ್ಲಿ ಆಯೋಜಿಸಿದ ಬೃಹತ್ ಉದ್ಯೋಗ ಮೇಳದ ಉದ್ಘಾಟನೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ರಾಜೀವ್ ಪ್ರತಾಪ್ ರೂಢಿಯವರನ್ನು ಆಹ್ವಾನಿಸಲಾಗಿತ್ತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಸಂಜೆ ಸಚಿವ ಸಂಪುಟ ಸಭೆ ಕರೆದಿರುವ ಹಿನ್ನಲೆಯಲ್ಲಿ ಅವರಿಗೆ ಉದ್ಯೋಗ ಮೇಳಕ್ಕೆ ಬರಲಾಗಿರಲಿಲ್ಲ. ಆದರೆ ಸ್ಕೈಪ್ ಮೂಲಕ ಉದ್ಯೋಗ ಮೇಳಕ್ಕೆ ಆಗಮಿಸಿದ್ದ ನೆರೆದವರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ದೇಶದಲ್ಲಿ ಕಂಪ್ಯೂಟರ್‌ಗಳು ಬರಲಾರಂಭಿಸಿದ ಹೊತ್ತಿಗೆ ಅವು ಉದ್ಯೋಗಗಳನ್ನು […]

ವಿವೇಕ ಉದ್ಯೋಗ ಮೇಳದಲ್ಲಿ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ

ವಿವೇಕ ಉದ್ಯೋಗ ಮೇಳದಲ್ಲಿ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ

Friday, January 13th, 2017

ದೇಶದ ಒಳಿತಿಗಾಗಿ ಉದ್ಯೋಗ ಸೃಷ್ಟಿಯಾಗಬೇಕು: ಬಿ.ಎಸ್.ಶ್ರೀನಿವಾಸನ್ ಪುತ್ತೂರು: ಭಾರತವು ಇಂದು ಯುವಜನರನ್ನು ಅವಲಂಭಿಸಿಕೊಂಡಿದೆ. ನಮ್ಮಲ್ಲಿ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸತನದ ಕೊರತೆ ಇದು ಹೀಗೆಯೇ ಮುಂದುವರಿದರೆ ಇದ್ದು ಮುಂದಿನ ವರ್ಷಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ದೇಶದ ಒಳಿತಿಗಾಗಿ ಉದ್ಯೋಗದ ಸೃಷ್ಟಿಯಾಗಬೇಕಾಗಿದೆ ಎಂದು ಲಘು ಉದ್ಯೋಗ ಭಾರತೀಯ ಉಪಾಧ್ಯಕ್ಷ ಬಿ ಎಸ್ ಶ್ರೀನಿವಾಸನ್ ಹೇಳಿದರು. ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶುಕ್ರವಾರ ವಿವೇಕಾನಂದ ಕ್ಯಾಂಪಸ್‌ನಲ್ಲಿ ಆಯೋಜಿಸಲಾದ ಬೃಹತ್ ಉದ್ಯೋಗ ಮೇಳದ ಸಂದರ್ಭದಲ್ಲಿ ನಡೆದ ಸ್ವ ಉದ್ಯೋಗ ಮಾಹಿತಿ […]

ಪುತ್ತೂರಿನಲ್ಲಿ ವಿವೇಕ ಉದ್ಯೋಗ ಮೇಳಕ್ಕೆ ಚಾಲನೆ ; ನೂತನ ಕಟ್ಟಡ ಲೋಕಾರ್ಪಣೆ

ಪುತ್ತೂರಿನಲ್ಲಿ ವಿವೇಕ ಉದ್ಯೋಗ ಮೇಳಕ್ಕೆ ಚಾಲನೆ ; ನೂತನ ಕಟ್ಟಡ ಲೋಕಾರ್ಪಣೆ

Friday, January 13th, 2017

ದೇಶದ ಆರ್ಥಿಕತೆ ಹಾಗೂ ಆಡಳಿತಕ್ಕೊಂದು ಶಿಸ್ತು ಬಂದಿದೆ : ಡಿ.ವಿ.ಸದಾನಂದ ಗೌಡ ಪುತ್ತೂರು: ಯಾವುದೇ ದೇಶ ಪ್ರಬಲವಾಗಿ ನಿರ್ಮಾಣವಾಗಭೇಕಾದರೆ ಅಲ್ಲಿನ ಆರ್ಥಿಕತೆ ಶಿಸ್ತಿನಿಂದ ಕೂಡಿರಬೇಕು ಹಾಗೂ ಸಮರ್ಥ ಆಡಳಿತ ವ್ಯವಸ್ಥೆ ಇರಬೇಕು. ಸುದೈವವಶಾತ್ ನಮ್ಮ ದೇಶಕ್ಕೆ ಈಗ ಇವೆರಡೂ ಲಭ್ಯವಾಗಿದೆ. ಭಾರತದಲ್ಲಿ ಯುವ ಶಕ್ತಿ ಅಪಾರವಾಗಿದ್ದರೂ ಅದರ ಸದ್ಬಳಕೆಯಲ್ಲಿ ಕಳೆದ ಆರೇಳು ದಶಕಗಳಿಂದ ವಿಫಲರಾಗಿದ್ದೇವೆ. ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿಯವರು ವಿಶೇಷ ಆಸ್ಥೆ ವಹಿಸಿ ಸರಿಯಾದ ಜಾಗದಲ್ಲಿ ಸರಿಯಾದ ಯುವಶಕ್ತಿಯನ್ನು ವಿನಿಯೋಗಿಸುವ ಕಾರ್ಯ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಾಂಖ್ಯಿಕ […]

