• 08251 236599
  • 08251 236444
  • vvsputtur@gmail.com

ಬೇಸಿಗೆ ಸಂಸ್ಕಾರ ಶಿಬಿರ

ಉಪ್ಪಿನಂಗಡಿ : ಎಳೆಯ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಅವರನ್ನು ಭವ್ಯರಾಷ್ಟ್ರದ ದಿವ್ಯ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವೆಂದು ಯುವ ಸಾಮಾಜಿಕ ಕಾರ್ಯಕರ್ತ ರಾಜ್‌ಗೋಪಾಲ ಹೆಗ್ಡೆ ತಿಳಿಸಿದರು.

ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ನಡೆದ ಒಂದುವಾರದ ಬೇಸಿಗೆ ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ಉದ್ಯಮಿ ಹರ್ಷಕುಮಾರ್ ಜೈನ್ ಮಾತನಾಡಿ, ಪಾಶ್ಚ್ಯಾತ್ಯ ಸಂಸ್ಕೃತಿಯ ಪ್ರಭಾವದಿಂದ ದುರ್ಬಲವಾದ ಮನೆ-ಮನಸ್ಸುಗಳನ್ನು ಹಳಿಗೆ ತರಲು ನಮ್ಮ ಭಾರತೀಯ ಸಂಸ್ಕಾರವನ್ನು ಎಳೆಯ ಮಕ್ಕಳಿಗೆ ನೀಡಲೇಬೇಕಾದ ಅನಿವಾರ್ಯತೆ ಇದೆ. ಈ ಸೂಕ್ಷ್ಮತೆಯನ್ನು ಮನಗಂಡು ಹಿಂದೂ ಸೇವಾ ಪ್ರತಿಷ್ಠಾನ ಸಮಾಜದ ಯುವ ಸಮೂಹಕ್ಕೆ ವಿವಿಧ ಸ್ತರದಲ್ಲಿ ಸಂಸ್ಕಾರ ನೀಡಲು ಮುಂದಾಗಿರುವುದು ಸಂತಸದ ವಿದ್ಯಾಮಾನ. ಅದಕ್ಕೆ ಪೂರಕ ಬೆಂಬಲ ನೀಡಬೇಕಾದುದ್ದು ನಾಗರಿಕ ಸಮಾಜದ ಆದ್ಯಕರ್ತವ್ಯ ಎಂದು ತಿಳಿಸಿದರು.

ಶಿಶು ಮಂದಿರದ ಅಧ್ಯಕ್ಷ ಮನೋಜ್‌ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿಶು ಮಂದಿರದ ಮಾತಾಜಿ ಭಗಿನಿ ಪುಷ್ಪಲತಾ ಸ್ವಾಗತಿಸಿದರು.ಶಿಬಿರದಲ್ಲಿ ಶ್ರೀಮತಿ ಪುಷ್ಪಲತಾ ತಿಲಕ್, ಪುರುಷೋತ್ತಮ, ಹರಿರಾಮಚಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.

Highslide for Wordpress Plugin