ಆಹ್ವಾನ ಪತ್ರಿಕೆ : ವಿವೇಕ ಉದ್ಯೋಗ ಮೇಳ 2017

ಆಹ್ವಾನ ಪತ್ರಿಕೆ : ವಿವೇಕ ಉದ್ಯೋಗ ಮೇಳ 2017

Friday, January 6th, 2017

ಪತ್ರಿಕಾಗೋಷ್ಠಿ : ವಿವೇಕಾನಂದ ಜಯಂತಿ ಆಚರಣೆ & ರೇಡಿಯೋ ಪಾಂಚಜನ್ಯ 90.8 ಎಫ್.ಎಂ ಲೋಕಾರ್ಪಣೆ

Wednesday, January 4th, 2017

ಮಂಗಳೂರು :  ದ್ವನಿ ಮಾಧ್ಯಮದ ಮೂಲಕ ಸಮುದಾಯ ಸಬಲೀಕರಣದ ಸಂದೇಶವನ್ನು ಪ್ರಸಾರ ಮಾಡುವ ಸದುದ್ದೇಶದಿಂದ, ಸಮುದಾಯದಿಂದ, ಸಮುದಾಯಕ್ಕಾಗಿ, ಸಮುದಾಯವೇ ನಡೆಸುವ ರೇಡಿಯೋ ಪಾಂಚಜನ್ಯ 90.8 ಎಫ್.ಎಂ ಅನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ೧೦೦ ವರ್ಷಗಳು ಶಿಸ್ತುಬದ್ಧ ಇತಿಹಾಸದ ಹಿನ್ನೆಲೆ ಇರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಪುತ್ತೂರಿನ ಜನತೆಗಾಗಿ ಪರಿಚಯಿಸುತ್ತಿದೆ. ನಮ್ಮ ಸಮಾಜದಲ್ಲಿ ಅಕ್ಷರ ಮಾಧ್ಯಮದಲ್ಲಿ ಎಷ್ಟು ಜ್ಞಾನ ಸಂಗ್ರಹಣೆಯಾಗಿದೆಯೋ ಅಷ್ಟೇ ಆಳವಾದ ವ್ಯಾಪಕವಾದ, ಸಾಂಪ್ರದಾಯಿಕ ವಿದ್ವತ್ತು ಜನರ ಮಾತುಗಳಲ್ಲಿದ್ದು, ಅದನ್ನು ಜನಾಂಗದಿಂದ ಜನಾಂಗಕ್ಕೆ ದಾಟಿಸುವ ಉದ್ದೇಶ ಹಾಗೂ ಒಂದು […]

ವಿವೇಕಾನಂದ ಕ್ಯಾಂಪಸ್‌ನಲ್ಲಿ ಬೃಹತ್ ಉದ್ಯೋಗಮೇಳಕ್ಕೆ ಸಿದ್ಧತೆ

ವಿವೇಕಾನಂದ ಕ್ಯಾಂಪಸ್‌ನಲ್ಲಿ ಬೃಹತ್ ಉದ್ಯೋಗಮೇಳಕ್ಕೆ ಸಿದ್ಧತೆ

Friday, November 11th, 2016

ಮುನ್ನೂರಕ್ಕೂ ಅಧಿಕ ಕಂಪೆನಿಗಳ ಸಂಪರ್ಕ ; ನೋಂದಾವಣೆ ಆರಂಭ ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಇದೇ ಪ್ರಥಮ ಬಾರಿಗೆ ನೆಹರು ನಗರದ ತನ್ನ ವಿಶಾಲ ಕ್ಯಾಂಪಸ್‌ನಲ್ಲಿ ಉದ್ಯೋಗ ಮೇಳವೊಂದನ್ನು ಆಯೋಜಿಸುತ್ತಿದೆ. ಗ್ರಾಮೀಣ ಪ್ರದೇಶದ ಯುವ ಸಮೂಹ ಎದುರಿಸುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ಲಕ್ಷದಲ್ಲಿರಿಸಿ ಈ ಉದ್ಯೋಗ ಮೇಳವನ್ನು ರೂಪಿಸಲಾಗಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಮೂಲ ಆಶಯವಾದ ಗ್ರಾಮಾಭಿವೃದ್ಧಿಯ ಕನಸು ಈ ಉದ್ಯೋಗಮೇಳದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ಈ ಶಿಕ್ಷಣ ಕೇಂದ್ರ ವಿವಿಧ ಗ್ರಾಮಗಳನ್ನು ದತ್ತು […]

Highslide for Wordpress Plugin